ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕರಣ : ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಉಳಿತು ಕಂದನ ಜೀವ!

ನಗರದ ಅಂಧ್ರಳ್ಳಿ ಮುಖ್ಯರಸ್ತೆಯ ಚೇತನ್ ಸರ್ಕಲ್​ನ ವಿನಾಯಕ ನಗರದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕರಣ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಶಂಕರ್ ಮಗುವನ್ನು ಎತ್ತಿಕೊಂಡು ಓಡುತ್ತಿರುವ ವಿಡಿಯೋ ವೈರಲ್​ ಆಗಿದೆ.

ಮೊದಲಿಗೆ ಕುಟುಂಬದ 6 ಜನರು ಮೃತಪಟ್ಟಿರುವ ಅನುಮಾನವನ್ನು ತಾತ ಶಂಕರ್ ವ್ಯಕ್ತಪಡಿಸಿದ್ದರು. ಆದರೆ, ನಿತ್ರಾಣವಾಗಿ ಬಿದ್ದಿದ್ದ ಮಗುವನ್ನು ಗಮನಿಸಿದ ಬ್ಯಾಡರಹಳ್ಳಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದ ಹಿನ್ನೆಲೆ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಕಂದನ ಪ್ರಾಣ ಉಳಿದಿದೆ.

ನಾಲ್ವರು ವಯಸ್ಕರು ಮನೆಯ ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ,  9 ತಿಂಗಳ ಮಗು ಶವವು ಹಾಸಿಗೆಯ ಮೇಲೆ ಪತ್ತೆಯಾಗಿದೆ. ಘಟನೆಯಲ್ಲಿ ಎರಡೂವರೆ ವರ್ಷದ ಬಾಲಕಿಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರನ್ನು ಭಾರತಿ (50), ಸಿಂಚನ(33), ಸಿಂಧುರಾಣಿ (30), ಮಧು ಸಾಗರ(27) ಎಂದು ಗುರುತಿಸಲಾಗಿದೆ.

ನಿನ್ನೆ ನೇಣಿನಲ್ಲಿ ನೇತಾಡುತ್ತಿದ್ದ ಕುಟುಂಬಸ್ಥರನ್ನು ನೋಡಿ ಶಾಕ್ ಆಗಿದ್ದ ಶಂಕರ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಮಗುವಿನ ಉಸಿರಾಟ ಗಮನಿಸಿದ ಇನ್ಸ್​ಪೆಕ್ಟರ್ ರಾಜೀವ್ ಕಂದ ಎಚ್ಚರವಾಗುತ್ತಿದ್ದಂತೆ ತಾತ‌ ಶಂಕರ್​ಗೆ ಆರೈಕೆ ಮಾಡಲು ನೀಡಿದ್ದಾರೆ. ಮೊಮ್ಮಗನನ್ನು ಎತ್ತಿಕೊಂಡ ಶಂಕರ್, ಯಾರದ್ರೂ ನೀರ್ ಕೊಡ್ರಪ್ಪ ಎಂದು ಓಡಿದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights