ದಲಿತ ಬಾಲಿಕಿಯನ್ನು ವಿವಸ್ತ್ರಗೊಳಿಸಿ, ವಿಡಿಯೋ ಹರಿಬಿಟ್ಟ ದಂಪತಿಗಳು; ಎಫ್‌ಐಆರ್‌ ದಾಖಲು!

ಅಪ್ರಾಪ್ತ ದಲಿತ ಬಾಲಕಿಯೊಬ್ಬಳಿಗೆ ದಂಪತಿಗಳಿಬ್ಬರು ಬಲವಂತವಾಗಿ ಮದ್ಯ ಕುಡಿಸಿ, ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿದ್ದು, ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿ ಬಳಿ ನಡೆದಿದೆ. ವಿಡಿಯೋ ವೈರಲ್‌ ಆಗಿದ್ದು, ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಆರೋಪಿ ಮಹಿಳೆ ಪ್ರತಿಮಾ ಸರ್ಕಾರ್ ಗಡಾಂಗರ್‌ ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದಾರೆ. ಆಕೆಯನ್ನು ಬಂಧಿಸಲಾಗಿದೆ. ಆಕೆಯ ಪತಿ ಪಾರ್ಥ ಸರ್ಕಾರ್ ಪರಾರಿಯಾಗಿದ್ದಾನೆ.

ಹುಡುಗಿ ಖಲೈಗ್ರಾಮ್ ಗ್ರಾಮದಲ್ಲಿರುವ ಆರೋಪಿಗಳ ಮನೆಯಲ್ಲಿ ಮನೆಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದಳು. ಆಕೆ, ವೋಟ್ ಪ್ಯಾರಾ ಹಾಟ್ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಅವರೊಂದಿಗೆ ತೆರಳಿ ಧುಪ್ಲುರಿ ಪೊಲೀಸ್‌ ಠಾಣೆಯಲ್ಲಿ ಸರ್ಕಾರ್ ದಂಪತಿಗಳ ವಿರುದ್ದ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ದ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಇದನ್ನೂ ಓದಿ: ಬಿಎಸ್‌ವೈಗೆ ಸಿಕ್ಕಿದ್ದು ಅಲ್ಪವಿರಾಮ; ನಾಯಕತ್ವ ಬದಲಾವಣೆ ಕಟ್ಟಿಟ್ಟ ಬುತ್ತಿ: ಬಿಜೆಪಿ ಸುಳಿವು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights