ಡ್ರಗ್ ಪ್ರಕರಣ: ದೀಪಿಕಾ ಪಡುಕೋಣೆ ವಿಚಾರಣೆ ವಿಡಿಯೋ ಸೋರಿಕೆ ಎಂದು ನ್ಯೂಸ್‌ ಪೋರ್ಟಲ್ ಮಾಡಿದ್ದೇನು ಗೊತ್ತೇ?

ದೇಶಾದ್ಯಂತ ಪ್ರಸ್ತುತ ಎರಡು ವಿಚಾರಗಳು ಹೆಚ್ಚು ಚರ್ಚೆಯಲ್ಲಿವೆ. ಆದರೆ, ಮಾಧ್ಯಮಗಳು ಅದೆಲ್ಲಕ್ಕಿಂತ ಬಹುಮುಖ್ಯವಾಗಿರುವ ಒಂದು ಪ್ರಮುಖ ವಿಚಾರವನ್ನು ಬದಿಗಿಟ್ಟು, ಡ್ರಗ್ಸ್‌ ಮಾಫಿಯಾ ಮತ್ತು ಕಂಗನಾ ಸುತ್ತಲೇ ಸುತ್ತುತ್ತಿವೆ. ಈ ನಡುವೆ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರನ್ನು ಎನ್‌ಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು.

ನಟಿ ದೀಪಿಕಾ ಅವರು ವಿಚಾರಣೆಗೆ ಹಾಜರಾದ ನಂತರ, ದೀಪಿಕಾ ಅವರ ವಿಚಾರಣೆಯ ತುಣುಕುಗಳ ಲೀಕ್‌ ಆಗಿವೆ ಎಂದು ಸುದ್ದಿ ಹೆಡ್‌ಲೈನ್‌ ಹಾಕಿದ್ದ ಸ್ಕೋಪ್‌ವೂಪ್‌ ವೆಬ್ ನ್ಯೂಸ್‌ ಪೋರ್ಟಲ್‌ ವಿಶೇಷವಾಗಿ ರೈತರ ಪ್ರತಿಭಟನೆಯ ಬಗ್ಗೆ ಸುದ್ದಿ ಮಾಡಿತ್ತು.

ಎನ್‌ಸಿಬಿ ವಿಚಾರಣೆ ನಡೆಸುತ್ತಿರುವ ದೀಪಿಕಾ ಅವರ ವಿಡಿಯೋ ತುಣುಗಳು ಸೋರಿಕೆಯಾಗಿವೆ ಎಂದು ಕುತೂಹಲಕಾರಿ ಹೆಡ್‌ಲೈನ್‌ ಹಾಕಿದ್ದ ಪೋರ್ಟಲ್‌, ಸುದ್ದಿಯನ್ನು ತೆರೆದಾಗ ಅದರಲ್ಲಿ ಹೀಗಿತ್ತು.

ಈ ಲೇಖನವನ್ನು ಕ್ಲಿಕ್ ಮಾಡಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನವು ಇಂದಿನ ದೊಡ್ಡ ಸುದ್ದಿಗಳ ಕುರಿತಾಗಿದೆ. ಆ ಬೃಹತ್‌ ಸುದ್ದಿ ದೀಪಿಕಾಗೆ ಸಂಬಂಧಿಸಿಲ್ಲ. ಇದು ಇತ್ತೀಚೆಗೆ ಸಂಸತ್ತು ಅಂಗೀಕರಿಸಿದ ಮೂರು ವಿವಾದಾತ್ಮಕ ಕೃಷಿ ಮಸೂದೆಗಳ ವಿರುದ್ಧ ರೈತರ ಪ್ರತಿಭಟನೆಯಾಗಿದೆ.

ಉತ್ತರ ಭಾರತದಾದ್ಯಂತ ನಡೆಯುತ್ತಿರುವ ಈ ಪ್ರತಿಭಟನೆಗಳಿಗೆ ಎಲ್ಲದಕ್ಕಿಂತ ಹೆಚ್ಚನ ಗಮನವನ್ನು ನಾವು ಕೊಡಬೇಕಾಗಿದೆ ಎಂದು ಬರೆದು ಪ್ರತಿಭಟನೆಯ ಹಲವಾರು ತುಣುಕುಗಳನ್ನು ಹಂಚಿಕೊಂಡಿದೆ.

ಸಿನಿಮಾ, ಟ್ರಗ್ಸ್‌ ಎಂದು ಗಿರಕಿಸುತ್ತುತ್ತ ಪ್ರಭುತ್ವದ ಬಾಲಂಗೋಚಿ ಯಾಗಿರುವ ಮಾಧ್ಯಮಗಳು ದೇಶದ ಅನ್ನದಾತನನ್ನೂ, ಆತನ ಸಂಕಷ್ಟ, ಅಳನ್ನೂ ಕೇಳದೆ ಮರೆಮಾಚುತ್ತಿರುವ ಸಂದರ್ಭದಲ್ಲಿ  ಸ್ಕೋಪ್‌ವೂಪ್‌ ವೆಬ್‌ ಪೋರ್ಟಲ್‌ ಮಾಡಿರುವ ಈ ವಿಭಿನ್ನ ಸುದ್ದಿ ಸಾಮಾನ್ಯರ ಮೆಚ್ಚುಗೆಗೆ ಕಾರಣವಾಗಿದೆ.


ಇದನ್ನೂ ಓದಿ: ರೈತ ವಿರೋಧಿ ಮಸೂದೆಗಳಿಗೆ ವಿಧಾನ ಪರಿಷತ್‌ನಲ್ಲಿ ವಿರೋಧ: ತಿಸ್ಕಾರಗೊಳ್ಳುತ್ತವಾ ಮಸೂದೆಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights