ರೈತರನ್ನು ಅಪರಾಧಿಗಳಂತೆ ನೋಡಬೇಡಿ: ಪ್ರಧಾನಿ ಮೋದಿಗೆ ಮೆಘಾಲಯ ರಾಜ್ಯಪಾಲರ ಮನವಿ!

ಕೃಷಿ ಕಾಯ್ದೆಗಳ ವಿರುದ್ದ ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನು ಅಪರಾಧಿಗಳಂತೆ ನೋಡಬೇಡಿ. ಅವರನ್ನು ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸಬೇಡಿ ಎಂದು ಮೆಘಾಲಯ ರಾಜ್ಯಪಾಲ ಸತ್ಯಪಾಲ್‌ ಮಲ್ಲಿಕ್‌‌ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಮಾಡಿದ್ದಾರೆ.

ತಮ್ಮ ತವರು ಭಾಗ್‌ಪತ್‌ನಲ್ಲಿ ಮಾತನಾಡಿರುವ ಅವರು, ರೈತರಿಗೆ ಶಾಸನಾತ್ಮಕವಾಗಿ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಸಿ) ಖಾತರಿಯನ್ನು ನೀಡಬೇಕು. ಆಗ ರೈತರು ತಮ್ಮ ಪಟ್ಟು ಸಡಿಸುತ್ತಾರೆ. ರೈತರನ್ನು ದೆಹಲಿಯಿಂದ ಬರಿಗೈಯಲ್ಲಿ ಮನೆಗೆ ಕಳುಹಿಸಬೇಡಿ ಎಂದು ಅವರು ಹೇಳಿದ್ದಾರೆ.

ರೈತರ ಮೇಲೆ ಬಲ ಪ್ರಯೋಗ ಮಾಡಬೇಡಿ. ಯಾವ ದೇಶದಲ್ಲಿ ರೈತರು ಮತ್ತು ಸೈನಿಕರು ತೃಪ್ತಿಯಿಂದ ಇರುವುದಿಲ್ಲವೋ ಆ ದೇಶ ಮುಂದುವರಿಯಲು ಸಾಧ್ಯವಿಲ್ಲ. ದೇಶವನ್ನು ರಕ್ಷಿಸುವುದೂ ಸಾಧ್ಯವಿಲ್ಲ. ಹಾಗಾಗಿ ರೈತರು ಮತ್ತು ಸೈನಿಕರು ತೃಪ್ತಿಯಿಂದ ಇರುವಂತೆ ನೋಡಿಕೊಳ್ಳಬೇಕು. ಅವರ ಅಭಿವೃದ್ಧಿಗೆ ಅಗತ್ಯವಾದ ಸೌಲಭ್ಯವನ್ನು ಒದಗಿಸಬೇಕು ಎಂದು ಮಲ್ಲಿಕ್‌ ತಿಳಿಸಿದ್ದಾರೆ.

“ಯಾವ ಕಾನೂನುಗಳೂ ಕೃಷಿಕರ ಪರವಾಗಿಲ್ಲ. ರೈತರು ಬೆಳೆದ ಬೆಳೆಯನ್ನು ಅಗ್ಗಕ್ಕೆ ಕೊಳ್ಳಲಾಗುತ್ತದೆ. ಅದರೆ, ಅದನ್ನೇ ಅವರಿಗೆ ದುಬಾರಿಗೆ ಮಾರಲಾಗುತ್ತದೆ. ರೈತರು ದಿನದಿಂದ ದಿನಕ್ಕೆ ಬಡವರಾಗುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ವೇತನ ಪ್ರತಿ ಮೂರು ವರ್ಷಕ್ಕೊಮ್ಮೆ ಹೆಚ್ಚುತ್ತದೆ. ಅದರೆ, ರೈತರ ಆದಾಯದಲ್ಲಿ ಯಾವುದೇ ಲಾಭವಿಲ್ಲ. ಅವರು ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಬೇಸಿಗೆ ಕಾವು; ದೆಹಲಿ ಗಡಿಯಲ್ಲಿ ಇಟ್ಟಿಗೆ ಮನೆಗಳನ್ನು ನಿರ್ಮಿಸುತ್ತಿದ್ದಾರೆ ರೈತರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights