ಯುವತಿ ವೀಡಿಯೋ ರಿಲೀಸ್ : ಸಾಹುಕಾರನಿಗೆ ಶುರುವಾಯ್ತಾ ಸಂಕಷ್ಟ?
ರಮೇಶ್ ಜಾರಕಿಹೊಳಿ ರಾಸಲೀಲೆ ಸಂಬಂಧಿಸಿದಂತೆ ಎಸ್ಐಟಿ ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದಂತೆ ನಿನ್ನೆ ಸಿಡಿ ಲೇಡಿ ವಿಡಿಯೋಯೊಂದನ್ನ ಬಿಡುಗಡೆ ಮಾಡಿದ್ದಾಳೆ.
ವೀಡಿಯೋದಲ್ಲಿ ಯುವತಿ ತಾನು ಮಾನಸಿಕವಾಗಿ ನೊಂದಿದ್ದೇನೆಂದು ಹೇಳಿಕೊಂಡಿದ್ದಾಳೆ. ತಾನು ಮತ್ತು ತನ್ನ ಪೋಷಕರು ಪ್ರಕರಣದಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಹೇಳಿದ್ದಾಳೆ. ನನಗೆ ರಕ್ಷಣೆ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾಳೆ. ರಮೇಶ್ ಜಾರಕಿಹೊಳಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಸದ್ಯ ಸಿಡಿ ಕೂಡ ಬಿಡುಗಡೆ ಮಾಡಲಾಗಿದೆ. ಈ ಸಿಡಿ ಹೇಗೆ ಬಿಡುಗಡೆಯಾಗಿದೆ ಎಂದು ನನಗೆ ಗೊತ್ತಿಲ್ಲ ಎಂದು ಯುವತಿ ಹೇಳಿದ್ದಾಳೆ.
ಯುವತಿ ವೀಡಿಯೋ ಬಿಡುಗಡೆಯಾಗುತ್ತಿದ್ದಂತೆ ಸಿಡಿ ವಿಚಾರ ಟ್ವಿಸ್ಟ್ ಪಡೆದುಕೊಂಡಿದೆ. ಯುವತಿ ವೀಡಿಯೋದಲ್ಲಿ ತನ್ನ ರಕ್ಷಣೆಗೆ ಮನವಿ ಮಾಡಿಕೊಂಡಿದ್ದಾಳೆ. ಜೊತೆಗೆ ರಮೇಶ್ ಜಾರಕಿಹೊಳಿ ಕೆಲಸ ಕೊಡಿಸುವುದಾಗಿ ಹೇಳಿದ್ದರು ಎಂದು ಕೂಡ ಸ್ಪಷ್ಟವಾಗಿ ಹೇಳಿದ್ದಾಳೆ. ಸದ್ಯ ಈ ಹೇಳಿಕೆ ಮೇಲೆ ತನಿಖೆ ಚುರುಕುಗೊಂಡಿದೆ.
ಮುಂದೆ ಯುವತಿ ವೀಡಿಯೋ ಆಧಾರದ ಮೇಲೆ ಎಸ್ಐಟಿ ಯಾವ ರೀತಿ ತನಿಖೆ ಶುರು ಮಾಡುತ್ತದೆ ಎಂದು ಕಾದು ನೋಡಬೇಕಿದೆ. ಒಂದು ವೇಳೆ ಯುವತಿ ತನಗೆ ಮೋಸವಾಗಿದೆ ಎಂದು ಹೇಳಿದ್ದೇ ಆದರೆ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.