ಶತಕ ಬಾರಿಸಿದ ಈರುಳ್ಳಿ: ಬೆಲೆ ಕೇಳಿಯೇ ಕಣ್ಣೀರಿಡುತ್ತಿರುವ ಗ್ರಾಹಕರು!

ಕೊರೊನಾ ಸಂಕಷ್ಟ,  ಆರ್ಥಿಕ ಕುಸಿತ, ನಿರುದ್ಯೋಗದ ನಡುವೆಯೂ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದೆ. ಲಾಕ್‌ಡೌನ್‌ ತೆರವುಗೊಳ್ಳುತ್ತಿದ್ದಂತೆಯೇ ಪೆಟ್ರೋಲ್‌-ಡೀಸೆಲ್‌ ಬೆಲೆ ದಿನನಿತ್ಯ ಏರಿಕೆ ಕಾಣುತ್ತಲೇ ಇತ್ತು. ಈಗ ಅದರ ಬೆನ್ನು ಹತ್ತಿರುವ ಈರುಳ್ಳಿ ಬೆಲೆ ಶತಕ ಬಾರಿಸಿ ಸಂಭ್ರಮಿಸುತ್ತಿದೆ. ಗ್ರಾಹಕರು ಬೆಲೆ ಕೇಳಿಯೇ ಕಣ್ಣೀರಿಡುತ್ತಿದ್ದಾರೆ.

ದೇಶದ ವಿವಿಧ ನಗರಗಲ್ಲಿ ಈರುಳ್ಳಿ ಬೆಲೆ ಕೆಜಿಗೆ 100 ರೂಗಳ ಗಡಿ ದಾಟಿ ಮುಂದೆ ಸಾಗಿದೆ. ಬೆಂಗಳೂರಿನಲ್ಲಿಯೂ ಕೆಜಿಗೆ 80 ರೂ ಮುಟ್ಟಿದ್ದು, ಇನ್ನೇನು 100 ರೂ ದಾಟುವ ಸಾಧ್ಯತೆ ಇದೆ.

ಮುಂಬೈ ಮತ್ತು ಪುಣೆಯಲ್ಲಿ ಈರುಳ್ಳಿ ಬೆಲೆ 100 ರೂ ದಾಟಿದ್ದು, ಸಾಮಾಕ್ಯ ಜನರು ಈರುಳ್ಳಿಯಿಂದ ಅಂತರ ಕಾಯ್ದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಮಹಾರಾಷ್ಟ್ರದ ಅತೀದೊಡ್ಡ ಎಪಿಎಂಸಿ ಮಾರುಕಟ್ಟೆಯಾದ ಲಸಲ್‌ಗಾಂವ್‌ ಈರುಳ್ಳಿ ಮಾರ್ಕೆಟ್‌ನಲ್ಲಿ ಕೆಜಿಗೆ ನೂರು ರೂಪಾಯಿ ಇದೆ.  ಮಹಾರಾಷ್ಟ್ರದ ಒಟ್ಟು 60%ನಷ್ಟು ಈರುಳ್ಳಿ ಇಲ್ಲಿನ ಮಾರುಕಟ್ಟೆಯಿಂದಲೇ ಪೂರೈಕೆಯಾಗುವುದರಿಂದ ಮಹಾರಾ‍ಷ್ಟ್ರದ ಬಹುತೇಕ ಭಾಗದಲ್ಲಿ ಈರುಳ್ಳಿ ಬೆಲೆ ನೂರರ ಗಡಿ ದಾಟಿದೆ.

ಲಸಲ್‌ಗಾಂವ್‌ನಲ್ಲಿ ಜನವರಿಯಿಂದ ಸರಾಸರಿ ಸಗಟು ಬೆಲೆ ಕ್ವಿಂಟಾಲ್‌ಗೆ 1900-6200ಕ್ಕೆ ಏರಿಕೆಯಾಗಿದೆ. ಪೂರೈಕೆಯ ಕೊರತೆಯಿಂದಲೇ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದು, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾಲಯದ ಅಧಿಕೃತ ಮಾಹಿತಿ ಪ್ರಕಾರ ಆಗಸ್ಟ್‌ ತಿಂಗಳಿಂದ ಈರುಳ್ಳಿ ಬೆಲೆ ಏರುತ್ತಲೇ ಬಂದಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: ‘ಉಚಿತ ಕೊರೊನಾ ಲಸಿಕೆ ದೇಶಕ್ಕೆ ಸೇರಿದೆ ಬಿಜೆಪಿ ರಾಜಕೀಯಕ್ಕಲ್ಲ’ – ಬಿಜೆಪಿ ಪ್ರಣಾಳಿಕೆ ವಿರುದ್ಧ ಆರ್‌ಜೆಡಿ ಕಿಡಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights