ಫ್ಯಾಕ್ಟ್ಚೆಕ್: ಗುಜರಾತ್ನಲ್ಲಿ ಮೊಸಳೆಯನ್ನು ರಕ್ಷಿಸಿದ ಹಳೆಯ ವಿಡಿಯೊವನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೆ
ಇತ್ತೀಚೆಗೆ ಅಸ್ಸಾಂನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದ್ದವು, ಎಲ್ಲಿ ನೋಡಿದರೂ ನೀರು, ಜನಬಿಡದಿ ಪ್ರದೇಶದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿರುವ ದೃಶ್ಯ ಸಾಮಾನ್ಯವಾಗಿತ್ತು. ಇದೇ ಸಂದರ್ಭದಲ್ಲಿ ಜಲಾವೃತವಾದ ಬೀದಿಗಳಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದು ಜನ ಭಯಬೀತಗೊಂಡಿದ್ದಾರೆ, ಮೊಸಳೆಯನ್ನು ಹಿಡಿಯಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್ಡಿಆರ್ಎಫ್ ತಂಡ) ಶ್ರಮಿಸಿದ್ದು, ಮೊಸಳೆಯನ್ನು ರಕ್ಷಿಸಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.
ಹೈಲಕಂಡಿ ಎಸ್ಎಸ್ ಕಾಲೇಜಿನ ಹತ್ತಿರ ಮೊಸಳೆ ರಕ್ಷಣೆ. ಇಷ್ಟು ದೊಡ್ಡ ಮೊಸಳೆ ಎಲ್ಲಿಂದ ಬಂದಿದೆ? ಎಂಬ ಬರಹದೊಂದಿಗೆ ಫೇಸ್ಬುಕ್ನಲ್ಲಿ ಪೋಸ್ಟ್ಅನ್ನು ಹಂಚಿಕೊಳಲಾಗಿದೆ. ಈ ವಿಡಿಯೋ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ
ಏನ್ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಫ್ಯಾಕ್ಟ್ಚೆಕ್:
ವೀಡಿಯೊದ ಸ್ಕ್ರೀನ್ಶಾಟ್ ಬಳಸಿ Google ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, 7 ಆಗಸ್ಟ್ 2019 ರಂದು ‘Minglemine’ ಎಂಬ YouTube ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ ವೀಡಿಯೊ ಲಭ್ಯವಾಗಿದೆ. ಲಭ್ಯವಾಗಿರುವ ದೃಶ್ಯಗಳು, ವೈರಲ್ ವಿಡಿಯೊದಂತೆಯೇ ಇದ್ದು, ಎನ್ಡಿಆರ್ಎಫ್ ತಂಡದಿಂದ ಮೊಸಳೆಯನ್ನು ರಕ್ಷಿಸಲಾಗಿದೆ ಎಂದು ವಿಡಿಯೊ ಶೀರ್ಷಿಕೆಯಲ್ಲಿ ಉಲ್ಲೇಖಿಸಲಾಗಿದೆ.
‘NDRF ರೆಸ್ಕ್ಯೂಯಿಂಗ್ ಕ್ರೊಕೊಡೈಲ್ 2019’ ಅನ್ನು ಕೀವರ್ಡ್ಗಳಾಗಿ ಬಳಸಿಕೊಂಡು Google ನಲ್ಲಿ ಕೀವರ್ಡ್ ಸರ್ಚ್ ಮಾಡಿದಾಗ. ಟೈಮ್ಸ್ ಆಫ್ ಇಂಡಿಯಾ, ಇಂಡಿಯಾ ಟುಡೇ ಮತ್ತು ದಿ ಹಿಂದೂ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ವರದಿಗಳು ಲಭ್ಯವಾಗಿವೆ. ಈ ವರದಿಗಳು ಆಗಸ್ಟ್ 2019 ರಲ್ಲಿ ಪ್ರಕಟಿಸಿವೆ. ವಡೋದರದ ಬೀದಿಯಲ್ಲಿ ಮೊಸಳೆ ರಕ್ಷಣೆ ಕುರಿತು 24 ಆಗಸ್ಟ್ 2019 ರಲ್ಲಿ ಪ್ರಕಟಗೊಂಡ ಹಿಂದೂ ವರದಿಯಲ್ಲಿ ವೈರಲ್ ವೀಡಿಯೊದ ಸುದ್ದಿ ಬಿತ್ತರವಾಗಿದೆ.
ವಡೋದರದ ವಡ್ಸರ್ ಪ್ರದೇಶದಲ್ಲಿ ಎನ್ಡಿಆರ್ಎಫ್ ರಕ್ಷಿಸಿದ ಮೊಸಳೆ ಕುರಿತು 3 ಆಗಸ್ಟ್ 2019 ರಿಂದ ಏಷ್ಯನ್ ನ್ಯೂಸ್ ಇಂಟರ್ನ್ಯಾಶನಲ್ (ANI) ಸುದ್ದಿ ಸಂಸ್ಥೆಯಿಂದ ಒಂದು ಟ್ವೀಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ.
ಒಟ್ಟಾರೆಯಾಗಿ ಹೇಳುವುದಾದರೆ ವಡೋದರದ ವಡ್ಸರ್ ಪ್ರದೇಶದಲ್ಲಿ NDRF ತಂಡವು ಮೊಸಳೆಯನ್ನು ರಕ್ಷಿಸಿದ ಘಟನೆಯನ್ನು, ಅಸ್ಸಾಂನಲ್ಲಿ ಮೊಸಳೆಯನ್ನು ರಕ್ಷಿಸಲಾಗಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯು ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಕಾಲುಂಗುರ ಧರಿಸಿದರೆ ರಕ್ತದೊತ್ತಡ ನಿಯಂತ್ರವಾಗುತ್ತದೆ ಎಂಬುದು ನಿಜವೆ?