ಫ್ಯಾಕ್ಟ್‌ಚೆಕ್: ಪ್ರವಾದಿ ನಿಂದಿಸಿದ್ದ ನೂಪುರ್ ಶರ್ಮಾ ಬಂಧನ ನಿಜವೇ?

ಪ್ರವಾದಿ ಮುಹಮ್ಮದ್ ಅವರ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ಬಂಧಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ, ಮಹಿಳೆಯನ್ನು ಪೊಲೀಸರು ಎಳೆದೊಯ್ಯೂತ್ತಿರುವ ದೃಶ್ಯಗಳ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ನೂಪುರ್ ಶರ್ಮಾ ಅವನ್ನು ಬಂಧಿಸಲಾಗಿದೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.


ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ,  ವೀಡಿಯೊಗೆ ಸಂಬಂಧಿಸಿದ ಯಾವುದೇ ಸ್ಪಷ್ಟ ಮಾಹಿತಿ ಕಂಡುಬಂದಿಲ್ಲ. ನಂತರ, ಕೆಲವು ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ, ವಿಡಿಯೊಗೆ  ಸಂಬಂಧಿಸಿದ ಮಾಹಿತಿಗಳು  ಫೇಸ್‌ಬುಕ್‌ನಲ್ಲಿ ಲಭ್ಯವಾಗಿವೆ. ಮೂಲ ವಿಡಿಯೋದಲ್ಲಿರುವ ಮಾಹಿತಿ ಪ್ರಕಾರ ವೈರಲ್ ವೀಡಿಯೊದಲ್ಲಿರುವ ಮಹಿಳೆ ನೂಪುರ್ ಶರ್ಮಾ ಅಲ್ಲ, ಭೂಮಿ ಬಿರ್ಮಿ ಎಂದು ತಿಳಿದುಬಂದಿದೆ.  ಫೇಸ್‌ಬುಕ್ ಬಳಕೆದಾರರು ತಮ್ಮ ಪೋಸ್ಟ್‌ನಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರ ಕೂಡ ಅದನ್ನೇ ಬರೆದಿದ್ದಾರೆ.

ಭೂಮಿ ಬಿರ್ಮಿ ಅವರ ಫೇಸ್‌ಬುಕ್ ಪ್ರೊಫೈಲ್ ಅನ್ನು ನೋಡಿದಾಗ, ವೈರಲ್ ವೀಡಿಯೊದ ವಿಸ್ತೃತ ಆವೃತ್ತಿ ಕಂಡುಬಂದಿದೆ. ತಮ್ಮ ‘ಪರಿಚಯ’ ವಿಭಾಗದಲ್ಲಿ, ಅವರು “ಜಿಲ್ಲಾ ಅಧ್ಯಕ್ಷರು, ಮಹಿಳಾ ವಿಭಾಗ, ಭಾರತೀಯ ಕಿಸಾನ್ ಸಂಘ , ಚುರು” ಎಂದು ಬರೆದುಕೊಂಡಿದ್ದಾರೆ. ವೀಡಿಯೊದಲ್ಲಿನ ಘಟನೆಗೆ ಸಂಬಂಧಿಸಿದ ಅವರ ಇತರ ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಅಲ್ಲದೆ, ನೂಪುರ್ ಶರ್ಮಾ ಅವರನ್ನು ಬಂಧಿಸಿರುವ ಬಗ್ಗೆ ಯಾವುದೇ ವರದಿಗಳಿಲ್ಲ. ನೂಪುರ್ ಶರ್ಮಾ ಅವರಿಗೆ ಕೊಲ್ಕತ್ತಾ ಪೊಲೀಸರು ವಿಚಾರಣೆಗಾಗಿ ಹಾಜರಾಗುವಂತೆ ಸೂಚನೆ ನೀಡಿತ್ತು. ಆದರೆ  “ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದಾಗ  ಜೀವ ಬೆದರಿಕೆ ಇದೆ ಎಂಬ ಕಾರಣ ನೀಡಿ ಕೋಲ್ಕತ್ತಾ ಪೊಲೀಸರ ಮುಂದೆ ಹಾಜರಾಗಲು ನಾಲ್ಕು ವಾರಗಳ ಕಾಲಾವಕಾಶವನ್ನು ಕೇಳಿದ್ದಾರೆ” ಎಂದು 20 ಜೂನ್ 2022 ರಂದು, ‘ಇಂಡಿಯಾ ಟುಡೇ’ ವರದಿ ಮಾಡಿತು. ಇದನ್ನು ಹೊರತು ಪಡಿಸಿ ಪ್ರವಾದಿಯವರನ್ನು ನಿಂದಿಸಿದ್ದಕ್ಕೆ ಪೊಲೀಸರು ನೂಪುರ್ ಶರ್ಮಾ ಅವರನ್ನು ಬಂಧಿಸಿದ್ದಾರೆ ಎಂಬ ಸುದ್ದಿ ಸುಳ್ಳು.

ಒಟ್ಟಾರೆಯಾಗಿ ಹೇಳುವುದಾದರೆ, ನೂಪುರ್ ಶರ್ಮಾ ಬಂಧನಕ್ಕೊಳಗಾದ ದೃಶ್ಯಗಳು ಎಂದು ಸಂಬಂಧವಿಲ್ಲದ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರೀ: ಫ್ಯಾಕ್ಟ್‌ಚೆಕ್: ಹಿಂದೂಗಳಿಗೆ ರಾಸಾಯನಿಕ ಮಿಶ್ರಿತ ಆಹಾರ ನೀಡುವಂತೆ ಮುಸ್ಲಿಮರಿಂದ ಪತ್ವಾ! ವಾಸ್ತವವೇನು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.