FACT CHECK | ಹೈದರಾಬಾದ್ನ ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 35 ಜನ ಸಾವನಪ್ಪಿದ್ದಾರೆ ಎಂಬುದು ಸುಳ್ಳು
ದೀಪಾವಳಿಯ ಸಂದರ್ಭದಲ್ಲಿ ಹೈದರಾಬಾದ್ನ ಪಟಾಕಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಸ್ಪೋಟಗೊಂಡಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿಯಲ್ಲಿ 35 ಜನರು ಸಾವನ್ನಪ್ಪಿದ್ದಾರೆ ಎಂದು ಕೆಲವು ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ಸ್ಟಾಗ್ರಾಮ್ ಬಳಕೆದಾರರು ಅಕ್ಟೋಬರ್ 28 ರಂದು ವಿಡಿಯೋವನ್ನು (ಆರ್ಕೈವ್ ಲಿಂಕ್) vedikatextile_degana ಹಂಚಿಕೊಂಡಿದ್ದಾರೆ. “ದೀಪಾವಳಿಗೆ ಮೊದಲು ಪಟಾಕಿ ಕಾರ್ಖಾನೆಯಲ್ಲಿ ಎಷ್ಟು ಜೀವಗಳು ಕಳೆದುಹೋದವು?” ಎಂಬ ಶೀರ್ಷಿಕೆ ನೀಡಲಾಗಿದೆ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ಅನ್ನು ಪರಿಶೀಲಿಸಲು, ಕೀವರ್ಡ್ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ, ಟೈಮ್ಸ್ ಆಫ್ ಇಂಡಿಯಾ ಹೈದರಾಬಾದ್ನ ಎಕ್ಸ್ ಹ್ಯಾಂಡಲ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದು ಹೈದರಾಬಾದ್ನಲ್ಲಿ ನಡೆದ ಅಪಘಾತ ಎಂದು ಬಣ್ಣಿಸಿದೆ. ಅಕ್ಟೋಬರ್ 28 ರಂದು ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಅಕ್ಟೋಬರ್ 27 ರಂದು ಪಟಾಕಿಗಳ ಸಗಟು ವ್ಯಾಪಾರಿಯ ಮಾಲೀಕತ್ವದ ಪ್ಯಾರಾಸ್ ಫೈರ್ ಕ್ರ್ಯಾಕರ್ಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
A major #fire broke out in a wholesale firecrackers store in Bogulkunta in #Abids on Sunday. The incident occurred at Paras fire crackers, which was completely engulfed in flames. Just a few moments before the blaze spread to the entire building, there was a stampede when… pic.twitter.com/e12CiP65tj
— TOI Hyderabad (@TOIHyderabad) October 28, 2024
ಟೈಮ್ಸ್ ಆಫ್ ಇಂಡಿಯಾದ ವೆಬ್ಸೈಟ್ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಬೆಂಕಿ ಅಪಘಾಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಅಪಘಾತದಲ್ಲಿ ಕೆಲವು ವಾಹನಗಳು ಸುಟ್ಟುಹೋಗಿವೆ.

ಈ ಅಪಘಾತದ ಬಗ್ಗೆ ಮಾಹಿತಿಯನ್ನು ಅಕ್ಟೋಬರ್ 27 ರಂದು ಎಎನ್ಐ ಎಕ್ಸ್ ಹ್ಯಾಂಡಲ್ನಿಂದ ಪೋಸ್ಟ್ ಮಾಡಲಾಗಿದೆ. ಅಂಗಡಿಯು ಕಾನೂನು ಬಾಹಿರವಾಗಿ ನಡೆಯುತ್ತಿತ್ತು. ಅಪಘಾತದಲ್ಲಿ ರೆಸ್ಟೋರೆಂಟ್ ಗೆ ತೀವ್ರ ಹಾನಿಯಾಗಿದ್ದು, ಏಳರಿಂದ ಎಂಟು ವಾಹನಗಳು ಸುಟ್ಟುಹೋಗಿವೆ. ಅಪಘಾತದಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಬಗ್ಗೆ ನಾವು ಹೈದರಾಬಾದ್ ಮೂಲದ ಪತ್ರಕರ್ತ ಹರ್ಷ ಅವರನ್ನು ಸಂಪರ್ಕಿಸಿದ್ದೇವೆ. ಈ ಅಪಘಾತದಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಹೈದರಾಬಾದ್ನ ಜಿಲ್ಲಾ ಅಗ್ನಿಶಾಮಕ ಅಧಿಕಾರಿ (ಡಿಎಫ್ಒ), ಟಿ. ವೆಂಕಣ್ಣ, ಘಟನೆ ನಡೆದ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿರುವ ತೆರೆದ ಪ್ರದೇಶದಲ್ಲಿ ಸ್ಟಾಲ್ ಸ್ಥಾಪಿಸಲು ಸಿಂಗ್ 15 ದಿನಗಳ ತಾತ್ಕಾಲಿಕ ಪರವಾನಗಿಯನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ವರದಿಯಲ್ಲಿ ಯಾವುದೇ ಸಾವು ನೋವುಗಳ ಉಲ್ಲೇಖವಾಗಿಲ್ಲ. ಆದರೆ ಹತ್ತಿರದ ರೆಸ್ಟೋರೆಂಟ್ನ ಇಬ್ಬರು ಮನೆಗೆಲಸದ ಸಿಬ್ಬಂದಿಗೆ ಸಣ್ಣ ಸುಟ್ಟ ಗಾಯಗಳಾಗಿವೆ ಎಂದು ಉಲ್ಲೇಖಿಸಿದೆ. ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಹಿಂದೂಸ್ತಾನ್ ಟೈಮ್ಸ್ ಕೂಡ ಘಟನೆಯನ್ನು ವರದಿ ಮಾಡಿದೆ ಮತ್ತು ಯಾವುದೇ ಸಾವುನೋವುಗಳನ್ನು ಉಲ್ಲೇಖಿಸಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಹೈದರಾಬಾದ್ನ ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮಹಿಳೆಯೊಬ್ಬರು ಗಾಯಗೊಂಡ ಬಗ್ಗೆ ವರದಿಯಾಗಿದ್ದು ಯಾವುದೇ ಸಾವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಹಾಗಾಗಿ ಹೈದರಾಬಾದ್ನ ಪಟಾಕಿ ಅಂಗಡಿಯಲ್ಲಿ ಸಂಭವಿಸಿದ ಬೆಂಕಿ ಅಪಘಾತದಲ್ಲಿ 35 ಜನರು ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆ ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ದಳಪತಿ ವಿಜಯ್ ಭಾಷಣದ ವಿಡಿಯೋವನ್ನು ಎಡಿಟ್ ಮಾಡಿ ಹಂಚಿಕೆ

