ಹಿರೇಕೆರೂರು ಕ್ಷೇತ್ರದ ಸೀಲ್‌‌ಡೌನ್‌ಗೆ ಸಚಿವ ಬಿ.ಸಿ.ಪಾಟೀಲ್‌ ಒತ್ತಾಯ!

ಕೊರೊನಾ ಸೋಂಕಿನ ಹಾವಳಿ ಹೆಚ್ಚಾಗುತ್ತಿದ್ದು, ಹಿರೇಕೆರೂರು ಕ್ಷೇತ್ರದಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಜನರು ಆತಂಕಗೊಂಡಿದ್ದು, ಹಿರೇಕೆರೂರನ್ನು ಸೀಲ್ ಡೌನ್ ಮಾಡುವಂತೆ ಕೃಷಿ ಸಚಿವ, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.

ಕೊರೊನಾ ಸೋಂಕಿನಿಂದ ದೂರ ಉಳಿಯಲು ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್ ಧರಿಸುವುದರ ಜೊತೆಗೆ ಜನತೆ ಎಚ್ಚರದಿಂದ ಇರಬೇಕು ಎಂದು ತಿಳಿಸಿದ್ದಾರೆ. ಗಿರಿಧಾಮಗಳ ಪ್ರವಾಸಕ್ಕೆ ನಿರ್ಬಂಧ ಹೇರಿದ್ದು, ಕ್ಷೇತ್ರದ ಗ್ರಾಮೀಣ ಭಾಗಗಳಾದ ಗುಡ್ಡದಮಾದಾಪುರ, ಕೋಡ, ಸುತ್ಕೋಟೆ, ಎಮ್ಮಿಗನೂರು ಸೇರಿದಂತೆ ವಿವಿಧ ಭಾಗಗಳಗೂ ನಿರ್ಭಂದ ವಿಧಿಸಲಾಗಿದೆ.

ಜನತೆ ಆದಷ್ಟು ಎಚ್ಚೆತ್ತುಕೊಂಡಿರಬೇಕು. ಯಾರಿಗಾದರೂ ಸೋಂಕು ತಗುಲಿದ ಶಂಕೆ ವ್ಯಕ್ತವಾದಲ್ಲಿ ಅಥವಾ ಶೀತ,ಜ್ವರ,ಕೆಮ್ಮಿನಂತಹ ಲಕ್ಷಣ ಕಂಡುಬಂದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ತಪಾಸಣೆಗೊಳಪಡಬೇಕು .ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ನಾಯಕರ ನಂತರ ಬಿಜೆಪಿ ಸಚಿವ ಬಿಸಿ ಪಾಟೀಲ್ ಹೀರೆಕೆರೂರು ಕ್ಷೇತ್ರವನ್ನು ಲಾಕ್ ಡೌನ್ ಮಾಡುವಂತೆ ಮನವಿ ಮಾಡಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಸೇರಿದಂತೆ ಹಲವು ಶಾಸಕರು ಮತ್ತೆ ರಾಜ್ಯವನ್ನು ಲಾಕ್ ಡೌನ್ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights