ಶಿವಮೊಗ್ಗ ಸ್ಪೋಟ : ಐವರ ದುರ್ಮರಣ – ಮೃತರ ಗುರುತು ಪತ್ತೆ…!
ಶಿವಮೊಗ್ಗ ಜಿಲ್ಲೆಯ ಹುಣಸೋಡುವಿನ ಗಣಿಪ್ರದೇಶದಲ್ಲಿ ನಿನ್ನೆ ರಾತ್ರಿ ಜಿಲಿಟಿನ್ ಸ್ಪೋಟದಿಂದ ದುರ್ಮರಣ ಹೊಂದಿದ ಐವರಲ್ಲಿ ಮೂವರ ಗುರುತು ಪತ್ತೆ ಹಚ್ಚಲಾಗಿದೆ.
ಹೌದು.. ಗಣಿಪ್ರದೇಶದಲ್ಲಿ ನಿನ್ನೆ ರಾತ್ರಿ 10.25ರ ಸುಮಾರಿಗೆ ಸಂಭವಿಸಿದ ಸ್ಪೋಟದಲ್ಲಿ ಮೃತರನ್ನು ಶಿವಮೊಗ್ಗದ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ಮಂಜುನಾಥ್(40) ಮತ್ತು ಪ್ರವೀಣ್(45) ಎಂದು ಹೇಳಲಾಗುತ್ತಿದೆ. ಇನ್ನೋರ್ವ ವ್ಯಕ್ತಿಯನ್ನು ಆಂಧ್ರಪ್ರದೇಶದ ಮೂಲದ ಪವನ್ ಎಂದು ಗುರುತಿಸಲಾಗಿದೆ. ಇನ್ನುಳಿದಂತೆ ಇಬ್ಬರ ಮೃತ ದೇಹದ ಗುರುತು ಪತ್ತೆಯಾಗಿಲ್ಲ. ಘಟನೆಯಲ್ಲಿ ಇನ್ನೋರ್ವ ವ್ಯಕ್ತಿಯ ದೇಹ ಸಿಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಗಣಿ ಮತ್ತು ಭೀವಿಜ್ಞಾನ ಸಚಿವ ಮುರಗೇಶ್ ನಿರಾಣಿ, ” ಈಗಾಗಲೇ 5 ಲಕ್ಷ ಪರಿಹಾರ ಮತ್ತು ಕಾರ್ಮಿಕ ಇಲಾಖೆಯಿಂದ ಸಹಾಯ ಕೂಡ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಆರೋಪಿಗಳು ಯಾರೇ ಆಗಿರಬಹುದು ಅವರಿಗೆ ಶಿಕ್ಷೆ ಆಗಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗುತ್ತದೆ” ಎಂದು ಹೇಳಿದ್ದಾರೆ.
ಸ್ಪೋಟದ ತೀವ್ರತೆ ಮನೆ ಗೋಡೆ, ಸೀಟು, ಬಾಗಿಲು, ಕಿಟಕಿ ಗಾಜುಗಳು ಬಿರುಕು ಬಿಟ್ಟಿವೆ. ಕೆಲ ಮನೆಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿವೆ. ಹುಣಸೋಡು ಗ್ರಾಮವೇ ಬೆಚ್ಚಿ ಬಿದ್ದಿದೆ. ಮೂಕಪ್ರಾಣಿಗಳ ಸ್ಥಿತಿಯಂತೂ ಹೇಳತೀರದ್ದು. ಒಂದುಕಡೆ ಕಾರ್ಮಿಕರು ದುರ್ಮರಣ ಹೊಂದಿದರೆ, ಜನರಲ್ಲಿ ಭಯದ ವಾತಾವರಣ ಮನೆ ಮಾಡಿದೆ. ಸ್ಫೊಟದ ಶಬ್ದಕ್ಕೆ ಜಾನುವಾರುಗಳು ಕೂಡ ಹಳ್ಳಿ ಬಿಟ್ಟು ಭಯದಿಂದ ಓಡಿ ಹೋಗಿವೆ. ಅವುಗಳ ಹುಡುಕಾಟಕ್ಕೆ ಗ್ರಾಮದ ಜನ ಮುಂದಾಗಿದ್ದಾರೆ.