ಅಸಂವಿಧಾನಿಕ ಸುಗ್ರೀವಾಜ್ಞೆಗಳು ರೈತರ ಗುರುತುಗಳನ್ನೇ ಅಳಿಸಿಹಾಕುತ್ತವೆ: ಜಸ್ಟೀಸ್ ನಾಗಮೋಹನ್ ದಾಸ್

ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತರುತ್ತಿರುವ ಸುಗ್ರೀವಾಜ್ಞೆಗಳು ಅಸಾಂವಿಧಾನಿಕವಾಗಿದ್ದು ರೈತರ ಗುರುತನ್ನೇ ಅಳಿಸಿಹಾಕಲಿವೆ. ಹಳ್ಳಿಗಳಲ್ಲಿ ರೈತರನ್ನು ಅವರದೇ ಭೂಮಿಯಲ್ಲಿ ಕೂಲಿಕಾರರನ್ನಾಗಿಸುವ ಅಥವಾ ರೈತರನ್ನು ನಾಶಗೊಳಿಸುವ, ಅವರನ್ನು ನಗರಗಳಿಗೆ ದೂಡುವ ಈ ಸುಗ್ರೀವಾಜ್ಞೆಗಳನ್ನು ಯಾವ ಬೆಲೆ ತೆತ್ತಾದರೂ ಸರಿಯೇ ತಡೆಯಬೇಕಾಗಿದೆ ಎಂದು ಜಸ್ಟೀಸ್ ನಾಗಮೋಹನ್ ದಾಸ್ ತಿಳಿಸಿದ್ದಾರೆ.

ರೈತ-ದಲಿತ-ಕಾರ್ಮಿಕರ ಐಕ್ಯಹೋರಾಟದ ಅಂಗವಾಗಿ ನಡೆದ ಜನತಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಅಲ್ಪ ಸ್ವಲ್ಪ ಭೂಮಿ ಹೊಂದಿರುವ ರೈತರನ್ನು ಅವರ ಜಮೀನಿನಿಂದ ಒಕ್ಕಲೆಬ್ಬಿಸಿ ಅವರನ್ನು ಅದೇ ಜಮೀನಿನಲ್ಲಿ ಕೂಲಿಕಾರರನ್ನಾಗಿ ಮಾಡುವ ಉದ್ದೇಶದಿಂದಲೇ ಸರ್ಕಾರ ಈ ಸುಗ್ರಿವಾಜ್ಞೆಗಳನ್ನು ತರುತ್ತಿದೆ ಎಂದು ಅಸಮಾನಧಾನ ವ್ಯಕ್ತಪಡಿಸಿದರು.

ಹಿರಿಯ ಹೋರಾಟಗಾರ ಎಸ್‌.ಆರ್ ಹಿರೇಮಠ್ ಮಾತನಾಡಿ “ಸಾಲಮನ್ನಾ, ಬೆಂಬಲ ಬೆಲೆ ಯಂತಹ ಪರಿಹಾರಗಳು ರೈತರಿಗೆ ತಾತ್ಕಾಲಿಕ ಪರಿಹಾರಗಳಷ್ಟೆ. ಆದರೆ ತಾನು ಬೆಳೆದ ಬೆಲೆ ನಿಗಧಿ ಮಾಡುವಂತಹ ದೀರ್ಘಕಾಲಿಕ ಪರಿಹಾರವೊಂದನ್ನು ನಾವು ಕಂಡುಕೊಳ್ಳಬೇಕು ಎಂದರು.

ಮೊದಲನೆಯದಾಗಿ, ನಾವು ನಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಕಾರ್ಪೋರೇಟ್ ಕಂಪನಿಗಳಿಗೆ ಬಿಟ್ಟುಕೊಡಬಾರದು. ಎರಡನೆಯದಾಗಿ ಭೂ ಬಳಕೆ ನೀತಿಯನ್ನು ಜಾರಿಗೆ ತರುವಂತೆ ಒತ್ತಾಯಿಸುವುದು. ಮೂರನೆಯದಾಗಿ, ಉಳುವವನೇ ಭೂಮಿಯ ಒಡೆಯ ಎನ್ನುವುದು ರಾಷ್ಟ್ರೀಐ ಅಜೆಂಡಾ ಆಗಬೇಕು. ಕೊನೆಯದಾಗಿ, ಬಹುರಾಷ್ಟ್ರೀಯ ಕಂಪನಿ ಅಥವಾ ಕಾರ್ಪೋರೇಟ್ ಕಂಪನಿಗಳನ್ನು ತೊಲಗಿಸಿ ಸಂಪೂರ್ಣ ಸಹಕಾರೀ ವ್ಯವಸ್ಥೆ ಬರುವಂತೆ ಒತ್ತಾಯಿಸಬೇಕು ಎಂದರು.

ಕನಿಷ್ಟ ರೈತರೊಂದಿಗೆ ಸಣ್ಣ ಚರ್ಚೆ ನಡೆಸದೇ ಈ ರೈತವಿರೋಧಿ ಸುಗ್ರೀವಾಜ್ಞೆಗಳನ್ನು ಸರ್ಕಾರ ಜಾರಿಗೊಳಿಸುತ್ತಿರುವುದು ನಾಚಿಕೆಗೇಡು. ನಾವೆಲ್ಲರೂ ಒಟ್ಟಾಗಿ ಈ ಸುಗ್ರೀವಾಜ್ಞೆಗಳನ್ನು ಕಸದ ಬುಟ್ಟಿಗೆ ಎಸೆಯುವ ಕಾಲ ಬಂದಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅಭಿಪ್ರಾಯಪಟ್ಟರು.


Read Also: ರೈತ ವಿರೋಧಿ ಮಸೂದೆಗಳನ್ನು ಹಿಂಪಡೆಯದಿದ್ದರೆ, ಯಡಿಯೂರಪ್ಪ ಕುರ್ಚಿ ಉಳಿಯುವುದಿಲ್ಲ: ಬಡಗಲಪುರ ನಾಗೇಂದ್ರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights