ಸಾಹುಕಾರನ ವಿರುದ್ಧ ತಿರುಗಿಬಿದ್ದ ಯುವತಿ : ಪೊಲೀಸರಿಗೆ ತಲೆನೋವಾದ ಯುವತಿ ಹೇಳಿಕೆ!

ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಪ್ರತಿನಿತ್ಯ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮೊನ್ನೆಯಷ್ಟೇ ರಮೇಶ್ ಜಾರಕಿಹೊಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಇದೇ ರಮೇಶ್ ಗೆ ಸಂಕಷ್ಟ ತಂದೊಡ್ಡಿದರೂ ಆಶ್ಚರ್ಯಪಡಬೇಕಿಲ್ಲ. ಯಾಕೆಂದ್ರೆ ಸಾಹುಕಾರನ ವಿರುದ್ಧ ತಿರುಗಿಬಿದ್ದ ಯುವತಿ ತಾನೂ ಕೂಡ ತನ್ನ ಹೇಳಿಕೆಯ ವೀಡಿಯೋ ಹರಿ ಬಿಟ್ಟಿದ್ದಾಳೆ.

ಹೌದು.. ಸಾಹುಕಾರ ಕೇಸ್ ದಾಖಲಿಸುತ್ತಿದ್ದಂತೆ ಯುವತಿ ತಾನೂ ನೊಂದ ಬಗ್ಗೆ ವೀಡಿಯೋ ಹರಿಬಿಟ್ಟಿದ್ದಾಳೆ. ತನಗೆ ಕೆಲಸ ಕೊಡಿಸುವುದಾಗಿ ರಮೇಶ್ ಹೇಳಿ ಸದ್ಯ ಈ ರೀತಿ ವೀಡಿಯೋ ಬಿಡುಗಡೆ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಸದ್ಯ ೀ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಎಫ್ಐಆರ್ ದಾಖಲಾದ ತಕ್ಷಣ ಆ ಹುಡುಗಿಯ ವೀಡಿಯೋ ರಿಲೀಸ್ ಆಗಿದ್ದು, ಅಂದರೆ ಆ ಹುಡುಗಿ ವಿದೇಶದಲ್ಲಿದ್ದಾಳೆ, ಅಲ್ಲಿದ್ದಾಳೆ ಇಲ್ಲಿದ್ದಾಳೆ ಎಂದು ಹೇಳಿದ್ದ ರಮೇಶ್ ಹೇಳಿಕೆಗಳು ಕ್ರಮೇಣ ಸುಳ್ಳಾ ಎನ್ನುವ ಅನುಮಾನಗಳು ಕಾಡತೊಡಗಿವೆ.

ರಮೇಶ್ ಜಾರಕಿಹೊಳಿ ವಿರುದ್ಧ ತಿರುಗಿಬಿದ್ದ ಯುವತಿ ಗೃಹ ಸಚಿವರಿಗೆ ರಕ್ಷಣೆಗಾಗಿ ಮನವಿ ಮಾಡಿಕೊಂಡಿದ್ದಾಳೆ. ಆದರೆ ರಮೇಶ್ ಮಾತ್ರ ತಾವು ಸಿಡಿಯಲ್ಲಿರುವ ವ್ಯಕ್ತಿ ಅಲ್ಲ ಎಂದು ಸಾರಿ ಸಾರಿ ಹೇಳಿದ್ದಾರೆ.

ಒಂದು ಕಡೆ ಮಹಿಳೆ ತನ್ನನ್ನು ದುರಪಯೋಗ ಮಾಡಿಕೊಳ್ಳಲಾಗಿದೆ ಎಂದು ಹೇಳುತ್ತಿದ್ದಾಳೆ. ಮತ್ತೊಂದು ಕಡೆ ರಮೇಶ್ ಜಾರಕಿಹೊಳಿ ಕೂಡ ತಾವು ಯಾವ ತಪ್ಪು ಮಾಡಿಲ್ಲ ತಮ್ಮ ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿ ದೂರು ಕೊಟ್ಟಿದ್ದಾರೆ. ಯುವತಿ ಕೂಡ ನೇರವಾಗಿ ಬಂದು ಯಾವುದೇ ದೂರಾಗಲಿ, ಹೇಳಿಕೆಯಾಗಲಿ ನೀಡುತ್ತಿಲ್ಲ. ಹೀಗಾಗಿ ಯುವತಿ ವೀಡಿಯೋದಿಂದ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

ಹೀಗಾಗಿ ಯುವತಿ ಹೇಳಿಕೆ ಕೂಡ ಅಂತಿಮವಲ್ಲ. ಅಥವಾ ರಮೇಶ್ ಜಾರಕಿಹೊಳಿ ಹೇಳಿರುವ ಮಾತು ಕೂಡ ಅಂತಿಮವಲ್ಲ. ಇವರಿಬ್ಬರ ಹೇಳಿಕೆ ಕೂಡ ಅಂತಮವಲ್ಲ. ಇದರ ಬಗ್ಗೆ ತನಿಖೆಯಾಗಬೇಕು. ಸೂಕ್ತ ತನಿಖೆ ಬಳಿಕವಷ್ಟೇ ಯಾವುದು ಸತ್ಯ ಯಾವುದು ಸುಳ್ಳು ಎನ್ನುವ ವಿಚಾರ ಬಹಿರಂಗವಾಗಲಿದೆ. ಮುಂದೆ ಎಸ್ಐಟಿ ಯಾವ ರೀತಿ ತನಿಖೆ ಮಾಡುತ್ತದೆ ಎಂದು ಕಾದ ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights