ಫ್ಯಾಕ್ಟ್‌ಚೆಕ್: ಇದು ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನದಲ್ಲಿ ನೀಡಲಾದ ಪ್ರಸಾದವಲ್ಲ!

ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನದಲ್ಲಿ ನೀಡಲಾದ ಪ್ರಸಾದವನ್ನು ಎಂದು ಹೇಳುವ ಪೋಸ್ಟ್ ಮೂಲಕ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನ ಶೀರ್ಷಿಕೆಯಲ್ಲಿ ಹೇಳಿರುವಂತೆ ಇಷ್ಟು ದೊಡ್ಡ ಪ್ರಮಾಣದಲ್ಲಿ ವೈಷ್ಣೋದೇವಿ ದೇವಸ್ಥಾನದಲ್ಲಿ ಪ್ರಸಾದ ನೀಡಲಾಗಿದೆಯೆ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಜೂನ್ 2017 ರಲ್ಲಿ ಪೋಸ್ಟ್ ಮಾಡಿದ ಫೇಸ್‌ಬುಕ್‌ನಲ್ಲಿ ಇದೇ ರೀತಿಯ ಫೋಟೋಗಳು ಕಂಡುಬಂದಿವೆ. ಫೇಸ್‌ಬುಕ್ ಪೋಸ್ಟ್ ಪ್ರಕಾರ, ಲಡ್ಡುಗಳನ್ನು ಅವರು 09 ಜೂನ್ 2017 ರಂದು ಆಚರಿಸುತ್ತಿದ್ದ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಲಾಗಿದೆ. ಫೋಟೋಗಳು ಹರಿಯಾಣದ ರೋಹ್ಟಕ್‌ಗೆ ಸಂಬಂಧಿಸಿವೆ ಎಂದು ಹೇಳಲಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿರುವ ವೈಷ್ಣೋದೇವಿ ದೇವಸ್ಥಾನಕ್ಕೆ ಸಂಬಂಧಿಸಿಲ್ಲ.

ಸಂತ ಕಬೀರ್ ದೇವರ  ಸ್ಮರಣಾರ್ಥವಾಗಿ ಆಚರಿಸುವ ಕಾರ್ಯಕ್ರಮದ ಭಾಗವಾಗಿ ಲಡ್ಡುಗಳನ್ನು ತಯಾರಿಸಲಾಗುತ್ತಿರುವ ಇದೇ ರೀತಿಯ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಸಂಬಂಧಿತ ಕೀವರ್ಡ್‌ಗಳೊಂದಿಗೆ ಆನ್‌ಲೈನ್‌ನಲ್ಲಿ ಹುಡುಕಿದಾಗ, ಆ ಸಮಯದಲ್ಲಿ ಹರಿಯಾಣದ ರೋಹ್ಟಕ್‌ನಲ್ಲಿ ನಡೆದ ಕಾರ್ಯಕ್ರಮದ ಕುರಿತು ಒಂದೆರಡು ವೀಡಿಯೊ ಕಥೆಗಳು (ಇಲ್ಲಿ ಮತ್ತು ಇಲ್ಲಿ) ಕಂಡುಬಂದವು. ದೃಶ್ಯಗಳು 09 ಜೂನ್ 2017 ರಂದು ಸಂತ ರಾಂಪಾಲ್ ಅವರ ‘ಕಬೀರ್ ಪರ್ಕತ್ ದಿವಸ್ ಭಂಡಾರಾ’ದ ಭಾಗವಾಗಿತ್ತು. ಇದು ಈವೆಂಟ್‌ಗೆ ಆಹ್ವಾನಿಸಿದ ಜನರಿಗೆ ಪ್ರಸಾದದ ರೂಪದಲ್ಲಿ ನೀಡಲಾಗಿದ್ದು, ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ಸಂಬಂಧಿಸಿಲ್ಲ ಎಂದು ತಿಳಿದುಬಂದಿದೆ.

ಸತ್ಲೋಕ್ ಆಶ್ರಮದ ಪ್ರಕಾರ (ಈವೆಂಟ್‌ನಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ), ಕಾಶಿಯಲ್ಲಿ ಮೊದಲ ಬಾರಿಗೆ (ವಾರಣಾಸಿ) ಯಲ್ಲಿ ಕಬೀರ್ ಪ್ರಕಟ್ ದಿವಸ್ ಅನ್ನು ‘1398 ರಲ್ಲಿ ಕಬೀರ ದೇವರ ನೆನಪಿಗಾಗಿ’ ಆಚರಿಸುವ ರೂಢಿ ಪ್ರಾರಂಭವಾಯಿತು. ಈ ಸಂದರ್ಭವನ್ನು ಭಂಡಾರ ಎಂದು ಆಚರಿಸಲಾಗುತ್ತದೆ, ಅಂತಹ ಮೊದಲ ಭಂಡಾರವನ್ನು 2017 ರಲ್ಲಿ ಹರಿಯಾಣದ ರೋಹ್ಟಕ್‌ನಲ್ಲಿ ಆಯೋಜಿಸಲಾಯಿತು.

ಒಟ್ಟಾರೆಯಾಗಿ ಹೇಳುವುದಾದರೆ, ಈ ಫೋಟೋವು ವೈಷ್ಣೋ ದೇವಿ ದೇವಸ್ಥಾನದಲ್ಲಿ ನೀಡಲಾದ ಪ್ರಸಾದವನ್ನು ತೋರಿಸುವುದಿಲ್ಲ. ಇದು ಹರಿಯಾಣದ ‘ಭಂಡಾರಾ’ ಪದ್ದತಿಯಾಗಿದ್ದು ಕಾಶಿ(ವಾರಣಾಸಿ)ಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. 09 ಜೂನ್ 2017 ರಂದು ಹರಿಯಾಣದ ರೋಹ್ಟಕ್‌ನಲ್ಲಿರುವ ಸಂತ ರಾಂಪಾಲ್ ಅವರ ‘ಕಬೀರ್ ಪ್ರಕಟ್ ದಿವಾಸ್ ಭಂಡಾರಾ’ದ ಭಾಗವಾಗಿರುವ ಫೋಟೋ ಜಮ್ಮು ಮತ್ತು ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನದಿಂದಲ್ಲ. ಕಾರ್ಯಕ್ರಮಕ್ಕೆ ಆಹ್ವಾನಿತರಾದ ಜನರಿಗೆ ಇದು ಉಚಿತವಾಗಿ ನೀಡುವ ಊಟವಾಗಿತ್ತು. ಅಂತಹ ಮೊದಲ ಭಂಡಾರವನ್ನು 2017 ರಲ್ಲಿ ಹರಿಯಾಣದ ರೋಹ್ಟಕ್‌ನಲ್ಲಿ ಆಯೋಜಿಸಲಾಯಿತು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಯೇಸುವನ್ನು ಪ್ರಾರ್ಥಿಸಿ ಸತ್ತ ಮಗುವನ್ನು ಉಳಿಸಿಕೊಂಡ ತಾಯಿ! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.