Categories
Breaking News Small Screen

ಬಿಗ್ಬಾಸ್ ಮನೆಯ ಆ ಐದು ನಿಮಿಷಗಳು… 50 ದಿನ ಪೂರೈಸಿದ ಸಂಭ್ರಮದಲ್ಲಿ ಬಿಗ್ಬಾಸ್ ಸೀಸನ್ 7

ಪ್ರತಿ ವರ್ಷದಂತೆ ಈ ವರ್ಷವೂ ಬಿಗ್ಬಾಸ್ ರಿಯಾಲಿಟಿ ಶೋ ಶುರುವಾಗಿದೆ. ಸೆಲೆಬ್ರಿಟಿಗಳನ್ನು ಒಂದು ಮನೆಯಲ್ಲಿ ಕೂಡಿ ಹಾಕಿ ನಾನಾ ಟಾಸ್ಕ್ಗಳನ್ನ ನೀಡ್ತಾ, ಬಿಗ್ಬಾಸ್ ಆಟವಾಡ್ತಿದ್ರೆ. ಈ ಬಾರಿಯ ಬಿಗ್ಬಾಸ್ ನಾನೇ ಗೆಲ್ಲಬೇಕು ಅನ್ನೋ ಛಲದೊಂದಿಗೆ, ಎಲ್ಲಾ ಟಾಸ್ಕ್ಗಳಲ್ಲೂ ನೂರಕ್ಕೆ ನೂರು ಪರಿಶ್ರಮ ಹಾಕಿ ಸ್ಪರ್ಧಿಗಳು ಮುನ್ನುಗ್ಗುತ್ತಿದ್ದಾರೆ. ಈಗಾಗಲೇ 50 ದಿನ ಕಂಪ್ಲೀಟ್ ಆಗಿದ್ದು, ಇನ್ನು 50 ದಿನ ಬಿಗ್ಬಾಸ್ ಮನೆಯಲ್ಲಿ ಉಳಿಯುವವರೇ ಈ ಬಾರಿ ಪ್ರಶಸ್ತಿ ಕೊಂಡೊಯ್ಯಲಿದ್ದಾರೆ.

ಉಳಿದಿರುವ ಸ್ಪರ್ಧಿಗಳು 13
ಕಳೆದ 7 ವಾರಗಳಿಂದ ಎಲಿಮಿನೀಷನ್ನಲ್ಲಿ ಹೊರಹೋದವರು, ವೈಲ್ಡ್ ಕಾಡ್ರ್ ಎಂಟ್ರಿ ಪಡೆದು ಬಿಗ್ಬಾಸ್ ಮನೆಗೆ ಬಂದವರು ಎಲ್ಲವನ್ನೂ ಸೇರಿಸಿದ್ರೆ ಸದ್ಯ 13 ಮಂದಿ ಬಿಗ್ಬಾಸ್ ಮನೆಯಲ್ಲಿದ್ದಾರೆ. ನಿನ್ನೆಯಷ್ಟೇ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದಿದ್ದ ಆರ್ಜೆ ಪೃಥ್ವಿ ಬಿಗ್ಬಾಸ್ ಮನೆಯಿಂದ ಹೊರಬಂದಿದ್ದಾರೆ. ನಾಮಿನೇಟ್ ಆಗಿ ಹೊರಬಂದು ಮತ್ತೆ ಬಿಗ್ ಮನೆಯಲ್ಲಿ ಮರುಜನ್ಮ ಪಡೆದಿರುವ ಚೈತ್ರಾ ಕೋಟೂರ್ ಅವ್ರನ್ನ ಮುಂದಿನ ವಾರಕ್ಕೆ ಡೈರೆಕ್ಟ್ ನಾಮಿನೇಟ್ ಮಾಡಿದ್ದಾರೆ ಪೃಥ್ವಿ.

ಆ ಐದು ನಿಮಿಷಗಳು…
ಈವರೆಗಿನ 50 ದಿನಗಳಲ್ಲಿ ಅದ್ಭುತವೆನಿಸುವ, ಅತ್ಯಮೂಲ್ಯ ಎನಿಸುವ, ಎಮೋಷನಲ್ ಎನಿಸುವ ಕ್ಷಣಗಳು ಯಾವುದು ಅಂತ ನೋಡಲು ಹೋದ್ರೆ ನಮಗೆ ನೆನಪಾಗುವುದು, ಬಹುಶಃ ಬಿಗ್ಬಾಸ್ ಮುಗಿದು ಹಲವು ವರ್ಷಗಳಾದ್ರೂ ನೆನಪಿನಲ್ಲಿ ಉಳಿಯುವುದು ಅಂದ್ರೆ ಅದು ಸೆಲೆಬ್ರಿಟಿ ಕೊರಿಯೋಗ್ರಾಫರ್, ಡ್ಯಾನ್ಸರ್ ಕಿಶನ್.

ಕಿಶನ್ ಮಾತು, ಮೌನ, ಡ್ಯಾನ್ಸ್…
ಹೌದು, ಈಗ್ಗೆ ಕೆಲ ದಿನಗಳ ಹಿಂದೆ ಬಿಗ್ಬಾಸ್ ಒಂದು ಟಾಸ್ಕ್ ನೀಡಿದ್ದರು. ಅದರಂತೆ ಸ್ಪರ್ಧಿಗಳು ತಾವು ಯಾರ ಬಳಿಯಾದ್ರೂ ಕ್ಷಮೆಯಾಚಿಸಬೇಕು ಅಂದ್ರೆ ಕೇಳಬಹುದು ಅಂತ. ಅದರಂತೆ ತಮ್ಮ ಜೀವನದಲ್ಲಾದ ಕೆಲ ಘಟನೆಗಳನ್ನು ಮೆಲುಕು ಹಾಕುತ್ತಾ ಎಲ್ಲ ಸ್ಪರ್ಧಿಗಳೂ ಒಬ್ಬೊಬ್ಬರ ಬಳಿ ಕ್ಷಮೆ ಕೇಳಿದ್ರು. ಆದ್ರೆ ಕಿಶನ್ ಅವ್ರ ಅಂದಿನ ಮಾತು, ಮೌನ, ಡ್ಯಾನ್ಸ್ ಎಲ್ಲವೂ ಸ್ಪರ್ಧಿಗಳಷ್ಟೇ ಅಲ್ಲ, ನೋಡುಗರ ಕಣ್ಣಲ್ಲೂ ನೀರು ತರಿಸಿತ್ತು.

ತಾಯಿಯ ಬಳಿ ಕ್ಷಮೆ ಕೇಳಿದ್ದೇಕೆ ಕಿಶನ್ ?
ಕಿಶನ್. ಒಬ್ಬ ಪ್ರತಿಭಾನ್ವಿತ ಯುವಕ. ತಮ್ಮ ಡ್ಯಾನ್ಸ್ನಿಂದಲೇ ಕರ್ನಾಟಕ ಮಾತ್ರವಲ್ಲ ಭಾರತದಾದ್ಯಂತ ಮನೆ ಮಾತಾಗಿರುವ ಹುಡುಗ. ಆದ್ರೂ ಅವ್ರ ಬಗ್ಗೆ ಹೆಚ್ಚು ಜನರಿಗೆ ಹೆಚ್ಚು ತಿಳಿದಿರಲಿಲ್ಲ. ಆದ್ರೆ ಅಂದಿನ ಎಪಿಸೋಡ್ನಲ್ಲಿ ಕಿಶನ್ ತಮ್ಮ ಮನಸ್ಸನ್ನು ಬಿಚ್ಚಿಟ್ಟಿದ್ದರು. ತಮ್ಮ ತಾಯಿಯನ್ನು ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದರು. ಡ್ಯಾನ್ಸ್ ಮಾಡುವ ಅರ್ಧದಲ್ಲೇ ಭಾವೋದ್ವೇಗಕ್ಕೆ ಒಳಗಾಗಿ ಅಳುತ್ತಾ ಕುಳಿತುಬಿಟ್ಟಿದ್ದರು. ನಂತರ ಎಲ್ಲ ಸ್ಪರ್ಧಿಗಳೂ ಅವ್ರನ್ನು ಮತ್ತೆ ಹುರಿದುಂಬಿಸಿದ್ರು. ತಾಯಿ, ಮಗು ನಡುವಿನ ಬಾಂಧವ್ಯವೇ ಅಂಥಾದ್ದಲ್ಲವೇ…

ನಂತರ ಮಾತನಾಡಿದ ಕಿಶನ್, ಅವ್ರ ನಗುಮುಖದ ಹಿಂದಿನ ನೋವಿನ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಮೂರು ತಿಂಗಳ ಮಗುವಾಗಿದ್ದಾಗಲೇ ಅವ್ರ ತಾಯಿ ಅಪಘಾತಕ್ಕೀಡಾಗಿದ್ದರಂತೆ. ಅದ್ರಿಂದಾಗ ಅವ್ರ ದೇಹದ ಅರ್ಧ ಭಾಗ ಸುಟ್ಟಿತ್ತು. ಮೊದಲು ಹೇಗಿದ್ದೆ, ಈಗ ಹೀಗಾದೆನಲ್ಲಾ ಅನ್ನೋ ನೋವಿನಲ್ಲೇ ಅವರ ತಾಯಿ ಮದ್ಯಪಾನ ಮಾಡತೊಡಗಿದ್ರಂತೆ. ಆ ಬಳಿಕ ಕಿಶನ್ ಸಹ ಮುಂಬೈಗೆ ಹೋದ ಕಾರಣ, ತಾಯಿಯ ಜತೆ ಹೆಚ್ಚು ಮಾತನಾಡುತ್ತಿರಲಿಲ್ಲವಂತೆ. ಒಮ್ಮೆ ಕರೆ ಮಾಡಿದ್ದಾಗ ಅವ್ರ ತಾಯಿ ಕಿಶನ್ಗೆ ಬಟ್ಟೆ ತಗೋ ದುಡ್ಡು ಕಳಿಸ್ತೀನಿ ಅಂದಿದ್ರಂತೆ, ಅದಾದ ಮಾರನೆಯ ದಿನವೇ ಕಿಶನ್ ತಾಯಿ ವಿಧಿವಶರಾದ ಸುದ್ದಿ ಬಂದಿತ್ತಂತೆ.

ಐ ಯಾಮ್ ಸಾರಿ ಅಮ್ಮಾ..
ತಮ್ಮ ತಾಯಿ ಹೇಗೆಲ್ಲಾ ಮಾನಸಿಕ ಯಾತನೆ ಪಡುತ್ತಿದ್ದರು, ನೊಂದಿದ್ದರು ಎಂಬುದನ್ನು ಅರಿಯದೇ ಆಗ ನಾನು ಅವರಿಗೆ ಹೆಚ್ಚು ಸಮಯ ಕೊಡುತ್ತಿರಲಿಲ್ಲ. ಆದ್ರೆ ಈಗ ಅವ್ರು ನನ್ನ ಜೊತೆಯಿಲ್ಲ. ಆದ್ರೆ ಅವ್ರ ಆಶೀರ್ವಾದ ನನ್ನ ಬಳಿ ಕೊನೆವರೆಗೂ ಇದ್ದೇ ಇರುತ್ತೆ. ಅವ್ರು ಇದ್ದಾಗ ಅವ್ರ ಬೆಲೆ ಗೊತ್ತಾಗಲಿಲ್ಲ, ಅವ್ರೀಗ ಇಲ್ಲ… ಐ ಯಾಮ್ ಸಾರಿ ಅಮ್ಮಾ… ಎಂದು ಬಿಕ್ಕಳಿಸಿದ್ರು.

ಎಲ್ಲ ಸ್ಪರ್ಧಿಗಳೂ ಕಣ್ಣೀರು, ಕಣ್ಣೀರು…
ಕಿಶನ್ರ ಡ್ಯಾನ್ಸ್, ಹಾಗೂ ನೋವಿನ ಮಾತುಗಳನ್ನು ಕೇಳಿ ಬಿಗ್ಬಾಸ್ ಮನೆಯಲ್ಲಿದ್ದ ಅಷ್ಟೂ ಸ್ಪರ್ಧಿಗಳೂ ಕಣ್ಣೀರಾದ್ರು. ಕಿಶನ್ ಪರ್ಫಾಮೆನ್ಸ್ ಪ್ರಾರಂಭದಿಂದ ಮಾತು ಮುಗಿಸಿದ ಕ್ಷಣದವರೆಗೂ ಆ ಹತ್ತು ನಿಮಿಷಗಳ ಕಾಲ ಎಲ್ಲರ ಕಣ್ಣಂಚಲ್ಲೂ ನೀರು.. ಬಿಗ್ಬಾಸ್ ಮನೆಯ ಲಕ್ಕಿ ಹುಡುಗ ಎನಿಸಿಕೊಂಡಿದ್ದ ಕಿಶನ್, ಏನೂ ಕಷ್ಟಗಳಿಲ್ಲದೇ ಬೆಳೆದು ಬಂದ ಹುಡುಗ ಅಂತ ಅಂದುಕೊಂಡಿದ್ದವರಿಗೆ ಕಿಶನ್ರ ಮಾತುಗಳನ್ನು ಕೇಳಿ ಗದ್ಗದಿತರಾಗಿದ್ದರು. ಅಂದೇ ಕಿಶನ್ ಬಿಗ್ಬಾಸ್ ಮನೆಯ ಸ್ಪರ್ಧಿಗಳು ಮಾತ್ರವಲ್ಲ ಪ್ರೇಕ್ಷಕರ ಹೃದಯವನ್ನೂ ಗೆದ್ದರು…

Categories
Breaking News District State

‘ನಾವು ಪಾಕಿಸ್ತಾನದ ಹುಲಿಗಳು, ರಾಜ್ಯದ ಐದು ಜಿಲ್ಲೆಯಲ್ಲಿ ಇದ್ದೇವೆ’ : ನೋಟಿನಲ್ಲಿ ಬಾಳೆಹೊನ್ನೂರು ಟಾರ್ಗೆಟ್?

ಹಳೆಯ 50 ರೂ ನೋಟಿನ ಮೇಲೆ ಆತಂಕಕಾರಿ ವಿಷಯ ಬರೆದಿರುವುದು ಸದ್ಯ ಆತಂಕ ಸೃಷ್ಟಿಮಾಡಿದೆ.

ಹೌದು.. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಲ್ಲಿ ಸಿಕ್ಕ 50 ರೂಪಾಯಿ ನೋಟಿನ ಮೇಲೆ ದುಷ್ಕರ್ಮಿಗಳು ಬರೆದ ವಿಷಯ ಆತಂಕಕ್ಕೆ ಗುರಿ ಮಾಡಿದೆ. 50 ರೂ ನೋಟಿನ ಮೇಲೆ ಬರೆದು ವಿಷಯ ಹೀಗಿದೆ-

‘ಓರ್ವ ಭಾರತೀಯನನ್ನೂ ಬಿಡಲ್ಲ. ನಾವು ಪಾಕಿಸ್ತಾನದ ಹುಲಿಗಳು, 6 ಜನ ಬಂದಿದ್ದೇವೆ. ರಾಜ್ಯದ ಐದು ಜಿಲ್ಲೆಯಲ್ಲಿ ಇದ್ದೇವೆ. ಬಾಳೆಹೊನ್ನೂರಿನಲ್ಲಿ ಇಬ್ಬರು ಇದ್ದೇವೆ. ನಮಗೆ ಕನ್ನಡದವರೇ ಸಹಾಯ ಮಾಡ್ತಿದ್ದಾರೆ.’ ಎಂದು ಬರೆಯಲಾಗಿದೆ.

ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕು ದತ್ತಮಾಲೆ ಸಂದರ್ಭದಲ್ಲಿ ದುಷ್ಕರ್ಮಿಗಳು ಇಂತಹದೊಂದು ಕಿಚ್ಚು ಹತ್ತಿಸಿರೋದು ಆತಂಕ ಸೃಷ್ಟಿ ಮಾಡಿದೆ.

 

Categories
Breaking News National Political

ಬಿಜೆಪಿ ಕಾರ್ಪೋರೇಟರ್ ಸೇರಿದಂತೆ ಐವರ ಕೊಲೆ, ಎಂಟು ಜನರಿಗೆ ಗಾಯ…!

ಬಿಜೆಪಿ ಕಾರ್ಪೋರೇಟರ್ ಸೇರಿದಂತೆ ಐವರನ್ನು ಕೊಲೆಗೈದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಭುಸ್ವಾಲ್ ನಗರದಲ್ಲಿ ನಡೆದಿದೆ. ಐವರಲ್ಲಿ ಕಾರ್ಪೋರೇಟರ್ ಕುಟುಂಬದ ಮೂವರು ಕೊಲೆಯಾಗಿದ್ದು, ಎಂಟು ಜನ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಚಾಕು ಸಹಿತ ನುಗ್ಗಿದ ಮೂವರು ಕೊಲೆಗೈದು ಪರಾರಿಯಾಗಿದ್ದಾರೆ. ಘಟನೆ ನಡೆದ ಗಂಟೆಯೊಳಗೆ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಬಿಜೆಪಿ ಕಾರ್ಪೋರೇಟರ್ ರವೀಂದ್ರ  ಖಾರಟ್ ಒಳಗೊಂಡಂತೆ ಇಬ್ಬರು ಮಕ್ಕಳು ಮತ್ತು ಹಿರಿಯ ಸೋದರ ಸುನಿಲ್ (55) ಹಾಗೂ ಓರ್ವ ಗೆಳೆಯ ಕೊಲೆಯಾದ ನತದೃಷ್ಟರು. ಇನ್ನು ಮನೆಯಲ್ಲಿದ್ದ ಎಂಟು ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಕಾರ್ಪೋರೇಟರ್ ಪತ್ನಿ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಒಟ್ಟು ಐವರು ಸಾವನ್ನಪ್ಪಿದ್ದು, ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಸಂಶಯದ ಮೇಲೆ ಈಗಾಗಲೇ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸುಳಿವು ಸಿಕ್ಕಿದ್ದು, ಬಂಧಿತರು ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ ಎಂಬುವುದು ಸದ್ಯಕ್ಕೆ ತಿಳಿದು ಬಂದಿದೆ. ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ದ್ವೇಷದಿಂದಲೇ ಕೊಲೆಗಳು ನಡೆದಿರಬಹುದು ಎಂಬ ಶಂಕೆಗಳು ವ್ಯಕ್ತವಾಗಿವೆ ಎಂದು ಜಲಗಾಂವ್ ಡಿವೈಎಸ್‍ಪಿ ತಿಳಿಸಿದ್ದಾರೆ.

Categories
Breaking News Political State

ಬಿಬಿಎಂಪಿ ಮಹಾಪೌರರ ರೇಸ್ ನ ಮುಂಚೂಣಿಯಲ್ಲಿ ಐವರು : ಯಾರು ತೊಡಲಿದ್ದಾರೆ ಮೇಯರ್ ಗೌನ್..?

ಇನ್ನೇನು ಕೆಲವೇ ದಿನಗಳಲ್ಲಿ ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಒಂದು ವರ್ಷದ ಅಧಿಕಾರದ ಅವಧಿ ಪೂರ್ಣಗೊಳ್ಳುತ್ತದೆ. ಮೇಯರ್ ಪಟ್ಟಕ್ಕೆ ಬಿಜೆಪಿ ಪಕ್ಷದಲ್ಲೇ ಸಾಕಷ್ಟು ಪೈಪೋಟಿ ಸೃಷ್ಟಿಯಾಗಿದೆ.

ಹೌದು.. ಪಾಲಿಕೆಯಲ್ಲಿನ ವಿರೋಧ ಪಕ್ಷದ ನಾಯಕರಾಗಿರುವ ಪದ್ಮನಾಭರೆಡ್ಡಿ, ಮಾಜಿ ಉಪಮೇಯರ್ ಎಲ್, ಶ್ರೀನಿವಾಸ್, ಗೋವಿಂದರಾಜನಗರ ವಾರ್ಡ್ ನ ಪಾಲಿಕೆ ಸದಸ್ಯೆ ಉಮೇಶ್ ಶೆಟ್ಟಿ, ಕಾಡುಮಲ್ಲೇಶ್ವರ ವಾರ್ಡ್ ನ ಪಾಲಿಕೆ ಸದಸ್ಯ ಮಂಜುನಾಥ ರಾಜು ಅವರುಗಳ ನಡುವೆ ತೀವ್ರ ಹಣಾಹಣಿಯೇ ಇದೆ. ಇವರಲ್ಲಿ ಒಬ್ಬರು ಮೇಯರ್ ಆಗುವುದು ಖಚಿತವೆಂದು ಹೇಳಲಾಗುತ್ತಿದೆ. ಆದರೆ ಹೇಮಲತಾ ಗೋಪಾಲಯ್ಯ ಅವರಿ ಅಂತಿಮವಾಗಿ ಮೇಯರ್ ಗೌನ್ ತೊಟ್ಟರು ಅಚ್ಚರಿಯಿಲ್ಲ.

ಹೌದು… ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನ ಅನರ್ಹ ಶಾಸಕ ಕೆ. ಗೋಪಾಲಯ್ಯ  ಅವರ ಪತ್ನಿಯಾಗಿರುವ ಹೇಮಾಲತಾ ಅವರಿಗೆ ಮೇಯರ್ ಪಟ್ಟ ನೀಡಬೇಕೆಂದು ಹಠ ಹಿಡಿದಿದ್ದಾರೆಂಬ ಮಾತುಗಳುಕೇಳಿ ಬರುತ್ತಿವೆ.

ಇನ್ನೂ ನಗರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಿದ್ದು, ಈ ಸಮುದಾಯಕ್ಕೆ ಸೇರಿದ ಹಲವು ಪಾಲಿಕೆ ಸದಸ್ಯರಿದ್ದರೂ 2015ರ  ನಂತರ ಯಾರೊಬ್ಬರಿಗೂ ಮೇಯರ್ ಆಗುವ ಅವಕಾಶ ನೀಡಿಲ್ಲವೆಂಬ ಕೊರಗು ಇದೆ.

ಹೀಗಾಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರೇ ಮೇಯರ್ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದನ್ನ ಅರಿತು ಕುಮಾರಸ್ವಾಮಿ ಲೇಔಟ್ ವಾರ್ಡ್ನ ಪಾಲಿಕೆ ಸದಸ್ಯರಾದ ಎಲ್. ಶ್ರೀನಿವಾಸ್ ಅವರು ಕಣಕ್ಕೆ ಇಳಿದಿದ್ದಾರೆ. ಒಕ್ಕಲಿಗ ಸಮುದಾಯದವರೊಂದಿಗೆ ಕಂದಾಯ ಸಚಿವ ಆರ್. ಅಶೋಕ್ ,ಮೂಲಕ ಲಾಬಿ ನಡೆಸುತ್ತಿದ್ದಾರೆಂಬ ಮಾತುಗಳಿವೆ.

ಇತ್ತ ಕಾಂಗ್ರೆಸ್ ಹಾಗೂ ಜೆಡಿಎಎಸ್ ಮೈತ್ರಿಕೂಟವು ಚುನಾವಣೆಗೆ ಮುನ್ನವೇ ಶಸ್ತ್ರತ್ಯಾಗ ಮಾಡಿಶರಣಾದಂತೆ ಕಾಣಿಸುತ್ತಿದೆ. ಅವರ ನಿರುತ್ಸಾಹಕ್ಕೆ ಸಂಖ್ಯಾಬಲವೂ ಕಾರಣ ಇದೆ. ಅನರ್ಹ ಶಾಸಕರಾದ ಯಶವಂತಪುರದ ಎಸ್.ಟಿ. ಸೋಮಶೇಖರ್, ಆರ್.ಆರ್ ನಗರದ ಮುನಿರತ್ನ, ಕೆ.ಆರ್.ಪುರದ ಭೈರತಿ ಬಸವರಾಜ್, ಶಿವಾಜಿನಗರದ ಆರ್.ರೋಷನ್ ಬೇಗ್ ಮತ್ತು ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ.ಗೋಪಾಲಯ್ಯ ಅವರು ಮೇಯರ್ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಪಾಲಿಕೆಯಲ್ಲಿ ಮತದಾನದ ಹಕ್ಕು ಹೊಂದಿರುವ ಸದಸ್ಯರ ಬಲವು 258ಕ್ಕೆ ಕುಸಿದಿದೆ. ಇತ್ತೀಚೆಗೆ ವಿಧಾನಪರಿಷತ್ ಸದಸ್ಯರಾದ ನಾಸಿರ್ ಹುಸೇನ್ ಮತ್ತು ಪ್ರಕಾಶ್ ರಾಥೋಡ್ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ.

ಸದ್ಯ ಬಿಜೆಪಿಯು ಪಕ್ಷೇತರ ಸದಸ್ಯ ರಮೇಶ್ ಸೇರಿ 127 ಸದಸ್ಯರ ಬಲವನ್ನು ಹೊಂದಿದೆ. ಜೆಡಿಎಎಸ್ ಸದಸ್ಯರಾದ ಮಂಜುಳಾ ವಿ. ನಾರಾಯಣಸ್ವಾಮಿ ಮತ್ತು ಕೆ. ದೇವದಾಸ್ ಅವರು ಬಿಜೆಪಿ ಜತೆ ಗುರುತಿಸಿಕೊಂಡಿದ್ದು, ಇದರಿಂದ ಬಿಜೆಪಿಯ ಸಂಖ್ಯಾಬಲ 129ಕ್ಕೇರಿದೆ. ಕಾಂಗ್ರೆಸ್-ಜೆಡಿಎಸ್ ಸದಸ್ಯರ ಸಂಖ್ಯೆ 129 ಇದೆ. ನಾಸಿರ್ ಹುಸೇನ್ ಮತ್ತು ಪ್ರಕಾಶ್ ರಾಥೋಡ್ ಹೆಸರು ಸೇರಿದರೆ ಮೈತ್ರಿ ಪಕ್ಷದ ಬಲ 131ಕ್ಕೆ ಹೆಚ್ಚಾಗಲಿದೆ. ಈ ಲೆಕ್ಕಾಚಾರದಂತೆ ಬಿಜೆಪಿಗೆ ಆಡಳಿತದ ಚುಕ್ಕಾಣಿ ಹಿಡಿಯಲು ಆಗುವುದಿಲ್ಲ. ಆದರೆ ಅನರ್ಹ ಶಾಸಕರ ಬೆಂಬಲಿಗ ಕಾರ್ಪೋರೇಟರ್ ಗಳಲ್ಲಿ ಕೆಲವರು ಚುನಾವಣಾ ದಿನ ಗೈರಾಗಿ, ಕಮಲ ಪಾಳಯದ ಗೆಲುವಿಗೆ ಸಹಕರಿಸುವ ಸಾಧ್ಯತೆಗಳು ದಟ್ಟವಾಗಿವೆ.

ಪದ್ಮನಾಭರೆಡ್ಡಿ, ಎಲ್, ಶ್ರೀನಿವಾಸ್, ಹೇಮಲತಾ ಗೋಪಾಲಯ್ಯ ಅವರ ನಡುವೆ ತೀವ್ರ ಪೈಪೋಟಿ ಇದ್ದು, ಅಂತಿಮವಾಗಿ ವಿಜಯ ಲಕ್ಷ್ಮೀ ಯಾರ ಕೊರಳಿಗೆ ಮಾಲೆ ಹಾಕುವಳೆಂಬುದನ್ನು ತಿಳಿಯಲು ಇನ್ನೂ ಕೆಲವೇ ದಿನಗಳು ಸಾಕು. ಅಲ್ಲಿವರೆಗೂ ಕಾದು ನೋಡಲೇಬೇಕು.

Categories
Breaking News District National State

ಕಾರಲ್ಲಿ ಆಕಸ್ಮಿಕ ಬೆಂಕಿ…! ತಿರುಪತಿಗೆ ಹೋದವರು ವಾಪಸ್ಸು ಬರಲೇ ಇಲ್ಲ…

ಕಾರಲ್ಲಿ ಆಕಸ್ಮಿಕ ಬೆಂಕಿ ಐವರು ಸಜೀವ ದಹನವಾದ ಘಟನೆ ಆಂದ್ರದ ಚಿತ್ತೂರು ಜಿಲ್ಲೆ ಪಲಮನೇರು ತಾಲೂಕಿನ ಗಂಗವರಂ ಹೋಬಳಿಯಲ್ಲಿ ನಡೆದಿದೆ.

ಗಂಗವರಂ ನಿಂದ ಮಾಮಡುಗು ಗ್ರಾಮಕ್ಕೆ ತೆರಳುವಾಗ ಕಾರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಜಾಹ್ನವಿ, ಕಲಾ, ಭಾನುತೇಜ, ಪಾವನ ರಾಮ್, ಸಾಯಿ ಆಶ್ರಿತ, ವಿಷ್ಣು ಎನ್ನುವರಿದ್ದ ಕಾರು ಸಂಪೂರ್ಣವಾಗಿ ಭಸ್ಮವಾಗಿ  6 ಮಂದಿಯಲ್ಲಿ ಐವರು ಸಜೀವ ದಹನವಾಗಿದ್ದಾರೆ.

ಕುಟುಂಬಸ್ತರು ತಿರುಪತಿಯಿಂದ ಬೆಂಗಳೂರಿಗೆ ವಾಪಾಸ್ ಬರ್ತಿದ್ದ ವೇಳೆ ಈ ಘಟನೆ ನಡೆದಿದೆ.  ಸ್ತಳಕ್ಕೆ ದಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಓರ್ವನನ್ನ ರಕ್ಷಿಸಿದ್ದಾನೆ. ಪಲಮನೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಮಾಡಲಾಗುತ್ತಿದೆ.

Categories
Breaking News National

ಒ.ಎನ್.ಜಿ.ಸಿ. ಗ್ಯಾಸ್ ಸಂಸ್ಕರಣ ಘಟಕದಲ್ಲಿ ಭಾರೀ ಬೆಂಕಿ : ಐವರ ಸಾವು

ಒ.ಎನ್.ಜಿ.ಸಿ. ಗ್ಯಾಸ್ ಸಂಸ್ಕರಣ ಘಟಕದಲ್ಲಿ ಭಾರೀ ಬೆಂಕಿ ದುರಂತ ಸಂಭವಿಸಿದ ಘಟನೆ ಮಹಾರಾಷ್ಟ್ರದ ನವೀ ಮುಂಬೈನ ಉರಾಣ್ ನಲ್ಲಿ ನಡೆದಿದೆ. ಅಗ್ನಿ ಅವಘಡದಲ್ಲಿ ಐವರು ಧಾರುಣವಾಗಿ ಸಾವನ್ನಪ್ಪಿದ್ದಾರೆ.

ಬೆಳಿಗ್ಗೆ ಭಾರಿ ಸ್ಫೋಟದಿಂದ ಹೊತ್ತಿಕೊಂಡ ಬೆಂಕಿ ಘಟಕಕ್ಕೆ ವ್ಯಾಪಿಸಿದೆ. ಘಟಕದ ಒಳಗೆ ಹಲವರು ಸಿಲುಕಿರುವ ಶಂಕೆ ಇದೆ. 20 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗಿದೆ. ಘಟಕಕ್ಕೆ ಗ್ಯಾಸ್ ಸರಬರಾಜು ಸ್ಥಗಿತಗೊಳಿಸಲಾಗಿದೆ.

ಅಗ್ನಿ ಅವಘಡ ಹಿನ್ನೆಲೆ ಹಜೀರಾ ಪ್ಲಾಂಟ್ ಗೆ ಗ್ಯಾಸ್ ಡೈವರ್ಟ್ ಮಾಡಲಾಗಿದೆ. ಗ್ಯಾಸ್ ಸಂಸ್ಕರಣ ಘಟಕದ ಕಡೆ ತೆರಳುವ ಮಾರ್ಗವನ್ನು ಬಂದ್ ಮಾಡಲಾಗಿದ್ದು. ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಸುರಕ್ಷಿತ ಸ್ಥಳಗಳಿಗೆ ಸುತ್ತಮುತ್ತಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.

Categories
Breaking News District State

ಅತಿವೃಷ್ಟಿಯ ನಂತರ ಸಾಂಕ್ರಾಮಿಕ ರೋಗಗಳ ಹಾವಳಿ : ಐದು ಮಕ್ಕಳು ಸಾವು

ಹುಬ್ಬಳ್ಳಿಯಲ್ಲಿ ಅತಿವೃಷ್ಟಿಯ ನಂತರ ಸಾಂಕ್ರಾಮಿಕ ರೋಗಗಳ ಹಾವಳಿ ಶುರುವಾಗಿದೆ.

ಹೌದು.. ಅಧಿಕ ಮಳೆಗೆ ಜನ-ಜಾನುವಾರಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.  ಕಳೆದ ಹದಿನೈದು ದಿನಗಳಲ್ಲಿ ಶಂಕಿತ ಡೆಂಗಿ ಜ್ವರಕ್ಕೆ ಐವರು ಮಕ್ಕಳು ಬಲಿಯಾಗಿದ್ದಾರೆ.
ಆಸಾರಹೊಂಡದ ಮಾಹಿರಾ ಅಬ್ದುಲ್‌‌ಖಾದರ್‌ ಜುಂಗುರ(4), ಮೆಹಬಿನ್‌ತಾಜ್‌ ಮಹ್ಮದಗೌಸ್‌ ಜುಂಗುರ(10), ಆನಂದನಗರದ ಅಮೂಲ್ಯ ಹನುಮಂತ ಸವಣೂರ(9), ವಿದ್ಯಾನಗರ ಶೌರ್ಯ ಪವಾರ್‌ (5) ಹಾಗೂ ಸೆಟಲ್‌ಮೆಂಟ್‌ನ ಒಂದು ಮಗು ಶಂಕಿತ ಡೆಂಗಿಗೆ ಬಲಿಯಾದವರು.

ಜಿಲ್ಲಾಡಳಿತ ಮತ್ತು ಪಾಲಿಕೆ ನಿರ್ಲಕ್ಷಕ್ಕೆ ಡೆಂಗಿ ಮಹಾಮಾರಿ ಹಾವಳಿ ಹೆಚ್ಚಾಗಲು ಕಾರಣ ಎನ್ನುವ ಆರೋಪ ಕೇಳು ಬರುತ್ತಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇನ್ನೂ ನೂರಾರು ಮಕ್ಕಳು ಹುಬ್ಬಳ್ಳಿಯ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Categories
Breaking News District State

ನಿಂತ ಲಾರಿಗೆ ಸ್ಕಾರ್ಪಿಯೋ ಢಿಕ್ಕಿ – ಸ್ಥಳದಲ್ಲಿಯೇ ಐವರ ಸಾವು

ಕಲಬುರ್ಗಿ ನಿಂತಿದ್ದ ಲಾರಿಗೆ ಸ್ಕಾರ್ಪಿಯೋ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮುವ್ವರು ಸೇರಿ ಐದು ಜನ ಸಾವನ್ನಪ್ಪಿದ ಘಟನೆ ಕಲಬುರ್ಗಿ ತಾಲೂಕಿನ ಸಾವಳಗಿ ಕ್ರಾಸ್ ಬಳಿ ನಡೆದಿದೆ. ಮೃತರೆಲ್ಲರೂ ದಕ್ಷಿಣ ಸೋಲಾಪುರ ತಾಲೂಕಿನ ಚಿಂಚಪುರ ನಿವಾಸಿಗಳಾಗಿದ್ದಾರೆ. ಶ್ರಾವಣ ಮಾಸದ ಹಿನ್ನೆಲೆಯಲ್ಲಿ ತೀರ್ಥಯಾತ್ರೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಶ್ರಾವಣ ಮಾಸದ ಹಿನ್ನೆಲೆಯಲ್ಲಿ ತೀರ್ಥಯಾತ್ರೆ ಕೈಗೊಂಡವರು ಮಸಣ ಸೇರಿದ ಘಟನೆ ಕಲಬುರ್ಗಿ ತಾಲೂಕಿನ ಸಾವಳಗಿ ಕ್ರಾಸ್ ಬಳಿ ನಡೆದಿದೆ. ನಿಂತ ಲಾರಿಗೆ ಸ್ಕಾರ್ಪಿಯೋ ವಾಹನ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳೂ ಸೇರಿ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮುವ್ವರು ಗಾಯಗೊಂಡಿದ್ದರು. ಮೃತರ ಪೈಕಿ ಮುವ್ವರು ಒಂದೇ ಕುಟುಂಬಕ್ಕೆ ಸೇರಿದ್ದಾರೆ. ತಿರುಪತಿಯಿಂದ ಸೋಲಾಪುರಕ್ಕೆ ವಾಪಸ್ಸಾಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಮೃತರನ್ನು ಚಿಂಚಪುರದ ಸಂಜಯ್ ಚಡಚಣ(32), ಆತನ ಪತ್ನಿ ರಾಣಿ ಚಡಚಣ(23), ಪುತ್ರ ಶ್ರೇಯಸ್(3), ಭಾಗ್ಯಶ್ರೀ ಆಳಗಿ(19) ಹಾಗೂ ಧೀರಜ್ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಂತ ಲಾರಿಗೆ ಢಿಕ್ಕಿ ಹೊಡೆದಾಗ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದ ವಾಹನದಲ್ಲಿ ಎಂಟು ಜನರಿದ್ದರು. ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಚಾಲಕ, ಒಂದು ಮಗು ಹಾಗೂ ಓರ್ವ ಮಹಿಳೆಗೆ ಗಾಯಗಳಾಗಿವೆ ಎಂದು ಮೃತನ ಸಂಬಂಧಿಗಳು ತಿಳಿಸಿದ್ದಾರೆ.

ಶ್ರಾವಣ ಮಾಸದ ಹಿನ್ನೆಲೆಯಲ್ಲಿ 11 ಮಕ್ಕಳೂ ಸೇರಿ 27 ಜನ ನಾಲ್ಕು ವಾಹನಗಳಲ್ಲಿ ತೀರ್ಥಯಾತ್ರೆ ಕೈಗೊಂಡಿದ್ದರು. ಶ್ರೀಶೈಲ, ತಿರುಪತಿ ಇತ್ಯಾದಿಗಳ ದರ್ಶನ ಪಡೆದು ಸೋಲಾಪುರಕ್ಕೆ ವಾಪಸ್ಸಾಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಲಾರಿಯ ರೂಪದಲ್ಲಿ ನಿಂತಿದ್ದ ಜನರಾಯ, ಐವರನ್ನೂ ಬಲಿಪಡೆದಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಮೃತರ ಸಂಬಂಧಿಗಳು ಜಿಲ್ಲಾ ಆಸ್ಪತ್ರೆ ಬಳಿ ಜಮಾಯಿಸಿ ಕಣ್ಣೀರು ಹಾಕಿದರು. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Categories
Breaking News State

ಕಾರು ಪಲ್ಟಿ : ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೆ ದುರ್ಮರಣ, ಐವರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೆ ಮಹೀಂದ್ರಾ ಜೈಲೊ ಕಾರು ಪಲ್ಟಿಯಾದ ಘಟನೆ ಬೆಂಗಳೂರು ದೇವನಹಳ್ಳಿ ತಾಲೂಕಿನ ಹಂದ್ರಹಳ್ಳಿ ಗ್ರಾಮದ ಬಳಿ ನಡೆದಿದೆ.

ಒಂಬತ್ತು ಜನ ಆವಲಹಳ್ಳಿಯಿಂದ ಕಾರಿನಲ್ಲಿ ನಂದಿಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಐವರಿಗೆ ಗಂಭೀರ ಗಾಯವಾಗಿದೆ.

ರಮೇಶ್ (30), ಮಂಜುನಾಥ್ (26), ಅಶೋಕ್ ರೆಡ್ಡಿ (26), ಗೌರಿಶ್ (23) ಮೃತ ದುರ್ದೈವಿಗಳು. ಮೃತರೆಲ್ಲರು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ನಕ್ಕಲಪಲ್ಲಿ ಗ್ರಾಮದವರಾಗಿದ್ದಾರೆ.

ಹೊಸಕೋಟೆ ಮತ್ತು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಗಾಯಾಳುಗಳು ದಾಖಲಾಗಿದ್ದು,  ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Categories
Breaking News National

ಟ್ರಕ್‌  ಪಲ್ಟಿ : ಸ್ಥಳದಲ್ಲೇ ಏಳು ಜನ ಸಾವು – ಐವರಿಗೆ ಗಂಭೀರ ಗಾಯ

ಇಂದು ಮುಂಜಾನೆ ಉತ್ತರ ಪ್ರದೇಶದ ಬದೌನ್‌ ನಲ್ಲಿ ಟ್ರಕ್‌  ಪಲ್ಟಿಯಾಗಿ ಏಳು ಜನ ಮೃತಪಟ್ಟು, ಕನಿಷ್ಠ ಐವರು ಗಾಯಗೊಂಡ ಘಟನೆ ನಡೆದಿದೆ.

ಟ್ರಕ್‌ ಚಾಲಕನ ಅತೀ ವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ. ಸಾವನ್ನಪ್ಪಿದವರ ಗುರುತು ಪತ್ತೆಯಾಗಿಲ್ಲ. ಗಾಯಾಳುಗಳನ್ನು ಸ್ಥಳಿಯ ಆಸ್ಪತ್ರೆಗೆ ಸೇರಿಸಲಾಗಿದೆ.

ಗೋಧಿ ತುಂಬಿದ ಚೀಲಗಳನ್ನು ತುಂಬಿ ಬರುತ್ತಿದ್ದ ಟ್ರಕ್‌ ತಿರುವಿನಲ್ಲಿ ಪಲ್ಟಿಯಾಗಿದೆ. ಟರ್ನ್‌ ಮಾಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹತ್ತಿರದ ಚಹಾದಂಗಡಿಯ ಮೇಲೆ ಟ್ರಕ್‌ ಬಿದ್ದಿದೆ. ಚಹಾದಂಗಡಿಯ ಬಳಿ ನಿಂತಿದ್ದ ಜನರು ಅದರಡಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.

ಸ್ಥಳಿಯ ಶಾಸಕ ರಾಜೀವ್‌ ಕುಮಾರ್‌ ಸಿಂಗ್‌ ಆಸ್ಪತ್ರೆಗೆ ದೌಡಾಯಿಸಿದ್ದು, ಸಿಎಂ ಯೋಗಿ ಆದಿತ್ಯನಾಥ್‌ ಪರವಾಗಿ ಗಾಯಾಳುಗಳಿಗೆ ಉಚಿತ ಚಿಕಿತ್ಸೆ, ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.