ಮತ್ತೆ ಅನ್ನದಾತರ ಬಗ್ಗೆ ಕೇವಲವಾಗಿ ಮಾತನಾಡಿದ ಕಂಗನಾ ಕಾಲೆಳೆದ ನೆಟ್ಟಿಗರು!

ದೆಹಲಿ ಗಡಿ ಭಾಗದಲ್ಲಿ ಕಳೆದ ಎರಡು ತಿಂಗಳಿಗಿಂತಲೂ ಹೆಚ್ಚು ಕಾಲ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಬಗ್ಗೆ ನಟಿ ಕಂಗನಾ ಕೇವಲವಾಗಿ ಮಾತನಾಡಿದ್ದಾರೆ.

ರೈತರ ಪ್ರತಿಭಟನೆ ಬೆಂಬಲಿಸಿ ಪಾಪ್ ಗಾಯಕಿ ರಿಹಾನಾ ಟ್ವೀಟ್ ಮಾಡಿದ್ದರು. ಈ ವೇಳೆ ಪ್ರತಿಕ್ರಿಯಿಸಿದ ಕಂಗನಾ ರಣಾವತ್, ಅವರು ರೈತರಲ್ಲ ಭಯೋತ್ಪಾದಕರು ಎಂದು ಹೇಳಿದ್ದಾರೆ.

ಮಾತ್ರವಲ್ಲದೇ ರೈತರ ಪ್ರತಿಭಟನೆ ಕುರಿತು ಟ್ವೀಟ್ ಮಾಡಿರುವ ನಟಿ ಮೀಯಾ ಖಲೀಫಾ, ಪ್ರತಿಭಟನಾ ಸ್ಥಳದಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸೋದು ಮಾನವ ಹಕ್ಕುಗಳ ಉಲ್ಲಂಘನೆ. ನಾನು ರೈತರ ಜೊತೆಯಲ್ಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ರಿಹಾನಾ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕಂಗನಾ ರಣಾವತ್, ಅಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರು ಅಲ್ಲ ಅವರು ಭಯೋತ್ಪಾದಕರು. ಆದ್ರೆ ಯಾರು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಇವರು ಭಾರತವನ್ನ ವಿಭಜಿಸುವ ಕೃತ್ಯಕ್ಕೆ ಮುಂದಾಗಿದ್ದಾರೆ. ವಿಭಜನೆಯಾದ ಭಾರತವನ್ನ ಚೀನಾ ಅಕಿಕ್ರಮಿಸಿಕೊಳ್ಳಲಿ ಎಂಭುವುದು ಇವರ ಉದ್ದೇಶ. ನೀವು ಮೂರ್ಖರಾಗಿಯೇ ಕುಳಿತುಕೊಳ್ಳಿ. ಆದ್ರೆ ನಾವು ರಾಷ್ಟ್ರವನ್ನು ಮಾರಾಟ ಮಾಡಲು ಬಿಡುವುದಿಲ್ಲ ೆಂದು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.

ಕಂಗನಾ ಟ್ವೀಟ್ ವಿರುದ್ಧ ಜನ ತಿರುಗಿ ಬಿದ್ದಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಗನಾ ರನೌತ್ ಟ್ವಿಟ್ಟರ್ ನಲ್ಲಿ ರಿಹಾನ್ನಾಳನ್ನು ಅವಮಾನಿಸಿದ ನಂತರ, ಕೆಲವರು ಕಂಗನಾ ಅವಮಾನಿಸುವ ಚಿತ್ರಗಳನ್ನು ಟ್ರೋಲ್ ಮಾಡಿದ್ದಾರೆ. ಇಂಟರ್ನೆಟ್ ಬಳಕೆದಾರರು 100 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ರಿಹಾನ್ನಾ ಅವರೊಂದಿಗೆ ಕೇವಲ 3 ಮಿಲಿಯನ್ ಫಾಲೋವರ್ಸ್ ಹೊಂದಿರುವ ಕಂಗನಾ ಅವರನ್ನು ಅಪಹಾಸ್ಯ ಮಾಡಿದ್ದಾರೆ.

ಇಂಟರ್ನೆಟ್ ರಿಯಾಕ್ಟ್ ಹೀಗಿದೆ…

https://twitter.com/AshishM31973480/status/1356700070209597448?ref_src=twsrc%5Etfw%7Ctwcamp%5Etweetembed%7Ctwterm%5E1356700070209597448%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fmovies%2Fcelebrities%2Fstory%2Fkangana-ranaut-calls-rihanna-fool-for-tweet-on-farmers-protest-gets-massively-trolled-1765400-2021-02-03

https://twitter.com/TheProfessor199/status/1356700291807072257?ref_src=twsrc%5Etfw%7Ctwcamp%5Etweetembed%7Ctwterm%5E1356700291807072257%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fmovies%2Fcelebrities%2Fstory%2Fkangana-ranaut-calls-rihanna-fool-for-tweet-on-farmers-protest-gets-massively-trolled-1765400-2021-02-03

https://twitter.com/hindey621/status/1356685746078425092?ref_src=twsrc%5Etfw%7Ctwcamp%5Etweetembed%7Ctwterm%5E1356685746078425092%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fmovies%2Fcelebrities%2Fstory%2Fkangana-ranaut-calls-rihanna-fool-for-tweet-on-farmers-protest-gets-massively-trolled-1765400-2021-02-03

 

 

 

 

Spread the love

Leave a Reply

Your email address will not be published. Required fields are marked *