Fact check: ಒಣ ಶುಂಠಿಯಿಂದ ಓಮಿಕ್ರಾನ್ ಸೋಂಕು ತಡೆಗಟ್ಟಬಹುದು ಎಂಬುದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ

ಇತ್ತೀಚಿನ COVID ರೂಪಾಂತರವಾದ ಓಮಿಕ್ರಾನ್‌ ಸೋಂಕನ್ನು ತಡೆಗಟ್ಟವ “ತಂತ್ರಜ್ಞಾನ” ವನ್ನು ವ್ಯಕ್ತಿಯೊಬ್ಬ ಕಂಡು ಹಿಡಿದಿದ್ದಾರೆ,  ಒಣಗಿದ ಶುಂಠಿಯಿಂದ ಸೋಂಕು ಬಾರದಂತೆ ತಡೆಗಟ್ಟಬಹುದು ಎಂಬ 2-ನಿಮಿಷದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈಗಾಗಲೇ ಸಾವಿರಾರು ಒಣಗಿದ ಶುಂಠಿಯ ಪ್ಯಾಕೆಟ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದ್ದು ಮತ್ತು ಆ ವ್ಯಕ್ತಿಯನ್ನು ಡಾ ಜರೀರ್ ಉದ್ವಾಡಿಯಾ ಅಥವಾ ಡಾ ಸುಶೀಲ್ ರಜ್ದಾನ್ ಎಂದು ಪ್ರತಿಪಾದಿಸಲಾಗಿದೆ.  ಫೇಸ್‌ಬುಕ್ ಪೇಜ್ ಕಾಶ್ಮೀರ್ ಎಕ್ಸ್‌ಪ್ರೆಸ್ ನ್ಯೂಸ್, 4 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, ಅವರು ಡಾ ರಜ್ದನ್ ಎಂದು ಹೇಳಿಕೊಂಡು ಈ ವಿಡಿಯೋ ಹಂಚಿಕೊಂಡಿದ್ದಾರೆ.

ಒಣ ಶುಂಠಿಯಿಂದ ರೂಪಾಂತರಿ ಕೋವಿಡ್ ಅನ್ನು ತಡಗಟ್ಟಲು ಸಾಧ್ಯ ಎನ್ನುವ ಈ ಪೋಸ್ಟ್ ವಾಟ್ಸಾಪ್‌ಗಳಲ್ಲಿಯೂ ಸಹ ಸಾಕಷ್ಟು ಷೇರ್ ಆಗುತ್ತಿದೆ.

ಫ್ಯಾಕ್ಟ್ ಚೆಕ್

ಈ ಪೋಟೋದಲ್ಲಿರುವ ವ್ಯಕ್ತಿಯನ್ನು ಬೇರೆ ಹೆಸರಿನ ವೈದ್ಯರೊಂದಿಗೆ ಸೇರಿಸಿ ತಪ್ಪಾಗಿ ಗುರುತಿಸಲಾಗಿದೆ. ಕೆಂಪು ಗೆರೆಯೊಳಗೆ ತೋರಿಸಿರುವಂತೆ. ಇದನ್ನು ಪರಿಶೀಲಿಸಲು ನಮ್ಮ ಏನ್ ಸುದ್ದಿ. ಕಾಮ್  ಇಬ್ಬರು ವೈದ್ಯರ ಹೆಸರನ್ನು ಬಳಸಿಕೊಂಡು ಕೀವರ್ಡ್  ಸರ್ಚ್ ನಡೆಸಿತು. ಆಗ ನಮಗೆ ಸಿಕ್ಕ ಮಾಹಿತಿ ಪ್ರಕಾರ ಒಬ್ಬರು ಡಾ ಉದ್ವಾಡಿಯಾ ಮುಂಬೈ ಮೂಲದ ವೈದ್ಯರಾಗಿದ್ದಾರೆ ಮತ್ತೊಬ್ಬರು ಡಾ ರಜ್ದಾನ್ ಜಮ್ಮುವಿನವರು ಎಂದು ತಿಳಿಯಿತು. ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಜನಪ್ರಿಯ ವ್ಯಕ್ತಿಗಳು.

ಸಂಸ್ಕೃತಿ ಸಚಿವಾಲಯದ ಪತ್ರಿಕಾ ಟಿಪ್ಪಣಿಯ ಪ್ರಕಾರ, ಡಾ ಉದ್ವಾಡಿಯಾ ಅವರು 2018 ರಲ್ಲಿ ‘Outbreak: Epidemics in a Connected World’ Exhibition in 2018.  ಉದ್ಘಾಟಿಸಿದರು. ಅವರನ್ನು ಸಮೃದ್ಧ ಸಂಶೋಧಕ ಮತ್ತು ಹೆಸರಾಂತ ವೈದ್ಯ ಎಂದು ಹೇಳುತ್ತಾರೆ. 2016 ರಲ್ಲಿ, ನ್ಯೂಯಾರ್ಕ್ ಟೈಮ್ಸ್ ಡಾ ಉಡ್ವಾಡಿಯ ಸಂಶೋಧನೆಯ ಆಧಾರದ ಮೇಲೆ ಒಂದು ವೈಶಿಷ್ಟ್ಯದ ವರದಿಯನ್ನು ಸಿದ್ದಪಡಿಸಿತ್ತು.

ಹಾಗೆಯೇ ಡಾ ರಜ್ದಾನ್ ಜಮ್ಮುವಿನ ಪ್ರಸಿದ್ಧ ನರವಿಜ್ಞಾನಿ. ಏಪ್ರಿಲ್ 2021 ರಲ್ಲಿ, ಸುದ್ದಿ ಸಂಸ್ಥೆ IANS COVID ಸೋಂಕಿಗೆ ಸಂಬಂಧಿಸಿದ ಟ್ವೀಟ್‌ನಲ್ಲಿ ಅವರನ್ನು ಉಲ್ಲೇಖಿಸಿದೆ. ವೈರಲ್ ವೀಡಿಯೊದಲ್ಲಿರುವ ವ್ಯಕ್ತಿಯ ಚಿತ್ರವನ್ನು ಇಬ್ಬರು ವೈದ್ಯರ ಚಿತ್ರಗಳೊಂದಿಗೆ ಹೋಲಿಸಿದಾಗ ಆ ಮೂವರು ಬೇರೆ ಬೇರೆ ವ್ಯಕ್ತಿಗಳು ಎಂದು ಗುರುತಿಸಲಾಗಿದೆ.. ಉದ್ವಾಡಿಯಾ ಅವರ ಫೋಟೋ ಅವರ ಗೂಗಲ್ ಪ್ರೊಫೈಲ್‌ನಿಂದ, ರಜ್ದಾನ್ ಅವರ ಚಿತ್ರವು ಐಎಎನ್‌ಎಸ್‌ನಿಂದ ಬಂದಿದೆ.

ವೈರಲ್ ವೀಡಿಯೋದಲ್ಲಿರುವ ವ್ಯಕ್ತಿ ಡಾ.ಉದ್ವಾಡಿಯಾ ಅವರಂತೆ ಕಾಣುತ್ತಿಲ್ಲವಾದರೂ, ಡಾ. ರಜ್ದಾನ್ ಅವರೊಂದಿಗೆ ಸ್ವಲ್ಪ ಹೋಲಿಕೆ ಇದೆ. ಆದಾಗ್ಯೂ, ಜಮ್ಮು ಮೂಲದ ಮಾಧ್ಯಮ ಔಟ್ಲೆಟ್ ದಿ ಸ್ಟ್ರೈಟ್ ಲೈನ್ ಜನವರಿ 9 ರಂದು ಈ ಪ್ರತಿಪಾದನೆಯನ್ನು ತಳ್ಳಿಹಾಕಿತು ಮತ್ತು ವೀಡಿಯೊವನ್ನು ನಕಲಿ ಎಂದು ಹೆಸರಿಸಿದೆ. ಹೆಚ್ಚುವರಿಯಾಗಿ, ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ ತಾನಲ್ಲ ಎಂದು ರಜ್ಡಾನ್  ದೃಢಪಡಿಸಿದ್ದಾರೆ.

ಒಣಗಿದ ಶುಂಠಿಯು ಓಮಿಕ್ರಾನ್‌ನಿಂದ ಸೋಂಕನ್ನು ತಡೆಯುತ್ತದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ, ಇದು ವೈಜ್ಞಾನಿಕವಾಗಿ ಎಲ್ಲಿಯೂ ಸಾಬೀತಾಗಿಲ್ಲ. ಆಲ್ಟ್ ನ್ಯೂಸ್ ಸೈನ್ಸ್ ಸಂಪಾದಕ ಡಾ ಸುಮಯ್ಯಾ ಶೇಖ್ ಮತ್ತು ವೈದ್ಯ ಡಾ ಶರ್ಫರೋಜ್ ಸತಾನಿ ಕಳೆದ ವರ್ಷ ವೈಜ್ಞಾನಿಕ ತಪಾಸಣೆಯಲ್ಲಿ ವಿವರಿಸುತ್ತಾ “ವೈರಲ್ ಸೋಂಕನ್ನು ಒಣ ಶುಂಠಿಯಿಂದ ತಡೆಯುವ ಯಾವುದೇ ಕ್ಲಿನಿಕಲ್ ಪ್ರಯೋಗಗಳು ನಡೆದಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ವರ್ಷ, ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದ VP/ಮುಖ್ಯ ಗುಣಮಟ್ಟ ಅಧಿಕಾರಿ/ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಡಾ.ಫಹೀಮ್ ಯೂನಸ್ ಕೂಡ ಒಣ ಶುಂಠಿಯು ಕೋವಿಡ್ ಅನ್ನು ಗುಣಪಡಿಸುತ್ತದೆ ಎಂಬ ವಾದವನ್ನು ನಿರಾಕರಿಸಿದ್ದರು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಒಣ ಶುಂಠಿಯು ಕೋವಿಡ್ ಅನ್ನು ಗುಣಪಡಿಸುತ್ತದೆ ಎಂದು ಹೇಳುವ ಅಪರಿಚಿತ ವ್ಯಕ್ತಿಯ ವೀಡಿಯೊವನ್ನು ಡಾ ಜರೀರ್ ಉದ್ವಾಡಿಯಾ ಅಥವಾ ಡಾ ಸುಶೀಲ್ ರಜ್ದಾನ್ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇಬ್ಬರೂ ವೈದ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಮುಖ ವೃತ್ತಿಪರರು. ವೈದ್ಯಕೀಯ ತಪ್ಪು ಮಾಹಿತಿಯ ಈ ಭಾಗಕ್ಕೆ ವಿಶ್ವಾಸಾರ್ಹತೆಯನ್ನು ಸೇರಿಸಲು ಅವರ ಹೆಸರುಗಳನ್ನು ಬಳಸಲಾಗಿದೆ. ವೈರಲ್ ವಿಡಿಯೋದಲ್ಲಿ ಇರುವ ಅಂಶವೇನೆಂದರೆ ಗೊರಕೆ ಸಮಸ್ಯೆ ಇರುವವರು ಒಣ ಶುಂಠಿ ಬಳಕೆ ಮಾಡಿದರೆ ಅದರಿಂದ ಗೊರಕೆ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಹೇಳಲಾಗಿದೆಯೇ ಹೊರತು ಒಮಿಕ್ರಾನ್ ಕೋವಿಡ್ ಗುಣಪಡಿಸುತ್ತದೆ ಎಂದಲ್ಲ.


ಇದನ್ನು ಓದಿರಿ: Fact check: ಯುಪಿಯಲ್ಲಿ BJP ಗೆದ್ದರೆ ಯೋಗಿ ಮುಂದಿನ ಪ್ರಧಾನಿ ಆಗುತ್ತಾರೆ- ಅಖಿಲೇಶ್ ಯಾದವ್ ಹೇಳಿಕೆ ನಿಜವೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights