ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಪ್ಯಾರಾ ಗ್ಲೈಡಿಂಗ್ : ಸಾರ್ವಜನಿಕರ ಆಕಾಶ ವಿಹಾರ

ಹಾಸನದ ಅಧಿದೇವತೆ ಹಾಸನಾಂಬ ದೇವಿ ದರ್ಶನಕ್ಕೆ ನಾಲ್ಕನೇ ದಿನ ಭಕ್ತರ ಸಂಖ್ಯೆಯಲ್ಲಿ ಬಾರಿ ಇಳಿಕೆಯಾಗಿದೆ. ಭಕ್ತರು ಸುಲಭವಾಗಿ ಶೀಘ್ರದಲ್ಲಿ ದೇವಿಯ ಕಣ್ಣು ತುಂಬಿಸಿಕೊಳ್ಳುತ್ತಿದ್ದು, ಚಿತ್ರನಟಿ ತಾರಾ ಕೂಡ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮತ್ತೊಂದು ವಿಶೇಷ ಅಂದ್ರೆ ಇದೇ ಮೊದಲ ಬಾರಿಗೆ ಹಾಸನಾಂಬ ಜಾತ್ರಾ ಮಹೋತ್ಸದ ಅಂಗವಾಗಿ ಪ್ಯಾರಾ ಗ್ಲೈಡಿಂಗ್ ಆಯೋಜನೆ ಮಾಡಿದ್ದು, ಸಾರ್ವಜನಿಕರು ಆಕಾಶ ವಿಹಾರ ಮಾಡಬಹುದಾಗಿದೆ. ಈ ಬಾರಿ ಒಟ್ಟು 13 ದಿನಗಳ ಕಾಲ ದೇವಿಯ ದರ್ಶನ ಇರುವ ಕಾರಣ ಭಕ್ತರ ಸಂಖ್ಯೆ ಕೊಂಚ ಇಳಿಮುಖವಾಗಿದೆ.

ವರ್ಷಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆಯ ದರ್ಶನಕ್ಕೆ ಇಂದು ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ವೀಕೆಂಡ್ ಆಗಿದ್ದರಿಂದ ಭಕ್ತಾಸಾಗರವೇ ಹರಿದು ಬಂದಿತ್ತು. ಆದ್ರೆ ಇಂದು ಸರತಿ ಸಾಲುಗಳು ಖಾಲಿ ಖಾಲಿ ಹೊಡೆಯುತ್ತಿದವು.. ಈ ಮದ್ಯೆ ಚಿತ್ರನಟಿ ತಾರಾ ಹಾಸನಾಂಬೆ ದರ್ಶನ ಪಡೆದು, ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿದರು… ನಂತರ ಮಾತನಾಡಿದ ತಾರಾ ಪ್ರತಿವರ್ಷದಂತೆ ಈ ಬಾರಿಯೂ ದೇವಿ ದರ್ಶನ ಪಡೆದಿದ್ದೇನೆ.. ಕಳೆದ ಬಾರಿ ಬೇಡಿಕೊಂಡಿದ್ದ ಬೇಡಿಕೆ ಈಡೇರಿದೆ.. ಈ ಬಾರಿ ಕೆಲವು ಹರಕೆ ಬೇಡಿಕೊಂದಿದ್ದೇನೆ ಎಂದು ತಾಯಿಯ ಮಹತ್ವನ್ನು ವರ್ಣನೆ ಮಾಡಿದ್ರು,,,

ಹಾಸನಾಂಬ ಜಾತ್ರಾ ಮಹೋತ್ಸವ ಪ್ರಯುಕ್ತ ಇದೇ ಮೊದಲ ಬಾರಿಗೆ ಹಾಸನದ ಬೂವನಹಳ್ಳಿ ವಿಮಾನ ನಿಲ್ದಾಣ ದಲ್ಲಿ ಪ್ಯಾರಾ ಗ್ಲೈಡಿಂಗ್ ಆಯೋಜನೆ ಮಾಡಲಾಗಿದೆ.. ಪ್ಯಾರಾ ಸೇಲಿಂಗ್ ಹಾಗೂ ಪ್ಯಾರಾ ಮೋಟರಿಂಗ್ ಎರಡು ಬಗೆಯ ಸಾಹಸ ಕ್ರೀಡೆ ಇರಲಿದ್ದು, ಪ್ಯಾರಾ ಸೇಲಿಂಗ್ ಗೆ ತಲಾ 500 ಹಾಗೂ ಪ್ಯಾರಾ ಮೋಟರಿಂಗ್ ‌ಗೆ 1800 ರೂ ಕೊಟ್ಟು, 6 ನಿಮಿಷಗಳ ಕಾಲ ಆಕಾಶದಲ್ಲಿ ವಿಹಾರ ಮಾಡಬಹುದು. ಆಕಾಶದಿಂದ ಹಾಸನ ನಗರವನ್ನ ಕಣ್ತುಂಬಿಸಿಕೊಳ್ಳಬಹುದಾಗಿದೆ.

ಕಳೆದ ಮೂರು ದಿನಗಳಿಂದ 1000 ರೂ ಟಿಕೆಟ್ ನಿಂದ 20 ಲಕ್ಷ ಹಾಗೂ 300 ಟಿಕೆಟ್ ನಿಂದ 5.5 ಲಕ್ಷ ಹಣ ಸಂಗ್ರಹವಾಗಿದ್ದು, ಈ ಬಾರಿ ದೇವಾಲಯಕ್ಕೆ ಹೆಚ್ಚು ಆದಾಯ ಬರುವ ನಿರೀಕ್ಷೆ ಇದೆ.. ಇನ್ನೂ ಹಾಸನಾಂಬೆ ದರ್ಶನಕ್ಕೆ ಏಳು ದಿನಗಳು ಬಾಕಿ ಇದ್ದು, ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಭಕ್ತರು ಬಂದು ದರ್ಶನ ಪಡೆಯುತ್ತಿದ್ದಾರೆ. ನಾಳೆ ಮಾಜಿ ಪ್ರಧಾನಿ ದೇವೇಗೌಡರು ಕುಟುಂಬ ಸಮೇತ ಆಗಮಿಸಿ ದೇವಿಯ ದರ್ಶನ ಪಡೆಯುವ ಸಾಧ್ಯತೆ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights