ಚೀನಾದೊಂದಿಗೆ ಸರ್ಕಾರದ ವ್ಯರ್ಥ ಮಾತುಕತೆಯಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ: ರಾಹುಲ್ ಗಾಂಧಿ
ಕೇಂದ್ರ ಸರ್ಕಾರವು ಭಾರತದ ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟು ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಆರೋಪಿಸಿದ್ದು, ಚೀನಾದೊಂದಿಗಿನ ಸರ್ಕಾರದ ಮಾತುಕತೆ ‘ವ್ಯರ್ಥ’ ಎಂದು ಕರೆದಿದ್ದಾರೆ.
“ಗೊಗ್ರಾ-ಹಾಟ್ ಸ್ಪ್ರಿಂಗ್ಸ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶಗಳ ಮೇಲೆ ಚೀನಾದ ಆಕ್ರಮಣವು ಡಿಬಿಒ ವಾಯುನೆಲೆ ಸೇರಿದಂತೆ ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ನೇರ ಬೆದರಿಕೆಯೊಡ್ಡಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪೂರ್ವ ಲಡಾಖ್‌ನ ಹಾಟ್ ಸ್ಪ್ರಿಂಗ್ಸ್, ಗೊಗ್ರಾ ಮತ್ತು ಡೆಪ್ಸಾಂಗ್‌ನಿಂದ ಚೀನಾ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದೆ ಎಂಬ ವರದಿಗಳು ಬಂದ ನಂತರ ರಾಹುಲ್‌ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಳಿ ನಡೆಸಿದ್ದಾರೆ.
Chinese occupation of Gogra-Hot Springs & Depsang plains is a direct threat to India’s strategic interests including the DBO airstrip.
National security massively jeopardised by GOI’s wasteful talks.
Our nation deserves better.
— Rahul Gandhi (@RahulGandhi) April 19, 2021
ಪೂರ್ವ ಲಡಾಖ್‌ನ ಇತರ ಘರ್ಷಣಾ ಸ್ಥಳಗಳಿಂದ ಚೀನಾವನ್ನು ಹಿಂದೆ ಸರಿಸುವಲ್ಲಿ ಚೀನಾದೊಂದಿಗಿನ ಮಾತುಕತೆಗಳು ಏಕೆ ಫಲಿತಾಂಶ ನೀಡಲಿಲ್ಲ ಎಂದು ಕಾಂಗ್ರೆಸ್ ಭಾನುವಾರ ಸರ್ಕಾರವನ್ನು ಪ್ರಶ್ನಿಸಿದೆ.
ಪೂರ್ವ ಲಡಾಖ್‌ನ ಹಾಟ್ ಸ್ಪ್ರಿಂಗ್ಸ್, ಗೊಗ್ರಾ ಮತ್ತು ಡೆಪ್ಸಾಂಗ್‌ನ ಉಳಿದ ಘರ್ಷಣೆ ಸ್ಥಳಗಳಲ್ಲಿ ಸೈನ್ಯವನ್ನು ನಿಯೋಜಿಸುವ ಬಗ್ಗೆ ಎರಡೂ ಕಡೆಯವರು ಸುಧೀರ್ಘ ಚರ್ಚೆಯನ್ನು ನಡೆಸಿದ್ದಾರೆ. ಗಡಿ ಭಾಗದಲ್ಲಿ ಸ್ಥಿರತೆಯನ್ನು ಕಾಪಾಡಲು ಉಭಯ ರಾಷ್ಟ್ರಗಳು ಬಿಕ್ಕಟ್ಟನ್ನು ಜಂಟಿಯಾಗಿ ಪರಿಹರಿಸಲು ಒಪ್ಪಿಕೊಂಡಿದ್ದಾರೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ನಮ್ಮಲ್ಲಿಯೇ ಲಸಿಕೆ ಕೊರತೆ ಇರುವಾಗ ವಿದೇಶಗಳಿಗೆ 05 ಕೋಟಿ ಡೋಸ್ ರಫ್ತುಮಾಡಿದ್ದರ ಅರ್ಥವೇನು?: ಪಂಜಾಬ್ ಸಿಎಂ

