ಭಾರತದ ಗಡಿಯಲ್ಲಿ 20 ಸಾವಿರ ಪಾಕ್‌ ಸೈನಿಕರ ನಿಯೋಜನೆ: ಚೀನಾದೊಂದಿಗೆ ಕೈ ಜೋಡಿಸಿತಾ ಪಾಕಿಸ್ತಾನ!

ಘರ್ಷಣೆಯಿಂದ ಉದ್ಭವಿಸಿದ ಭಾರತ ಮತ್ತು ಚೀನಾ ಸಂಘರ್ಷ ಇನ್ನೂ ಬಿಸಿಯಾಗಿಯೇ ಇದೆ. ಚೀನಾ ಗಡಿ ಭಾಗದಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ ಮಾಡಿದ್ದು, ಭಾರತದ ಸೇನೆ ಹೈ ಅಲರ್ಟ್‌ನಲ್ಲಿ ಕಾದು ಕುಳುಕೊಳ್ಳುವಂತೆ ಮಾಡಿದೆ. ಈಗ ಚೀನಾದ ಹಾದಿಯಲ್ಲೇ ಸಾಗಿರುವ ಪಾಕಿಸ್ತಾನವು ಭಾರತದ ಗಡಿ ಭಾಗದಲ್ಲಿ 20 ಸಾವಿರ ಹೆಚ್ಚುವರಿ ಸೈನಿಕರನ್ನು ನಿಯೋಜನೆ ಮಾಡಿದೆ.

ಗಡಿ ಭಾಗದಲ್ಲಿ ಚೀನಾ-ಭಾರತ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ 20 ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಭಾರತ ನೀಡಿದ ತಿರುಗೇಟಿಗೆ 43ಕ್ಕೂ ಹೆಚ್ಚು ಚೀನಾ ಸೈನಿಕರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ, ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ. ಈ ಘಟನೆ ನಂತರ ಎರಡೂ ದೇಶಗಳ ನಡುವೆ ಉದ್ವಿಘ್ನ ಪರಿಸ್ಥಿತಿ ಉಂಟಾಗಿತ್ತು. ಈ ಬೆನ್ನಲ್ಲೇ ಪಾಕ್​ ಕೂಡ ಕುತಂತ್ರ ನಡೆಸಲು ಮುಂದಾಗಿದೆ ಎನ್ನಲಾಗಿದೆ.

ಪಾಕ್​ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್​-ಬಾಲ್ಟಿಸ್ತಾನ್​ ಭಾಗದಲ್ಲಿ ಚೀನಾ ಸೇನೆ ಹೆಚ್ಚಿಸಿದೆ ಎನ್ನಲಾಗಿದೆ. ಇನ್ನು, ಈ ಭಾಗದಲ್ಲಿ ಪಾಕಿಸ್ತಾನದ ರೇಡಾರ್​ಗಳು ಸಂಪೂರ್ಣವಾಗಿ ಆಕ್ಟಿವ್​ ಆಗಿ ಕಾರ್ಯ ನಿರ್ವಹಿಸುತ್ತಿವೆ.

ಪಾಕ್​ ಮೂಲದ ಉಗ್ರ ಸಂಘಟನೆ ಜೊತೆ ಚೀನಾ ಮಾತುಕತೆ ನಡೆಸುತ್ತಿದೆ ಎಂದು ಆಂಗ್ಲ ಮಾಧ್ಯಮವೊಂದು ಹೇಳಿದೆ. ಇದು ನಿಜವೇ ಆದಲ್ಲಿ, ಗಡಿಯಲ್ಲಿ ಭಾರತಕ್ಕೆ ಉಪಟಳ ನೀಡಲು ಚೀನಾ-ಪಾಕ್​ ಒಂದಾಗಿರುವುದು ಸ್ಪಷ್ಟವಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights