ಎನ್‌ಡಿ ಟಿವಿ ತೊರೆದು, ಹಾರ್ವರ್ಡ್‌ ವಿವಿಗೆ ಪ್ರಾಧ್ಯಾಪಕರಾಗಿ ಹೊರಟ ಖ್ಯಾತ ಪತ್ರಕರ್ತೆ ನಿಧಿ ರಾಜ್ದಾನ್‌

‘ಇಂಟರ್ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್ ಪ್ರಶಸ್ತಿ’ ವಿಜೇತ ಪತ್ರಕರ್ತೆ ನಿಧಿ ರಜ್ದಾನ್. 21 ವರ್ಷಗಳ ಕಾಲ ಎನ್‌ಡಿ ಟಿವಿಯಲ್ಲಿ ಕೆಲಸ ಮಾಡಿದ್ದ ಅವರು ಎನ್‌ಡಿಟಿವಿಯನ್ನು ತೊರೆಯಲು ನಿರ್ಧರಿಸಿದ್ದು, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮವನ್ನು ಬೋಧನೆ ಮಾಡಲು ಮುಂದಾಗಿದ್ದಾರೆ. ಎಡ ಬಲ ಮತ್ತು ಮಧ್ಯಮವಾದ ಎಲ್ಲಾ ರೀತಿಯಲ್ಲೂ ಪಳಗಿದ್ದ ಅವರು ರಾಜಕೀಯ ಮತ್ತು ರಾಜಕೀಯೇತರ ಜಾಗತಿಕ ಸುದ್ದಿಗಳ ವರದಿಗಾರಿಕೆಯಲ್ಲಿ ಅನುಭವ ಹೊಂದಿದ್ದರು. ವರದಿಗಾರಿಗಾಗಿ ಪ್ರಶಸ್ತಿಗಳನ್ನು ಪಡೆದ ದೇಶದ ಪ್ರಮುಖ ಪತ್ರಕರ್ತರಲ್ಲಿ ಅವರೂ ಒಬ್ಬರುರಾಗಿದ್ದಾರೆ.

ನಾನು ಎನ್‌ಡಿಟಿವಿಯಲ್ಲಿ 21 ವರ್ಷಗಳ ಅನುಭವದ ನಂತರ ನನ್ನ ವೃತ್ತಿಯ ದಿಕ್ಕನ್ನು ಬದಲಾಯಿಸುತ್ತಿದ್ದೇನೆ ಮತ್ತು ಮುಂದುವರಿಯುತ್ತಿದ್ದೇನೆ. ಈ ವರ್ಷದ ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದ ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ಪತ್ರಿಕೋದ್ಯಮವನ್ನು ಬೋಧಿಸುವ ಸಹಾಯಕ ಪ್ರಾಧ್ಯಾಪಕಳಾಗಿ ಹೊಸ ವೃತ್ತಿಯನ್ನು ಪ್ರಾರಂಭಿಸುತ್ತೇನೆ” ಎಂದು ನಿಧಿ ರಾಜ್ದಾನ್‌ ಹೇಳಿದ್ದಾರೆ.

ಎನ್‌ಡಿಟಿವಿ ನನ್ನ ಮನೆಯಾಗಿದೆ. ಅದು ನನಗೆ ಎಲ್ಲವನ್ನೂ ಕಲಿಸಿದೆ. ನಾವು ಮಾಡುವ ಕೆಲಸ, ನಾವು ಒಳಗೊಳ್ಳುವ ಸುದ್ದಿಗಳು, ನಾವು ನಿಂತಿರುವ ಮೌಲ್ಯಗಳು, ಅದರಲ್ಲೂ ಎನ್‌ಡಿಟಿವಿಯ ವಸ್ತುನಿಷ್ಠತೆಯ ಬಗೆಗೆ ನಾನು ಹೆಮ್ಮೆಪಡುತ್ತೇನೆ ಎಂದಿದ್ದಾರೆ.

ಕಾಶ್ಮೀರಕ್ಕೆ ಸಂಬಂಧಿಸಿದಂತೆ ಎಡ ಬಲ ಮತ್ತು ಮಧ್ಯದ ಆಯಾಮಗಳಲ್ಲಿ ವರದಿಯನ್ನು ಮಾಡಿದ್ದಾರೆ. ಪ್ಯಾನಲ್‌ಗಳನ್ನು ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಯುವತಿಯ ಮೇಲೆ ಅತ್ಯಾಚಾರ, ಈಜಿಪ್ಟಿನ ಕ್ರಾಂತಿ ಮತ್ತು ಇನ್ನೂ ಅನೇಕವುಗಳ ಬಗ್ಗೆ ವರದಿ ಮಾಡಿದ್ದವರಲ್ಲಿ ಭಾರತದ ನಿಧಿ ರಾಜ್ದಾನ್‌ ಮುಂಚೂಣಿಯಲ್ಲಿದ್ದಾರೆ.

ರಜ್ದಾನ್ ಜುಲೈ 2017 ರಲ್ಲಿ ಪ್ರಕಟವಾದ ಎಡ, ಬಲ ಮತ್ತು ಮಧ್ಯಮ ಪಂತೀಯ ವಾದಕ್ಕೆ ಸಂಬಂಧಿಸಿದ ‘ದಿ ಐಡಿಯಾ ಆಫ್ ಇಂಡಿಯಾ’ ಎಂಬ ಶೀರ್ಷಿಕೆಯ ಪುಸ್ತಕವನ್ನು ಸಹ ಬರೆದಿದ್ದಾರೆ.

ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು “ಹಿಂಪಡೆಯುವ ಪಿತೂರಿಯನ್ನು ಬಹಿರಂಗಪಡಿಸಿದ್ದಕ್ಕಾಗಿ” ಇಂಟರ್ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್ ಪ್ರಶಸ್ತಿಗೆ ಭಾರತದಿಂದ ಅವರನ್ನು ಆಯ್ಕೆ ಮಾಡಿತು.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಷಣ ಮಾಡಿದ ರಾಜ್ದಾನ್, ಇಂದು ಭಾರತೀಯ ಮಾಧ್ಯಮ ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ್ದರು. “ನಮ್ಮಲ್ಲಿ ಪತ್ರಕರ್ತರಾಗಿ ನಮ್ಮ ಕೆಲಸ ಮಾಡುವವರನ್ನು ರಾಷ್ಟ್ರ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ದುಃಖದ ಸಂಗತಿಯೆಂದರೆ, ಕೆಲವೇ ಕೆಲವರು ಸತ್ಯವನ್ನು ಮಾತನಾಡಲು ಸಿದ್ಧರಿದ್ದಾರೆ. ಉಳಿದಂತೆ ಪ್ರಭುತ್ವವನ್ನು ಪ್ರಶ್ನೆ ಮಾಡುವುದನ್ನು ಮಾಧ್ಯಮಗಳು ಮರೆತಿವೆ. ಬದಲಾಗಿ, ಸರ್ಕಾರದ ಕರಪತ್ರಗಳನ್ನು ಪುನರುತ್ಪಾದಿಸಲು ಮತ್ತು ಅದನ್ನು ಸುದ್ದಿಯಾಗಿ ರವಾನಿಸಲು ಆದ್ಯತೆ ನೀಡುತ್ತಿವೆ” ಎಂದು ಅವರು ಹೇಳಿದ್ದರು.

MIRROR TO MIRROR

ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು ರಾಷ್ಟ್ರ ವಿರೋಧಿ ಎಂದು ಕರೆಯಲಾಗುತ್ತದೆ. ಆದರೆ ಅದು ಸತ್ಯದಿಂದ ದೂರವಿದೆ. ನಕಲಿ ರಾಷ್ಟ್ರವಾದಿಗಳು ದೇಶಭಕ್ತಿಯ ಪ್ರಮಾಣಪತ್ರಗಳನ್ನು ನೀಡುವುದರಲ್ಲಿ ನಿರತರಾಗಿದ್ದಾರೆ. ಅವರು ವಿಭಿನ್ನ ದೃಷ್ಟಿಕೋನ ಹೊಂದಿರುವವರನ್ನು ಪೀಡಿಸುತ್ತಾರೆ. ಪ್ರಶ್ನೆಗಳನ್ನು ಕೇಳುವುದು ರಾಷ್ಟ್ರ ವಿರೋಧಿ ಅಲ್ಲ, ಸರ್ಕಾರವನ್ನು ಪ್ರಶ್ನಿಸುವುದು ಖಂಡಿತವಾಗಿಯೂ ರಾಷ್ಟ್ರ ವಿರೋಧಿ ಅಲ್ಲ ಎಂದು ಅವರು ಹೇಳಿದ್ದಾರೆ.

ನಾವು ಕಡಿಮೆ ತಿಳಿದುಕೊಂಡಿದ್ದೇವೆ ಎಂದು ನನಗೆ ಅನ್ನಿಸುವುದಿಲ್ಲ. ಆದರೆ, ನಾವು ಅನೇಕ ಕಾರಣಗಳಿಂದಾಗಿ ಹೆಚ್ಚು ವಿಭಜನೆಗೊಂಡಿದ್ದೇವೆ. ಸಾಮಾಜಿಕ ಮಾಧ್ಯಮವು ಮಾಹಿತಿಯ ಭಯಂಕರ ಮೂಲವಾಗಿದೆ. ಸುಳ್ಳು ಸುದ್ದಿಗಳನ್ನು ಸತ್ಯವೆಂದು ಓದಿಸಲಾಗುತ್ತಿದೆ. ದುರದೃಷ್ಟ, ಅನೇಕ ಭಾರತೀಯರಿಗೆ ವಾಟ್ಸಾಪ್ ಮೂಲಕ ದೈನಂದಿನ ಸುಳ್ಳು ಸುದ್ದಿಗಳನ್ನು ಆಹಾರವಾಗಿ ನೀಡಲಾಗುತ್ತದೆ. ಅವುಗಳು ನಾವು ಎಚ್ಚರದಿಂದಿರಬೇಕಾದ ಅಪಾಯಗಳು. ಸಾಮಾಜಿಕ ಮಾಧ್ಯಮಕ್ಕೆ ಯಾವುದೇ ಹೊಣೆಗಾರಿಕೆ ಇಲ್ಲ. ಭಾರತದಲ್ಲಿ ಯಾರಾದರೂ ಏನು ಬೇಕಾದರೂ ಬರೆಯಬಹುದು. ಇದನ್ನು ನಿಯಂತ್ರಿಸಿ, ನಿಭಾಯಿಸುವುದು ಮುಂದಿನ ಸವಾಲಾಗಿದೆ ಎಂದು ನಿಧಿ ರಾಜ್ದಾನ್‌ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights