ಫ್ಯಾಕ್ಟ್‌ಚೆಕ್: ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಎಂಬುದು ನಿಜವೆ?

ಜಾಗತಿಕ ಬೆಲೆ ಕುಸಿತದ ಪರಿಣಾಮ, ಆಮದು ಮಾಡಿಕೊಳ್ಳುವ ಅಡುಗೆ ಎಣ್ಣೆಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು (ಎಂಆರ್‌ಪಿ) ಒಂದು ವಾರದೊಳಗೆ ಲೀಟರ್‌ಗೆ ₹ 10 ವರೆಗೆ ಇಳಿಸುವಂತೆ ಕೇಂದ್ರ ಸರ್ಕಾರ ಖಾದ್ಯ ತೈಲ ತಯಾರಕರನ್ನು ಕೇಳಿಕೊಂಡಿತ್ತು. ದೇಶಾದ್ಯಂತ ಒಂದೇ ಬ್ರಾಂಡ್ ತೈಲದ ಏಕರೂಪದ ಎಂಆರ್‌ಪಿಯನ್ನು ಕಾಪಾಡಿಕೊಳ್ಳಲು ಖಾದ್ಯ ತೈಲ ಕಂಪನಿಗಳಿಗೆ ಸರ್ಕಾರ ನಿರ್ದೇಶನ ನೀಡಿದ್ದ ಸುದ್ದಿ ವರದಿಯಾಗಿತ್ತು.

ಈ ಹಿನ್ನಲೆಯಲ್ಲಿ ಖಾಸಗಿ ತೈಲ ಕಂಪನಿಗಳು ಅಡುಗೆ ತೈಲ ಬೆಲೆಯಲ್ಲಿ ಕೊಂಚ ಕಡಿಮೆ ಮಾಡಿವೆ ಆದರೆ ಅದನ್ನೆ ದೊಡ್ಡ ಸಾಧನೆ ಎಂಬಂತೆ ಬಿಂಬಿಸಲು BJP ಬೆಂಬಲಿತ ಸಾಮಾಜಿಕ ಮಾಧ್ಯಮವಾದ Post card ಕನ್ನಡ  ಪ್ರಯತ್ನಿಸುತ್ತಿದೆ. ಬೆಲೆ ಏರಿಕೆಯಾದಾಗ ಟೀಕಿಸುವ ಜನರಿಗೆ, ಬೆಲೆ ಕಡಿಮೆಯಾದಾಗ ಶ್ಲಾಘನೆ ಮಾಡಲು ಮರೆತುಬಿಡುತ್ತಾರೆ ಎಂಬ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

2019-2020 ರ ಸಮಯದಲ್ಲಿದ್ದ ಅಡುಗೆ ಎಣ್ಣೆ ಬೆಲೆಯನ್ನು ಇಂದಿಗೆ (2022) ಹೋಲಿಕೆ ಮಾಡಿ ನೋಡಿದರೆ ಅಡುಗೆ ಎಣ್ಣೆ ಬೆಲೆಯಲ್ಲಿ ನಿಜವಾಗಿಯೂ  ಭಾರಿ ಕಡಿಮೆ ಆಗಿದೆಯೇ ? ಸರ್ಕಾರ ಖಾದ್ಯ ತೈಲ ಬೆಲೆಯಲ್ಲಿ ಕಡಿಮೆ ಮಾಡುತ್ತಿದೆ ಎನ್ನುವ ವಿಚಾರಕ್ಕೆ ದೇಶದ ಸಾಮಾನ್ಯ ಜನ ನಿಜವಾಗಿಯೂ ಖುಷಿ ಪಡಬೇಕೆ ? ಪೋಸ್ಟ್‌ಕಾರ್ಡ್ ತನ್ನ ಪೋಸ್ಟ್‌ನಲ್ಲಿ ಹೇಳಿರುವಂತೆ ಜನರು ಸರ್ಕಾರವನ್ನು ಕೊಂಡಾಡಬೇಕೆ ? ಹಾಗಿದ್ದರೆ ಕಳೆದ 3 ವರ್ಷದಲ್ಲಿ ಅಡುಗೆ ಎಣ್ಣೆಯ ಬೆಲೆಯೇರಿಕೆಯಲ್ಲಿ ವ್ಯತ್ಯಾಸ ಎಷ್ಟಿದೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಕೇಂದ್ರ ಸರ್ಕಾರದ ಪ್ರಯತ್ನದ ನಂತರ ಖಾದ್ಯತೈಲ ಬೆಲೆ ಇಳಿಕೆಯಾಗುತ್ತಿದೆ. ಈ ಹಿಂದೆ ತೈಲ ಕಂಪನಿಗಳು ಬೆಲೆ ಇಳಿಕೆ ಮಾಡುವ ಸುಳಿವು ನೀಡಿದ್ದವು.  ಅದರಂತೆ ಅಂತಾರಾಷ್ಟ್ರೀಯ ತೈಲಬೆಲೆ ಕಡಿಮೆಯಾದ ಬಳಿಕ ಇದೀಗ ಫಾರ್ಚೂನ್ ಬ್ರಾಂಡ್‌ನಡಿ ಉತ್ಪನ್ನಗಳನ್ನು ಮಾರಾಟ ಮಾಡುವ ಖಾದ್ಯ ತೈಲ ಕಂಪನಿ ಅದಾನಿ ವಿಲ್ಮಾರ್ ದರ ಇಳಿಕೆ ಮಾಡುವುದಾಗಿ ಹೇಳಿದೆ. ಪ್ರತಿ  ಲೀಟರ್‌ಗೆ 30 ರೂ.ವರೆಗೆ ಕಡಿತಗೊಳಿಸುವುದಾಗಿ ಕಂಪನಿಯು ಘೋಷಿಸಿದೆ. ಆದರೆ ಅಷ್ಟು ಪ್ರಮಾಣದಲ್ಲಿ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಎಣ್ಣೆ ಲಭ್ಯವಾಗುತ್ತಿಲ್ಲ ಎನ್ನುವುದು ವಾಸ್ತವ.

ಸೋಯಾಬಿನ್ ಎಣ್ಣೆ ಬೆಲೆಯಲ್ಲಿ ಗರಿಷ್ಠ ಇಳಿಕೆ

ಸೋಯಾಬೀನ್ ಎಣ್ಣೆಯ ಬೆಲೆಯಲ್ಲಿ ಗರಿಷ್ಠ ಇಳಿಕೆ ಮಾಡಲಾಗಿದೆ. ಹೊಸ ಬೆಲೆಗಳೊಂದಿಗೆ ಸರಕು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಈ ಹಿಂದೆ ಧಾರಾ ಬ್ರಾಂಡ್‌ನಲ್ಲಿ ಖಾದ್ಯ ತೈಲ ಮಾರಾಟ ಮಾಡುವ ಮದರ್ ಡೈರಿ, ಸೋಯಾಬೀನ್ ಮತ್ತು ರೈಸ್ ಬ್ರಾನ್ ಎಣ್ಣೆಯ ಬೆಲೆಯನ್ನು ಲೀಟರ್‌ಗೆ 14 ರೂ. ಇಳಿಕೆ ಮಾಡಿತ್ತು. ಖಾದ್ಯತೈಲದ ಬೆಲೆಗಳ ಬಗ್ಗೆ ಚರ್ಚಿಸಲು ಆಹಾರ ಸಚಿವಾಲಯವು ಜುಲೈ 6ರಂದು ಸಭೆ ಕರೆದಿತ್ತು. ಈ ವೇಳೆ ಜಾಗತಿಕ ಬೆಲೆ ಕುಸಿತದ ಲಾಭವನ್ನು ಗ್ರಾಹಕರಿಗೆ ನೀಡುವಂತೆ ಎಲ್ಲಾ ಖಾದ್ಯತೈಲ ಕಂಪನಿಗಳಿಗೆ ಸೂಚಿಸಲಾಗಿತ್ತು.

ಹೀಗಾಗಿ ಅದಾನಿ ಕಂಪನಿ ಖಾದ್ಯತೈಲ ಬೆಲೆ ಇಳಿಕೆ ಘೋಷಿಸಿದೆ. ‘ಖಾದ್ಯತೈಲ ಬೆಲೆಗಳಲ್ಲಿನ ಇಳಿಕೆ ಲಾಭವನ್ನು ಗ್ರಾಹಕರಿಗೆ ನೀಡುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನವನ್ನು ಗಮನದಲ್ಲಿಟ್ಟುಕೊಂಡು, ಅದಾನಿ ವಿಲ್ಮರ್ ಬೆಲೆಗಳನ್ನು ಕಡಿತಗೊಳಿಸಿದೆ’ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಲೆ ಎಷ್ಟಿದೆ..?

ಫಾರ್ಚೂನ್ ಸೋಯಾಬೀನ್ ತೈಲಬೆಲೆ ಲೀಟರ್‌ಗೆ 195 ರೂ.ನಿಂದ 165 ರೂ.ಗೆ ಇಳಿಕೆಯಾಗಿದೆ. ಸೂರ್ಯಕಾಂತಿ ಎಣ್ಣೆಯ ಬೆಲೆ ಲೀಟರ್‌ಗೆ 210 ರೂ.ನಿಂದ 199 ರೂ.ಗೆ ಇಳಿಕೆಯಾಗಿದೆ. ಸಾಸಿವೆ ಎಣ್ಣೆಯ ಗರಿಷ್ಠ ಚಿಲ್ಲರೆ ಬೆಲೆ ಲೀಟರ್‌ಗೆ 195 ರೂ.ನಿಂದ 190 ರೂ.ಗೆ ಇಳಿಕೆಯಾಗಿದೆ.

Oil gfx

ಫಾರ್ಚೂನ್ ರೈಸ್ ಬ್ರಾನ್ ತೈಲ ಬೆಲೆ ಲೀಟರ್‌ಗೆ 225 ರೂ.ನಿಂದ 210 ರೂ.ಗೆ ಇಳಿಕೆಯಾಗಿದೆ. ‘ನಾವು ಜಾಗತಿಕವಾಗಿ ಗ್ರಾಹಕರಿಗೆ ಬೆಲೆ ಇಳಿಕೆಯ ಲಾಭವನ್ನು ರವಾನಿಸಿದ್ದೇವೆ. ಹೊಸ ಸರಕುಗಳು ಶೀಘ್ರದಲ್ಲೇ ಮಾರುಕಟ್ಟೆಯನ್ನು ತಲುಪಲಿವೆ’ ಎಂದು ಅದಾನಿ ವಿಲ್ಮಾರ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಂಗ್ಶು ಮಲಿಕ್ ಹೇಳಿದ್ದಾರೆ.

2019-20ರ ನಂತರ ಕೋವಿಡ್‌ ಕಾರಣಕ್ಕೆ ಬೆಲೆ ಏರಿಕೆಯು ಅನಿವಾರ್ಯ ಎಂದು ಸರ್ಕಾರ ಹೇಳಿತ್ತು ಮೊದಲೇ ಕೊರೊನಾ ಮತ್ತು ಅವೈಜ್ಞಾನಿಕ ಲಾಕ್‌ಡೌನ್‌ ಪರಿಣಾಮದಿಂದ ತೊಂದರೆ ಅನುಭವಿಸಿದ್ದ  ದೇಶದ ಜನರನ್ನು ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿತ್ತು. 2019ರಲ್ಲಿ ಇದ್ದ ಬೆಲೆ ಈಗ ಇರುವ ಬೆಲೆಗೂ ವ್ಯತ್ಯಾಸ ಎಷ್ಟಿದೆ ಎಂದು ಕೆಳಗೆ ವಿವರಿಸಲಾಗಿದೆ ಗಮನಿಸಿ.

                                                                                           2019           2022

    • ಕಡಲೆಕಾಯಿ ಎಣ್ಣೆ  (1 KG)   152.72         220 – 200
    • ಸಾಸಿವೆ ಎಣ್ಣೆ      (1 KG)       128.5           183 – 180
    • ವನಸ್ಪತಿ              (1 KG)        95.32           152 – 150
    • ಸೋಯಾ            (1 KG)       105.64          195 – 165
    • ಸೂರ್ಯಕಾಂತಿ    (1 KG)      122.51          210 – 199
    • ಪಾಮ್ ಆಯಿಲ್  (1 KG)     95.68         156 – 152

 

ಅಡುಗೆ ತೈಲ ಬೆಲೆಯಲ್ಲಿ ಏರಿಕೆ ಕಂಡಾಗ ಟೀಕಿಸುವವರು, ಇಳಿಕೆ ಆದಾಗ ಅದನ್ನು ಪರಿಗಣಿಸಬೇಕಲ್ಲವೇ ಎನ್ನುವ ಅರ್ಥದಲ್ಲಿ ಪೋಸ್ಟ್‌ಕಾರ್ಡ್ ಕನ್ನಡ ಪೋಸ್ಟ್‌ಅನ್ನು ಹಂಚಿಕೊಂಡಿದೆ. ಆದರೆ ವಾಸ್ತವವಾಗಿ ಸೋಯಾ ಎಣ್ಣೆಯ ಬೆಲೆಯಲ್ಲಿ ಮಾತ್ರ ಕಡಿಮೆ ಮಾಡಲಾಗಿದೆ. ಉಳಿದಂತೆ  5 ರೂ ನಿಂದ-10 ರೂ ವರೆಗೆ ಕಡಿಮೆ ಮಾಡಲಾಗಿದೆ. ಆದರೆ ಇದೂ ಕೂಡ ಜನಸಾಮಾನ್ಯರಿಗೆ ಹೊರೆ ಎನ್ನುವುದು ವಾಸ್ತವ. ಏಕೆಂದರೆ ಮೂರು ವರ್ಷದ ಹಿಂದೆ 100 ರೂ ಒಳಗಿದ್ದ ಎಲ್ಲಾ ಅಡುಗೆ ಎಣ್ಣೆಗಳ ಬೆಲೆಗಳು ಈಗ ದುಪ್ಪಟ್ಟಾಗಿವೆ. ಗ್ರಾಹಕನ ತಲಾದಾಯದಲ್ಲಿ ಹೆಚ್ಚಳ ಆಗದೆ, ಕೇವಲ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿದರೆ ಅದನ್ನು ಸಂಭ್ರಮಿಸಿ ಹೇಳಿಕೆ ಕೊಡಲು ಸಾಧ್ಯವೆ ? ಇಷ್ಟು ಅರ್ಥ ಮಾಡಿಕೊಳ್ಳಲಾದ BJP ಮತ್ತು ಬಲಪಂಥೀಯ ಬೆಂಬಲಿತ ಪೋಸ್ಟ್‌ಕಾರ್ಡ್ ಈ ರೀತಿ ಸುಳ್ಳು ಪೋಸ್ಟ್‌ಅನ್ನು ಹಾಕುವ ಮೂಲಕ ಜನ ಸಾಮಾನ್ಯನಿಗೆ ವಂಚಿಸುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕೋವಿಡ್‌ ಲಸಿಕೆ ಪಡೆದರೆ ಪಾರ್ಶುವಾಯು ತಗುಲುವುದೆ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights