16 ವರ್ಷದ ಬಾಲಕಿ ಆತ್ಮಹತ್ಯೆ : ತಂದೆಯಿಂದ ಅತ್ಯಾಚಾರದ ಆರೋಪ!

ರಾಜಸ್ಥಾನದ ಧೋಲ್ಪುರ್ ಜಿಲ್ಲೆಯ 16 ವರ್ಷದ ಬಾಲಕಿಯೊಬ್ಬಳು ಭಾನುವಾರ ರಾತ್ರಿ ಶವವಾಗಿ ಪತ್ತೆಯಾಗಿದ್ದು, ಇಬ್ಬರು ಪುರುಷರು ಅತ್ಯಾಚಾರ ಎಸಗಿದ ನಂತರ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕೆಯ ತಂದೆ ಆರೋಪಿಸಿದ್ದಾರೆ.

ಇಬ್ಬರು ಪುರುಷರು ರಾತ್ರಿಯಲ್ಲಿ ಅವರ ಮನೆಗೆ ಭೇಟಿ ನೀಡಿ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಇಬ್ಬರನ್ನು ಬಂಟಿ (23) ಮತ್ತು ಹರ್ಕೇಶ್ (20) ಎಂದು ಗುರುತಿಸಲಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಬಂಟಿ ಮತ್ತು ಹರ್ಕೇಶ್ ತನ್ನ ಮನೆಗೆ ಪ್ರವೇಶಿಸಿ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಆ ನಂತರ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ಸೋಮವಾರ ಮರಣೋತ್ತರ ನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಧೋಲ್ಪುರದ ಪೊಲೀಸ್ ವರಿಷ್ಠಾಧಿಕಾರಿ ಕೇಸರ್ ಸಿಂಗ್ ಹೇಳಿದ್ದಾರೆ .

ಹುಡುಗಿ ಮತ್ತು ಬಂಟಿ ಸ್ವಲ್ಪ ಸಮಯದವರೆಗೆ ಒಬ್ಬರಿಗೊಬ್ಬರು ತಿಳಿದಿದ್ದರು ಮತ್ತು ಅವರು ಕಳೆದ ರಾತ್ರಿ ತನ್ನ ಸ್ನೇಹಿತ ಹರ್ಕೇಶ್ ಅವರೊಂದಿಗೆ ಭೇಟಿಯಾಗಲು ಹೋಗಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಅತ್ಯಾಚಾರ ನಡೆದಿದೆಯೆ ಅಥವಾ ಇಲ್ಲವೇ ಎಂಬುದು ಮರಣೋತ್ತರ ವರದಿಯ ನಂತರ ಸ್ಪಷ್ಟವಾಗುತ್ತದೆ. ಬಾಲಕಿಯ ತಂದೆ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸೂಕ್ತ ವಿಭಾಗಗಳ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights