ಫ್ಯಾಕ್ಟ್‌ಚೆಕ್: ಪ್ರವಾದಿ ನಿಂದನೆ ಖಂಡಿಸಿ ಕೈಲಾಸದ ಸ್ವಾಮಿ ನಿತ್ಯಾನಂದರು ಸಹ ಟ್ವೀಟ್ ಮಾಡಿದರೆ?

ಬಿಜೆಪಿ ಮುಖಂಡರು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಗಲ್ಫ್ ರಾಷ್ಟ್ರಗಳು ಭಾರತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದವು. ಟ್ವೀಟ್ ಮಾಡಿ ಖಂಡಿಸಿ, ಭಾರತದ ರಾಯಬಾರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದವು. ಆ ಬೆನ್ನಲ್ಲೆ ನೂಪುರ್ ಶರ್ಮ ಮತ್ತು ನವೀನ್ ಜಿಂದಾಲ್ ಅವರನ್ನು ಪಕ್ಷದಿಂದ ಅಮಾನತ್ತು ಮಾಡಲಾಗಿತ್ತು. ಈಗ  “ಕೈಲಾಸ ರಾಷ್ಟ್ರದ ದೇವಮಾನವ ಸ್ವಾಮಿ ನಿತ್ಯಾನಂದರ (ಭಾರತದಿಂದ ಪರಾರಿಯಾಗಿ ದ್ವೀಪ ರಾಷ್ಟ್ರ ಕಟ್ಟಿಕೊಂಡ) ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಹ  ಟ್ವೀಟ್‌ ಮಾಡಿದ್ದು ಭಾರತದ ರಾಜಕಾರಣಿಗಳನ್ನು  ಖಂಡಿಸಿದೆ ಎನ್ನುವ ಪೋಸ್ಟ್ ಒಂದು ವೈರಲ್ ಆಗುತ್ತಿದೆ.

 

ಪ್ರವಾದಿ ಮೊಮ್ಮದ್ ಅವರನ್ನು ನಿಂದನಾತ್ಕಕ ಹೇಳಿಕೆಯನ್ನು ಖಂಡಿಸಿ ನಿತ್ಯಾನಂದಸ್ವಾಮಿಯಿಂದ ಟ್ವೀಟ್ ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ
ಪ್ರವಾದಿ ಮೊಮ್ಮದ್ ಅವರನ್ನು ನಿಂದನಾತ್ಮಕ ಹೇಳಿಕೆಯನ್ನು ಖಂಡಿಸಿ ನಿತ್ಯಾನಂದಸ್ವಾಮಿ ಮಾಡಿರುವ ಟ್ವೀಟ್ ಸಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ

HW News ಸ್ವಾಮಿ ನಿತ್ಯಾನಂದನ ಕೈಲಾಸ ರಾಷ್ಟ್ರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಬಂದಿದೆ ಎನ್ನಲಾದ ಟ್ವೀಟ್‌ಅನ್ನು ಶೇರ್ ಮಾಡಿದೆ. ಈ ಟ್ವೀಟ್‌ನ ಸತ್ಯಾಸತ್ಯತೆ ಮತ್ತು ಪೋಸ್ಟ್‌ ನಿಜವಾಗಿಯೂ ಕೈಲಾಸ ರಾಷ್ಟ್ರದಿಂದ ಬಂದಿದೆಯೇ ಎಂದು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಕೈಲಾಸ ರಾಷ್ಟದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (@MoFA_Kailasa) ಟ್ವಿಟರ್ ಖಾತೆಯನ್ನು ಸರ್ಚ್ ಮಾಡಿದಾಗ ಅದು ಜೂನ್ 6 ರಿಂದ ಕೇವಲ ಮೂರು ಟ್ವೀಟ್‌ಗಳನ್ನು ಹೊಂದಿದೆ ಎಂದು ತಿಳಿದು ಬಂದಿದೆ.

Twitter ಬಳಕೆದಾರ ID ಅನ್ನು ಪರಿಶೀಲಿಸಿದ್ದೇವೆ, ಅದು 1444720326202441731 ಆಗಿತ್ತು. ಯಾವುದೇ ಖಾತೆಯ Twitter ID ಅನನ್ಯ ಮೌಲ್ಯವಾಗಿದ್ದು, ಬಳಕೆದಾರರು ಅದರ ಹ್ಯಾಂಡಲ್ ಅನ್ನು ಬದಲಾಯಿಸಿದಾಗಲೂ ಅದನ್ನು ಬದಲಾಯಿಸಲಾಗುವುದಿಲ್ಲ.

ಕೈಲಾಸದ ವಿದೇಶಾಂಗ ಸಚಿವಾಲಯದ ಪರಿಶೀಲಿಸಿದ Twitter ಹ್ಯಾಂಡಲ್‌ಗಳನ್ನು ಸರ್ಚ್ ಮಾಡಿದಾಗ ಪ್ರತ್ಯೇಕ ಟ್ವೀಟರ್ ಖಾತೆ ಲಭ್ಯವಾಗಿಲ್ಲ. ನಂತರ ನಾವು ವೆಬ್‌ಸೈಟ್‌ ಅನ್ನು ಸರ್ಚ್‌ ಮಾಡಲಾಗಿದ್ದು, ಕೈಲಾಸದ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾದ ಟ್ವಿಟರ್ ಖಾತೆಯು ಸ್ವಾಮಿ ನಿತ್ಯಾನಂದ ಅವರ ಟ್ವಿಟರ್ ಖಾತೆಗೆ ನೇರ ಲಿಂಕ್ ಆಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಖಾತೆಯು ನಕಲಿ ಎಂದು ಹೇಳುವ ಟ್ವೀಟ್ ಅನ್ನು ಕೈಲಾಸದ ಅಧಿಕೃತ ವೆಬ್‌ಸೈಟ್‌ಗೆ ಲಿಂಕ್‌ ಆಗಿರುವ ಟ್ವಿಟರ್ ಖಾತೆಯಲ್ಲಿ ಕಂಡುಬಂದಿದೆ. ಅದನ್ನು ಇಲ್ಲಿ ನೋಡಬಹುದು.

ಈ ರೀತಿಯ ಯಾವುದೇ ಟ್ವೀಟ್ ಮಾಡಿಲ್ಲ, ವೈರಲ್ ಆಗಿರುವ ಖಂಡನಾ ಹೇಳಿಕೆಯ ಟ್ವೀಟ್‌ ನಕಲಿ ಎಂದು ಸ್ವತಃ ನಿತ್ಯಾನಂದ ಸ್ವಾಮಿಯವರ ಖಾತೆಯಿಂದ ಟ್ವೀಟ್ ಮಾಡಿದ್ದಾರೆ. “ಇದು ಕೈಲಾಸದ ವಿದೇಶಾಂಗ ಸಚಿವಾಲಯದ ಅಧಿಕೃತ ಖಾತೆಯಲ್ಲ ಮತ್ತು ನಕಲಿ ಖಾತೆ ಎಂದು ನಾವು ಎಲ್ಲಾ ಕೈಲಾಸವಾಸಿಗಳು, ಭಕ್ತರು ಮತ್ತು ಎಲ್ಲರಿಗೂ ಎಚ್ಚರಿಕೆ ನೀಡಲು ಬಯಸುತ್ತೇವೆ” ಎಂದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರವಾದಿ ಮುಹಮ್ಮದ್ ಅವರ ಬಗ್ಗೆ BJPಯ ನೂಪುರ್ ಶರ್ಮ ಮತ್ತು ನವೀನ್ ಜಿಂದಾಲ್ ಮಾಡಿದ್ದ ಆಕ್ಷೇಪಾರ್ಹ ಹಾಗೂ ನಿಂದನಾತ್ಮಕ ಹೇಳಿಕೆಯನ್ನು ಖಂಡಿಸಿ ಕೈಲಾಸದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿತ್ತು ಎನ್ನುವುದು ಸುಳ್ಳು.  ಕೈಲಾಸ ರಾಷ್ಟ್ರದ ಹೆಸರಿನಲ್ಲಿ ಮಾಡಲಾಗಿದ್ದ ಟ್ವೀಟ್ ನಕಲಿ ಖಾತೆಯಿಂದ  ಮಾಡಲಾಗಿದೆ. ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಸುದ್ದಿ ಸಂಸ್ಥೆಗಳಾದ HW ನ್ಯೂಸ್ ಮತ್ತು ಒನ್ ಇಂಡಿಯಾ ತಮಿಳು ಇದನ್ನು ಸತ್ಯವೆಂದು ನಂಬಿ ಹಂಚಿಕೊಂಡಿದ್ದಾರೆ. ಆದರೆ ಇದೊಂದು ಫೇಕ್ ಅಕೌಂಟ್‌ನಿಂದ ಹಂಚಿಕೊಳ್ಳಲಾಗಿರುವ ಟ್ವೀಟ್‌ ಆಗಿದೆ. ಸ್ವಾಮಿ ನಿತ್ಯಾನಂದ ಅವರ ಕೈಲಾಸ ರಾಷ್ಟ್ರದ ಅಧಿಕೃತ ವೆಬ್‌ಸೈಟ್‌ನಲ್ಲಿ ಟ್ವೀಟ್‌ಅನ್ನು ನಕಲಿ ಎಂದು ಘೋಷಿಸಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೋದಿ ಮಾಸ್ಟರ್ ಸ್ಟ್ರೋಕ್‌ಗೆ ಬೆಚ್ಚಿದ್ವಂತೆ ಅರಬ್ ರಾಷ್ಟ್ರಗಳು! ಯಪ್ಪಾ ಎಂಥಾ ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.