ಬೆಂಗಳೂರಿನ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ಅಂತ್ಯ; ತಿಂಗಳ ಕೊನೆಗೆ ಪ್ರಾಯೋಗಿಕ ಸಂಚಾರ!

ಬೆಂಗಳೂರಿನ ನಮ್ಮ ಮೆಟ್ರೊದ ಎರಡನೇ ಹಂತದ ಕಾಮಗಾರಿಗಳಲ್ಲಿ ಒಂದಾದ ಯಲಚೇನಹಳ್ಳಿಯಿಂದ ಅಂಜನಾಪುರ (ರೀಚ್ -4 ಬಿ ಲೈನ್) ವರೆಗಿನ ವಿಸ್ತರಣೆಯು ಬಹುತೇಕ ಪೂರ್ಣಗೊಂಡಿದ್ದು ಮೆಟ್ರೋ ರೈಲುಗಳ ಪ್ರಾಯೋಗಿಕ ಪರೀಕ್ಷೆ ಈ ತಿಂಗಳ ಕೊನೆಯಲ್ಲಿ ನಡೆಯಲಿದೆ. ಯಲಚೇನಹಳ್ಳಿಯಿಂದ ಅಂಜನಾಪುರ (ರೀಚ್ -4 ಬಿ ಲೈನ್) ವರೆಗಿನ ಈ 6.29 ಕಿ.ಮೀ ಗಳಿದ್ದು ಮೆಟ್ರೋ ರೈಲು ನವೆಂಬರ್ ಅಂತ್ಯದ ವೇಳೆಗೆ ಶುರು ಆಗಲಿದೆ.

ಈಗಾಗಲೇ ಯಲಚೇನಹಳ್ಳಿವರೆಗೆ ಮೆಟ್ರೋ ಸೌಕರ್ಯವಿದ್ದು ಪ್ರಸ್ತುತ ಹೊಸ ಮಾರ್ಗ ಕೋಣನಕುಂಟೆ ಕ್ರಾಸ್ (ಹಿಂದಿನ ಅಂಜನಾಪುರ ಕ್ರಾಸ್ ರಸ್ತೆ), ದೊಡ್ಡಕಲ್ಲಸಂದ್ರ , ವಜ್ರಹಳ್ಳಿ, ತಲಘಟ್ಟಪುರ ಮೂಲಕ ಅಂಜನಾಪುರದ ತಲುಪಲಿದೆ. ಒಟ್ಟು ಐದು ಎತ್ತರ ಮೆಟ್ರೋ ರೈಲ್ ನಿಲ್ದಾಣಗಳನ್ನು ಹೊಂದಿದೆ. ಮೆಟ್ರೊ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್ಸಿಎಲ್) ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ ಎಲ್ ಯಶ್ವಂತ್ ಚವಾನ್ ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್‌ಗೆ ಮಾತನಾಡಿ, “ಈಗಾಗಲೇ ಶೇ. 90 ರಷ್ಟು ಕಾಮಗಾರಿ ಮುಗಿದಿದ್ದು ಸಿಗ್ನಲ್ ಕೆಲಸ ಪ್ರಾರಂಭವಾಗಿದೆ. ಆಗಸ್ಟ್ ಅಂತ್ಯದ ವೇಳೆಗೆ ಟ್ರಯಲ್ ರನ್ ಪ್ರಾರಂಭವಾಗಲಿವೆ” ಎಂದು ತಿಳಿಸಿದರು

ಉಳಿದ ಕೆಲಸಗಳನ್ನು ನಿರ್ವಹಿಸಲು ಎರಡು ತಿಂಗಳ ಕಾಲಾವಕಾಶ ಇರುತ್ತದೆ. ಮೆಟ್ರೊ ರೈಲು ಸುರಕ್ಷತೆಯ ಆಯುಕ್ತರು ಈ ಮಾರ್ಗದಲ್ಲಿ ರೈಲುಗಳನ್ನು ಓಡಿಸಲು ಹಸಿರು ಸಂಕೇತವನ್ನು ನೀಡಬೇಕಾಗಿದೆ.” ಎರಡನೇ ಹಂತದ ಮೆಟ್ರೋ ಕಾಮಗಾರಿಯಲ್ಲಿ ಪೂರ್ಣಗೊಳ್ಳಲಿರುವ ಮೊದಲ ವಿಸ್ತರಣ ಯೋಜನೆ ಇದಾಗಿದೆ. 2018 ಪೂರ್ಣಗೊಳ್ಳಬೇಕಿದ್ದ ಈ ವಿಸ್ತರಣಾ ಕಾಮಗಾರಿ ಈ ವರ್ಷದ ಸ್ವತಂತ್ರ ದಿನಕ್ಕೆ ಕಾರ್ಯಾರಂಭವಾಗಬೇಕಿತ್ತು. ಆದರೆ ಕೋವಿಡ್ -19 ನಿಂದ ಕಾಮಗಾರಿ ಕೆಲಸ ವಿಳಂಬ ಆಗಿದೆ ಎಂದು ತಿಳಿಸಿದರು.


ಇದನ್ನೂ ಓದಿಕೊರೊನಾದಿಂದ ನಷ್ಟ ಅನುಭವಿಸಿದ ರಾಜ್ಯ; ರಾಜಧಾನಿಯ ಪರಿಸರಕ್ಕೆ ಲಾಭ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights