ಬೆಂಗಳೂರಿನಲ್ಲಿ ಐವರು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ : ಡೆತ್ ನೋಟ್ ನಲ್ಲಿ ಭಯಾನಕ ಸತ್ಯ ಬಯಲು!

ಬೆಂಗಳೂರಿನಲ್ಲಿ ಐವರು ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಜನರನ್ನ ಬೆಚ್ಚಿ ಬೀಳಿಸಿದೆ. ಸದ್ಯ ಈ ಪ್ರಕರಣ ಭಾರೀ ಟ್ವಿಸ್ಟ್ ಪಡೆದುಕೊಂಡಿದೆ. ಮನೆ ಯಜಮಾನ ಶಂಕರ್ ಮಗ ಮಧುಸಾಗರ್ ಬರೆದ ಡೆತ್ ನೋಟ್ ನಿಂದ ಹಲವಾರು ವಿಚಾರಗಳು ಬಯಲಾಗಿವೆ.

ಕಳೆದ ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾದ ಒಂದೇ ಕುಟುಂಬದ ಐದು ಶವಗಳು ಶುಕ್ರವಾರ ರಾತ್ರಿ ಬೆಂಗಳೂರಿನ ತಿಗಳರಪಾಳ್ಯದ ಬ್ಯಾಡರಹಳ್ಳಿಯ 4ನೇ ಕ್ರಾಸ್ ನಲ್ಲಿರುವ ಹಲ್ಲೆಗೆರೆಯ ಶಂಕರ್ ಮನೆಯಲ್ಲಿ ಪತ್ತೆಯಾಗಿದ್ದವು. ಮೃತರನ್ನು ಶಂಕರ್ ಅವರ ಪತ್ನಿ 50 ವರ್ಷದ ಭಾರತಿ, 27 ವರ್ಷದ ಮಗ ಮಧು ಸಾಗರ್, ಹೆಣ್ಣುಮಕ್ಕಳಾದ 33 ವರ್ಷದ ಸಿಂಚನಾ ಮತ್ತು 30 ವರ್ಷದ ಸಿಂಧುರಾಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಆಹಾರವಿಲ್ಲದೇ 9 ತಿಂಗಳ ಮಗು ಸಾವನ್ನಪ್ಪಿದ್ದರೆ, 3 ವರ್ಷದ ಮಗು ಪವಾಡದಂತೆ ಬದುಕುಳಿದಿತ್ತು. ಒಂದೇ ಕುಟುಂಬದ ಐವರು ಹೀಗೆ ಏಕಾಏಕಿ ಆತ್ಮಹತ್ಯೆಗೆ ಶರಣಾಗಲು ಕಾರಣ ಏನು ಎನ್ನುವುದಕ್ಕೆ ಶಂಕರ್ ಮಗ ಮಧುಶಾಗರ್ ಬರೆದ ಡೆತ್ ನೋಟ್ ನಿಂದ ಉತ್ತರ ಸಿಕ್ಕಿದೆ.

“ನಮ್ಮಪ್ಪ ಮಹಾನ್ ಕುಡುಕು, ಕಾಮುಕ, ಸ್ಯಾಡಿಸ್ಟ್. ಅಪ್ಪನಿಗೆ ಐವರು ವಿವಾಹಿತ ಮಹಿಳೆಯರೊಂದಿಗೆ ಸಂಬಂಧವಿದೆ. ನಮ್ಮ ಏರಿಯಾದಲ್ಲೇ ಇರುವ ಓರ್ವ ಮಹಿಳೆ ಜೊತೆ ಸಂಪರ್ಕ ಇದೆ. ತಾನು ಸಂಬಂಧವಿರುವ ಮಹಿಳೆಯ ಮಗಳನ್ನೇ ಮದುವೆಯಾಗುವಂತೆ ಒತ್ತಾಯ ಮಾಡಿದ್ದಾನೆ. ತನ್ನ ಕಚೇರಿಯಲ್ಲಿ ಓರ್ವ ಮಹಿಳೆ ಜೊತೆ ಲೈಗಿಂಕ ಸಂಪರ್ಕ ಹೊಂದಿದ್ದಾರೆ. ಹೀಗೆ ಹಲವು ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡಿ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಹಲವು ಮಹಿಳೆಯರನ್ನು ಟ್ರ್ಯಾಪ್ ಮಾಡಿ ಸಂಬಂಧ ಹೊಂದಿದ್ದರು. ಅಪ್ಪನ ಅನೈತಿಕ ಸಂಬಂಧಕ್ಕೆ ಬೇಸತ್ತು ಅಪ್ಪನಿಂದ ನಾನು, ಅಮ್ಮ ದೂರು ಉಳಿದಿದ್ದೆವು. ನಮ್ಮ ಅಮ್ಮ, ಅಕ್ಕಂದಿರಿಗೆ ಕಿರುಕುಳ ನೀಡುತ್ತಿದ್ದರು. ಈ ಮೂಲಕ ಅಕ್ಕಂದಿರ ಜೀವನವನ್ನೂ ಹಾಳು ಮಾಡಿದ್ದಾರೆ.

ಅಪ್ಪನ ಕೃತ್ಯದ ಬಗ್ಗೆ ಅಮ್ಮನಿಗೆ ಗೊತ್ತಿದೆ. ಅವಳಿಗೆ ಹಿಂಸೆ ಕೊಟ್ಟಿದ್ದಾನೆ. ಇದೇ ವಿಚಾರಕ್ಕೆ ಹಲವಾರು ಬಾರಿ ಗಲಾಟೆಗಳಾಗಿವೆ. ನಮ್ಮನ್ನು ಮನೆಯಲ್ಲಿ ಕೂಡಿ ಹಾಕಿದ್ದಾರೆ.ಅಪ್ಪನ ಕಿರುಕುಳದಿಂದ ಅಮ್ಮನಿಗೆ ನಿಮ್ಹಾನ್ಸನಲ್ಲಿ ಚಿಕಿತ್ಸೆ ಕೂಡ ನೀಡಲಾಗಿತ್ತು. ಈ ಹಿಂದೆ ಪೊಲೀಸ್ ಠಾಣೆಯಲ್ಲೂ ಅಪ್ಪನ ವಿರುದ್ಧ ದೂರು ದಾಖಲಾಗಿತ್ತು” ಮಗ ಮಾಧುಸಾಗರ್ ಆರೋಪ ಮಾಡಿದ್ದಾರೆ.

“ನನ್ನ ಅಕ್ಕಂದಿರ ಮನೆಯಲ್ಲಿ ಅವರ ಗಂಡಂದಿರಿಗೆ ಇಲ್ಲಸಲ್ಲದು ಹೇಳಿದ್ದಾರೆ. ಅಕ್ಕಂದಿರಿಗೆ ಏನನ್ನು ಮಾಡಿಲ್ಲ ಎಂದು ಅವರು ನಿತ್ಯ ಜಗಳವಾಡುತ್ತಿದ್ದರು. ಹೀಗಾಗಿ ಅವರು ನಮ್ಮ ಮನೆಯಲ್ಲೇ ಇದ್ಧಾರೆ. ನಮ್ಮ ಅಮ್ಮನಿಗೆ ಚಪ್ಪಲಿಯಲ್ಲಿ ಹೊಡೆದು ಅವಮಾನಿಸಿದ್ದಾರೆ. ಅಮ್ಮನಿಗೆ ಇನ್ನೊಂದು ಸಂಬಂಧ ಇದೆ ಎಂದು ಶಂಕಿಸಿದ್ದರು” ಎಂದು ಡೆತ್ ನೋಟ್ ನಲ್ಲಿ ಮಧುಸಾಗರ್ ಬರೆದಿದ್ದಾರೆ.

ಸದ್ಯ ಡೆತ್ ನೋಟ್ ಶಂಕರ್ ಗೆ ಕುತ್ತು ತರುವ ಆತಂಕ ಎದುರಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights