East India company ಯು 1818 ರಲ್ಲಿ ಓಂ ಚಿಹ್ನೆಯ ನಾಣ್ಯ ಹೊಂದಿತ್ತು ಎಂಬುದು ನಿಜವೇ?

1818ರಲ್ಲಿ East India Companyಯು ನಾಣ್ಯವೊಂದನ್ನು ಬಿಡುಗಡೆ ಮಾಡಿತ್ತು ಎಂದು ಲೋಹದ ಕರೆನ್ಸಿಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಓಂ ಚಿಹ್ನೆಯ ನಾಣ್ಯವನ್ನು ಬಳಕೆ ಮಾಡುತ್ತಿತ್ತು ಎಂದು Postcard ಕನ್ನಡ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ  ಪೋಸ್ಟ್‌ ಮಾಡಿದೆ.

ಸ್ವಾತಂತ್ರ ಪೂರ್ವದಲ್ಲಿ ಭಾರತ ವಸಾಹತುಶಾಯಿಯ ಆಳ್ವಿಕೆಗೆ ಒಳಪಟ್ಟ ಸಂದರ್ಭದಲ್ಲೆ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯವರು ಓಂ ಮತ್ತು ರಾಮ, ಲಕ್ಷ್ಮಣ ಹನುಮಂತ ಮತ್ತು ಸೀತೆಯ ಚಿತ್ರಗಳಿರುವ ನಾಣ್ಯವನ್ನು ಬಳಕೆ ಮಾಡುತ್ತಿದ್ದರು ಎಂದು ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಹಾಗಿದ್ದರೆ ನಮ್ಮ ದೇಶವನ್ನು ಆಳಿದ ಬ್ರಿಟೀಷ್ ಅಧಿಕಾರಿಗಳು ತಮ್ಮ ಆಳ್ವಿಕೆಯ ಕಾಲದಲ್ಲಿ ಈ ರೀತಿಯ  ನಾಣ್ಯಗಳನ್ನು ಬಳಸುತ್ತಿದ್ದರು ಎಂದು ಪೋಸ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ. ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

POST CARD ನ ಪೋಸ್ಟ್‌ನಲ್ಲಿ ಪ್ರತಿಪಾದಿಸಿದ ಓಂ ಚಿಹ್ನೆಯ ನಾಣ್ಯದ ಕುರಿತು ಗೂಗಲ್ ಸರ್ಚ್ ಮಾಡಿದಾಗ ಇದೇ ರೀತಿಯ ನಾಣ್ಯಗಳ ಬಳಕೆಯನ್ನು ಪ್ರತಿಪಾದಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳು ವೈರಲ್ ಆಗಿರುವುದನ್ನು ನೋಡಬಹುದು.  ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

https://twitter.com/RAJIV1959/status/983909492172533760?ref_src=twsrc%5Etfw%7Ctwcamp%5Etweetembed%7Ctwterm%5E983909492172533760%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ffact-check%2Fstory%2Ffact-check-did-east-india-company-issue-coins-with-hindu-gods-1281220-2018-07-09

https://twitter.com/Sharan00/status/933634333910249474?ref_src=twsrc%5Etfw%7Ctwcamp%5Etweetembed%7Ctwterm%5E933634333910249474%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ffact-check%2Fstory%2Ffact-check-did-east-india-company-issue-coins-with-hindu-gods-1281220-2018-07-09

 

 

ನಾಣ್ಯಗಳಿಗೆ ಸಂಬಂಧಿಸಿದಂತೆ ಗೂಗಲ್ ಮಾಡಿದಾಗ  ಬ್ಲಾಗರ್ ಕುಲರಾಜ್ ಸಿಂಗ್ ಅವರು ಪ್ರಸ್ತುತ ಪಡಿಸಿರುವ ನಾಣ್ಯಗಳ ಬಳಕೆ ಮತ್ತು ಚಲಾವಣೆಗೆ ಬಂದಾಗಿನ ಅದರ ಚಿತ್ರಗಳನ್ನು ತಮ್ಮ ಬ್ಲಾಗ್‌ನಲ್ಲಿ ದಾಖಲು ಮಾಡಿಕೊಂಡಿದ್ದಾರೆ. ಫೆಬ್ರವರಿ 2009 ರಲ್ಲಿಯೇ ಅವರು ಈಗಲೂ ವಿವಾದದಲ್ಲಿರುವ ಈ ನಾಣ್ಯಗಳನ್ನು ನಕಲಿ ಎಂದು ಕರೆದಿದ್ದಾರೆ. ಫ್ಯಾಂಟಸಿಗಾಗಿ ಮಾಡಿರುವ ನಾಣ್ಯಗಳೆ ಹೊರತು ನಿಜವಾದವಲ್ಲ ಎಂದು ಹೇಳಿದ್ದಾರೆ. ಸಿಂಗ್ ಅವರು ತಮ್ಮ ಬ್ಲಾಗ್‌ನಲ್ಲಿ ನಾಣ್ಯಗಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಕೆಲವನ್ನು ಎಡಿಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ವಿವಾದಿತ ನಾಣ್ಯಗಳ ಚಿತ್ರಗಳಲ್ಲಿ  ANNA ಎಂಬ (AANE ಎಂದು ಹಿಂದೆ ಬಳಸುತ್ತಿದ್ದ ಕರೆನ್ಸಿ ಘಟಕ) ಪದವನ್ನು ಬೇರೆ ಸ್ಥಳದಲ್ಲಿ ಬಳಸಿರುವುದನ್ನು ನಾವು ಗಮನಿಸಬಹುದು.  ಇವುಗಳಲ್ಲಿ ಹಲವಾರು ನಕಲಿ ನಾಣ್ಯಗಳು ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ Rs199 ಕ್ಕಿಂತ ಕಡಿಮೆ ಬೆಲೆಗೆ ಮಾರಾಟಕ್ಕೆ ಲಭ್ಯವಿವೆ. ಇಂಡಿಯಾಟುಡೆ ದ ಫೇಕ್ ವಾರ್ ರೂಂ ಕೂಡ ಹಿಂದೆ ಇದೇ ರೀತಿ ಪ್ರತಿಪಾದನೆ ಮಾಡಿದ್ದ ಸುದ್ದಿಯನ್ನು ಫ್ಯಾಕ್ಟ್‌ಚೆಕ್ ಮೂಲಕ ಸುಳ್ಳು ಎಂದು ನಿರೂಪಿಸಿದೆ.

ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದ ವಕ್ತಾರ ಸಂಜಿಬ್ ಸಿಂಗ್, “ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ಕೊರೊಲಿನಾ (ಚಿನ್ನ), ಆಂಗ್ಲಿನಾ (ಬೆಳ್ಳಿ), ಕಪ್ಪ್ರೂನ್ (ತಾಮ್ರ) ಮತ್ತು ಟಿನ್ನಿ (ಟಿನ್) ನಾಣ್ಯಗಳನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಿದೆ. ಇಲ್ಲಿಯವರೆಗೆ ಹಿಂದೂ ದೇವರುಗಳ ಮೇಲೆ ಕೆತ್ತಲಾದ ನಾಣ್ಯಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ” ಎಂದು ತಿಳಿಸಿದ್ದಾರೆ.

ಪುರಾತತ್ವಶಾಸ್ತ್ರಜ್ಞರೂ ಆಗಿರುವ ಸಿಂಗ್, “ಪ್ಗೋಡಾ ಮತ್ತು ವೆಂಕಟೇಶ್ವರ ದೇವರೊಂದಿಗೆ ನಾಣ್ಯಗಳ ಬಗ್ಗೆ ಉಲ್ಲೇಖವಿದೆ. ದಕ್ಷಿಣ ಭಾರತದ ನಾಣ್ಯಗಳಲ್ಲಿ ಮೊದಲಿನಿಂದಲೂ ದೇವರುಗಳ ಚಿತ್ರವನ್ನು ಹೊಂದಿವೆ” ಎಂದು ಹೇಳಿದ್ದಾರೆ.

 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವೆಬ್‌ಸೈಟ್ ನಲ್ಲಿ ಭಾರತದಲ್ಲಿ ನಾಣ್ಯಗಳ ಸಂಪೂರ್ಣ ಇತಿಹಾಸವನ್ನು ಹೊಂದಿದ್ದು. ಭಾರತವು  ನಾಣ್ಯಗಳ ಚಲಾವಣೆಯ ಮತ್ತು ವಿನಿಮಯ ಮಾಡಿಕೊಳ್ಳವ ಆರಂಭದಲ್ಲಿ ಮುಂಚೂಣಿಯಲ್ಲಿತ್ತು ಎಂದು ಹೇಳಲಾಗಿದೆ. ಹೈದರಾಬಾದ್, ಫರೀದ್ಕೋಟ್ ಮತ್ತು ಉದಯಪುರದಂತಹ ರಾಜಪ್ರಭುತ್ವದ ರಾಜ್ಯಗಳು ತಮ್ಮದೇ ಆದ ನಾಣ್ಯಗಳನ್ನು ಬಿಡುಗಡೆ ಮಾಡಿದವು ಎಂದಿದೆ.

ಈ ನಾಣ್ಯಗಳ ಸಾಧ್ಯತೆ ಕುರಿತು ಮಾತನಾಡಿದ ನಾಣ್ಯಶಾಸ್ತ್ರಜ್ಞ ಡಾ.ಪಿ.ವಿ.ಭರತ್, “ದೇವರ ಚಿತ್ರಗಳಿರುವ ಈ ರೀತಿಯ ನಾಣ್ಯಗಳನ್ನು ವಿದೇಶಿ ಪ್ರವಾಸಿಗರಿಗೆ ಮಾರಾಟ ಮಾಡುವ ಉದ್ದೇಶದಿಂದ ತಯಾರಿಸಿರಬಹುದು. ಆದರೆ ಅದರ ಬಗ್ಗೆಯೂ ಖಾತ್ರಿ ಇಲ್ಲ. ಈಸ್ಟ್ ಇಂಡಿಯಾ ಕಂಪನಿ ನಾಣ್ಯವನ್ನು ಬಿಡುಗಡೆ ಮಾಡಿದಾಗಲೆಲ್ಲಾ ಅದರ ಲೋಗೋ ಇರುತ್ತಿತ್ತು” ಎಂದು ಹೇಳಿದರು.

ಒಟ್ಟಾರೆಯಾಗಿ ಹೇಳುವುದಾದರೆ, 19 ನೇ ಶತಮಾನದ ಆರಂಭದಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯು ಗೋಪುರ ಮತ್ತು ವಿಷ್ಣುವಿನ ಚಿತ್ರ ಒಳಗೊಂಡ ನಾಣ್ಯಗಳನ್ನು ಮುದ್ರಿಸಿದ್ದು ಬಿಟ್ಟರೆ, ವೈರಲ್ ಚಿತ್ರಗಳಲ್ಲಿ ತೋರಿಸಿರುವಂತೆ ಈಸ್ಟ್ ಇಂಡಿಯಾ ಕಂಪನಿಯು ಬಿಡುಗಡೆ ಮಾಡಿದ ಯಾವುದೇ ನಾಣ್ಯದ ಉಲ್ಲೇಖವು ಲಭ್ಯವಾಗಿಲ್ಲ. ಪೋಸ್ಟ್‌ನಲ್ಲಿರುವ ಓಂ ಚಿಹ್ನೆ ಮತ್ತು ಶ್ರೀ ರಾಮನ ಚಿತ್ರಗಳಿರುವ ನಾಣ್ಯಗಳು, ಯಾರೋ ಒಬ್ಬರು ರಚಿಸಿರುವ ಒಂದು ಕಾಲ್ಪನಿಕ ನಾಣ್ಯ ಎಂದು ಖಚಿತವಾಗಿದೆ. ಹಾಗಾಗಿ POST CARD ಕನ್ನಡ ತನ್ನ ಪೋಸ್ಟ್‌ನಲ್ಲಿ ಸುಳ್ಳು ಹೇಳಿದೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಸಮುದ್ರ ತೀರದ KISSING ROCK ಕ್ಯಾಲಿಫೋರ್ನಿಯಾದಲ್ಲಿದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights