ಡೆತ್ ನೋಟ್ ಬರೆದಿಟ್ಟು ಸ್ಯಾಂಡಲ್ ವುಡ್ ನಟಿ ಸವಿ ಮಾದಪ್ಪ ಆತ್ಮಹತ್ಯೆ!
ದೇಶಕ್ಕೆ ಕೊರೊನಾ ಆವರಿಸಿದ್ದೇ ಆವರಿಸಿದ್ದು ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ಸಿನಿ ತಾರೆಯರು ಹೊರತಾಗಿಲ್ಲ. ಬಾಲಿವುಡ್ ಸುಶಾಂತ್ ಆತ್ಮಹತ್ಯೆ ಬಳಿಕ ಸಾಕಷ್ಟು ಸೆಲೆಬ್ರಿಟಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಸ್ಯಾಂಡಲ್ ವುಡ್ ನಟಿ ಸವಿ ಮಾದಪ್ಪ ಅವರು ನೇಣಿಗೆ ಶರಣಾಗಿದ್ದಾರೆ.
ಕುಂಬಗೋಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ದೊಡ್ಡ ಬೆಲೆ ಗ್ರಾಮದ ಅಪಾರ್ಟಮೆಂಟ್ ನಲ್ಲಿ ಸವಿ ಮಾದಪ್ಪ (25) ನೇಣಿಗೆ ಶರಣಾಗಿದ್ದಾರೆ. ಸವಿ ಮಾದಪ್ಪ ತಮ್ಮ ಸ್ನೇಹಿತ ವಿವೇಕ್ ನೊಂದಿಗೆ ಈ ಮನೆಯಲ್ಲಿದ್ದರು. ವಿವೇಕ್ ಊಟ ತರಲು ಹೋದಾಗ ಸವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತ: ಸವಿ ಮಾದಪ್ಪ ಕೊಡಗು ಜಿಲ್ಲೆಯ ಕುಶಲ್ ನಗರದವರು. ‘ಚೌಕಟ್ಟು’, ‘ಫನ್’ ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚಿಗೆ ಅವರು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದರು. ‘ನಿಮ್ಮ ಜೀವನದ ಬಗ್ಗೆ ಗುರಿ ಬಗ್ಗೆ ಹೆಚ್ಚು ಫೋಕಸ್ ಮಾಡಿದರೆ ನೀವು ನಿಮ್ಮ ಜೀವನದಲ್ಲಿ ಸಾಕಷ್ಟು ಜನರನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಅವರು ಬರೆದುಕೊಂಡಿದ್ದರು. ಇದಾದ ಬೆನ್ನಲ್ಲೇ ಅವರು ನೇಣಿಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೂ ಮುನ್ನ ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ಯಾವ ವಿಚಾರಗಳನ್ನು ಬರೆದಿದ್ದಾರೆ ಎನ್ನುವ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.