ಹೆಚ್. ವಿಶ್ವನಾಥ್ ಕೀಳು ಮಟ್ಟದ ಆರೋಪದಿಂದ ಬೇಸರ : ಶಾಸಕ ಸ್ಥಾನಕ್ಕೆ ಸಾ ರಾ ಮಹೇಶ್ ರಾಜೀನಾಮೆ!

ಹೆಚ್. ವಿಶ್ವನಾಥ್ ನನ್ನ ಮೇಲೆ ಮಾಡಿದ ಕೀಳು ಮಟ್ಟದ ಆರೋಪದಿಂದ ಅತೀವ ಬೇಸರವಾಗಿತ್ತು. ಹೀಗಾಗಿ, ಸ್ಪೀಕರ್ ಕಚೇರಿಗೆ ಸೆಪ್ಟೆಂಬರ್ 18 ರಂದು ರಾಜೀನಾಮೆ ಸಲ್ಲಿಸಿದ್ದೆ ಎಂದು ಜೆಡಿಎಸ್ ಶಾಸಕ ಸಾ ರಾ ಮಹೇಶ್ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರೆ.
ನಾನು ರಾಜೀನಾಮೆ ಸಲ್ಲಿಸಿದ ವೇಳೆ ಆಗ ಸ್ಪೀಕರ್ ಹೊರ ದೇಶದಲ್ಲಿದ್ದರು. ಸ್ಪೀಕರ್ ಹೊರ ದೇಶದಿಂದ ಬಂದ ನಂತರ ನನ್ನನ್ನು ಸ್ಪೀಕರ್ ಕನ್ವೀಸ್ ಮಾಡಿ ಕಳುಹಿಸಿದ್ದರು. ಇನ್ನೂ ನನ್ನ ರಾಜೀನಾಮೆ ಪತ್ರ ಸ್ಪೀಕರ್ ಕಚೇರಿಯಲ್ಲಿಯೆ ಇದೆ ಎಂದಿದ್ದಾರೆ.

ದೇವರಾಜ ಅರಸು ಬಗ್ಗೆ ವಿಶ್ವನಾಥ್ ಇವತ್ತು ಮಾತನಾಡುತ್ತಾರೆ. ಅವತ್ತು ಅವರ ಮೊಮ್ಮಗ ಚುನಾವಣೆ ಬಂದಾಗ ಅವರನ್ನ ಹೇಗೆ ನಡೆಸಿಕೊಂಡಿದ್ರಿ ಅಂತ ಯೋಚನೆ ಮಾಡಿ. ಜಿಟಿಡಿಯವರು ಹೇಳಿದ್ರು ಅವರು ಒಳ್ಳೆಯವರಲ್ಲ ಅವರನ್ನ ನಂಬಬೇಡ ಅಂತ. ಆದ್ರೂ ನಾನು ಅವರನ್ನ ಪಕ್ಷಕ್ಕೆ ಕರೆತಂದೆ. ಅದಕ್ಕೆ ಅವರು ಹೀಗೆ ಪ್ರತಿಫಲ ನೀಡಿದ್ರು.

ಹೆಚ್. ವಿಶ್ವನಾಥ್, ಸಿದ್ದರಾಮಯ್ಯ ವಿರುದ್ಧ ಸೋನಿಯಾಗಾಂಧಿಗೆ ಪತ್ರ ಬರೆದಿದ್ದರು. ಎಸ್.ಎಂ. ಕೃಷ್ಣ ವಿರುದ್ಧ ಪುಸ್ತಕ ಬರೆದಿದ್ದರು. ಕೊನೆಗೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಮುಂದೆ ಕೈ ಮುಗಿದು ನನ್ನ ಒಂದು ಬಾರಿ ಶಾಸಕರಾಗಿ ಮಾಡಿ ಅಂತಾ ಕೇಳಿದ್ದರು.

ನಾಳೆ ಬೆ. 9ಕ್ಕೆ ನಾನು ಚಾಮುಂಡಿಬೆಟ್ಟದಲ್ಲಿ ಇರ್ತಿನಿ. ಅವರು ಬರಲಿ ಆಣೆ ಮಾಡಲಿ. ನನ್ನಿಂದ ಅವರ ಕುಟುಂಬಸ್ಥರು ಹಣ ಪಡೆದಿಲ್ಲ ಅನ್ನೋದನ್ನ ಅವರು ದೇವರ ಮುಂದೆ ಹೇಳಲಿ. ನಾನು ಯಾವುದೇ ಆಸೆ ಅಮಿಷಕ್ಕೆ ಒಳಗಾಗಿಲ್ಲ ಅಂತಾ ಪ್ರಮಾಣ ಮಾಡಲಿ. ಅಲ್ಲೆ ನಾನು ನಾಡಿನ ಜನರ ಮುಂದೆ ಬೇಷರತ್ ಕ್ಷಮೆ ಕೇಳುತ್ತೇನೆ. ಹುಣಸೂರಿಗೆ ಹೊಸ ಡಿವೈಎಸ್ಪಿ ಹಾಕಿಸಿ ಕೊಂಡಿದ್ದೀರಿ ಅದಕ್ಕೆ ಎಷ್ಟು ಹಣ ತೆಗೆದು ಕೊಂಡಿದ್ದೀರಿ? ಕುಮಾರಣ್ಣ ನ ಮುಂದೆ ಎಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದೀರಿ? ಎಲ್ಲವನ್ನೂ ನಾನು ನಂತರ ಅಲ್ಲೆ ಹೇಳ್ತಿನಿ.

ಈ ವೇಳೆ ಹುಣಸೂರಿನಲ್ಲಿ ವಿಶ್ವನಾಥ್ ಆಗಲಿ ಅವರ ಕುಟುಂಬಸ್ಥರಾಗಲಿ ಅಭ್ಯರ್ಥಿ ಆಗೋಲ್ಲ. ಅದಕ್ಕು ಒಳ ಒಪ್ಪಂದ ಆಗಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೊಸ ಬಾಂಬ್ ಸಿಡಿಸಿದರು. ವಿಶ್ವನಾಥ್ ಕುಟುಂಬಸ್ಥರಿಂದ ಯಾರು ಸ್ಪರ್ಧೆ ಮಾಡೋಲ್ಲ. ಈ ಅದಕ್ಕಾಗಿ ಒಂದು ಒಪ್ಪಂದ ಮಾಡಿಕೊಂಡಿದ್ದಾರೆ. ಆದ್ರೂ ನ್ಯಾಯಾಲಯದ ಆದೇಶ ಬಂದರೆ ಅವರೇ ಮೈಸೂರು ಉಸ್ತುವಾರಿ ಸಚಿವಾರಾಗ್ತಾರೆ. ಇದಂತು ಸತ್ಯ.

ಹುಣಸೂರಿನಲ್ಲಿ ಈ ಜಿಲ್ಲೆಯವರಂತು ಸ್ಪರ್ಧೆ ಮಾಡಲ್ಲ. ಹೊರ ಜಿಲ್ಲೆಯವರು ಬಂದು ಸ್ಪರ್ಧೆ ಮಾಡ್ತಾರೆ. ಅದಕ್ಕೆ ಬೇರೆ ಬೇರೆ ರೀತಿಯ ಒಪ್ಪಂದ ಆಗಿದೆ. ಆ ಒಪ್ಪಂದ ಏನ್ ಆಗಿದೆ ಅನ್ನೋದನ್ನ ಹೇಳೋಕೆ ಅವರು ಮತ್ತೆ ದೇವರ ಮುಂದೆ ಬರಬೇಕು.
ಅವೇಲ್ಲವನ್ನು ಆಮೇಲೆ ಮಾತಾಡೋಣ.

ಚಾಮುಂಡಿ ಮುಂದೆ ಪ್ರಮಾಣ ಮಾಡಲು ವಿಶ್ವನಾಥ್ ಬರಲಿ. ಅವರ ಜೊತೆ ಪತ್ರಕರ್ತ ಮರಂಕಲ್ ಅವರನ್ನು ಕರೆತರಲಿ. ಅವರಿಗೆ ಸತ್ಯ ಗೊತ್ತಿದೆ. ಶರಣಗೌಡ ಪಾಟೀಲ್ ವಿಚಾರದಲ್ಲು ಅವರ ಮರಂಕಲ್ ಪಾತ್ರ ಇತ್ತು. ಇದರಲ್ಲು ಅವರ ಪಾತ್ರ ಇದೆ. ಹಾಗಾಗಿ ನಾಳೆ ಬೆಟ್ಟಕ್ಕೆ ಮರಂಕಲ್ ಅವರನ್ನು ಕರೆದುಕೊಂಡು ಬರಲಿ. ಅವರಿಗೆ ಸತ್ಯ ಗೊತ್ತಿದೆ. ಅವರ ಮುಂದೆ ಚಾಮುಂಡಿ ತಾಯಿ ಬಳಿ ಪ್ರಮಾಣ ಮಾಡಲಿ. ಚಾಮುಂಡಿ ಪಾದ ಬೇಡ ಗೋಪುರದ ಬಳಿಯೇ ಪ್ರಮಾಣ ಮಾಡಲಿ.
ನಾನು ಕೆ.ಆರ್.ನಗರದ ಮಾಲೀಕ ಅಲ್ಲ. ನಾನು ಕೆ.ಆರ್.ನಗರದ ಸೇವಕ. ಹಾಗಾಗಿ ಅಲ್ಲಿನ ಜನ ನನ್ನ ಮೂರು ಬಾರಿ ಆಯ್ಕೆ ಮಾಡಿದ್ದಾರೆ. ನೀವು ಗೆದ್ದಾಗ ಮಾಲೀಕರಂತೆ ನಡೆದುಕೊಂಡಿದ್ದಕ್ಕೆ ಅಲ್ಲಿನ ಜನ ಓಡಿಸಿದ್ದಾರೆ. ಮಾಲೀಕ ಸೇವಕ ಯಾರೇಂದು ಜನರ ನೋಡಿದ್ದಾರೆ. ನಾನು ಅಭ್ಯರ್ಥಿ ಆಗೋದನ್ನ ತ್ಯಾಗ ಮಾಡಿದೆ. ಅದಕ್ಕೆ ನನಗೆ ಎಂಎಲ್ಸಿ ಮಾಡಿ ಮಂತ್ರಿ ಮಾಡಿದ್ರು ಅಂತಾರೆ. ಈ ಮಾತನ್ನ ಸ್ವತಹ ವಿಶ್ವನಾಥ್ ಹೇಳ್ತಾರೆ ನೆನಪಿಟ್ಟುಕೊಳ್ಳಿ. ಅವರ ಕುಟುಂಬದ ಯಾರು ಸ್ಪರ್ಧೆ ಮಾಡೋಲ್ಲ‌. ಯಾರು ಸ್ಪರ್ಧೆ ಮಾಡ್ತಾರೆ ಅನ್ನೋದನ್ನ ಮುಂದೆ ಹೇಳ್ತಿನಿ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights