ಕಡಿಮೆ ತೀವ್ರತೆಯ ಕೊರೊನ ಸೋಂಕಿನ ಪ್ರಕರಣಗಳನ್ನು ಮನೆಯಲ್ಲೇ ಚಿಕಿತ್ಸೆಗೆ ಒಳಪಡಿಸುವ ಬಗ್ಗೆ ಸರ್ಕಾರ ಚಿಂತನೆ

ಕೊರೊನ ವೈರಸ್ ಸೋಂಕಿಗೆ ಒಳಗಾಗಿರುವ ರೋಗಿಗಳನ್ನು ಕಡ್ಡಾಯವಾಗಿ ಆಸ್ಪತ್ರೆಗೆ ದಾಖಲು ಮಾಡುವ ನೀತಿಯನ್ನು ಬದಲಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ಸೋಂಕು ತೀವ್ರವಲ್ಲದ ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡುವುದನ್ನು ಪರಿಗಣಿಸುತ್ತಿದೆ.

ಇಲ್ಲಿಯವರೆಗೂ ಸೋಂಕು ಪತ್ತೆಯಾಗಿರುವ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಸಖ್ಯೆ ಹೆಚ್ಚಾದರೆ ಕಡಿಮೆ ತೀವ್ರತೆ ಇರುವ ರೋಗಿಗಳನ್ನು ಮನೆಗಳಲ್ಲಿ ಪ್ರತ್ಯೇಕವಾಗಿ ಇರಿಸಿ, ದೂರವಾಣಿ ಮೂಲಕ ಆರೋಗ್ಯದ ಮಾಹಿತಿ ಪಡೆದು, ಚಿಕಿತ್ಸೆ ನೀಡಲು ನೀತಿಯನ್ನು ಬದಲಿಸಲು ಸರ್ಕಾರ ಚಿಂತಿಸಿದೆ ಎಂದು ದ ಇಂಡಿಯನ್ ಎಕ್ಸ್ಪ್ರೆಸ್ ವರದಿ  ಮಾಡಿದೆ.

ಈಗ ಲಭ್ಯವಿರುವ ಆಸ್ಪತ್ರೆಯ ಹಾಸಿಗೆಗಳನ್ನು ಪರಿಣಾಮಕಾರಿಯಾಗಿ ಬಳಸುವುದಕ್ಕೆ ಮತ್ತು ಆರೋಗ್ಯ ಕಾರ್ಯಕರ್ತರನ್ನು ಸೋಂಕು ತಗಲುವ ಸಾಧ್ಯತೆಯನ್ನು ಕಡಿಮೆ ಮಾಡುವುದಕ್ಕೆ ಈ ವಿಷಯಗಳನ್ನು ಚರ್ಚಿಸಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಮಲೇರಿಯಾ ಚಿಕಿತ್ಸೆಗೆ ಬಳಸಲಾಗುವ ಹೈಡ್ರಾಕ್ಸಿಕ್ಲೋರೀನ್ ನನ್ನು ಸೋಂಕಿನ ನಂತರ ಆರೋಗ್ಯ ಕಾರ್ಯಕರ್ತರಿಗೆ ಚಿಕಿತ್ಸೆಗೆ ಬಳಸಲು ಶಿಫಾರಸ್ಸು ಮಾಡಿದೆ. ಇಲ್ಲಿಯವರೆಗೂ ಎಷ್ಟು ಜನ ವೈದ್ಯರು ಮತ್ತು ನರ್ಸ್ ಗಳಿಗೆ ಸೋಂಕು ತಗುಲಿದೆ ಎಂಬ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾದಲಾಗಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights