ಬಿಗ್ ಬಾಸ್ ಮನೆಯಿಂದ ನಿರ್ಮಲಾ ಚೆನ್ನಪ್ಪ ಗೇಟ್ ಪಾಸ್…!

ಬಿಗ್ ಬಾಸ್ ಮನೆಯಿಂದ ಈ ವಾರ ಒಬ್ಬರು ಹೊರಬಂದಿದ್ದಾರೆ. ಮನೆಯ ಎಲ್ಲಾ ಸ್ಪರ್ಧಿಗಳು ಒಮ್ಮತದಿಂದ ಹಾಗೂ ವೀಕ್ಷಕರಿಂದ ಕಡಿಮೆ ಮತಗಳಿಸಿದ ನಿರ್ಮಲಾ ಚೆನ್ನಪ್ಪ ಈ ವಾರ ಗೇಟ್ ಪಾಸ್ ಆಗಿದ್ದಾರೆ.

ಮನೆ ಸ್ಪರ್ಧಿಗಳ ಮೇನ್ ಟಾರ್ಗೇಟ್ ಆಗಿದ್ದ ನಿರ್ಮಲಾ ಒಂಟಿ ಮನೆಗೆ ಎಂಟ್ರಿ ಕೊಟ್ಟ ಆರಂಭದಿಂದಲೂ ವಿಭಿನ್ನವಾಗೇ ಗುರುತಿಸಿಕೊಂಡಿದ್ದರು. ಒಂಟಿಯಾಗಿರುವುದು, ಒಬ್ಬರೇ ಮಾತನಾಡುವುದು, ಎಲ್ಲರಿಂದಲೂ ದೂರವಿರುವುದು, ಎಲ್ಲರು ಒಂದು ದಿಕ್ಕು ಆದ್ರೆ ನಿರ್ಮಲಾ ಅವರೇ ಒಂದು ದಿಕ್ಕಾಗಿದ್ದರು. ಹೀಗಾಗಿ ಮನೆಯ ಸ್ಪರ್ಧಿಗಳು ನಿರ್ಮಲಾ ಅವರನ್ನು ಆಯ್ಕೆ ಮಾಡಿದ್ದರು. ಜೊತೆಗೆ ನಾಮಿನೇಟ್ ಆದವರ ಪೈಕಿ ನಿರ್ಮಲಾ ಅವರಿಗೆ ಕಡಿಮೆ ಓಟ್ ಬಂದಿದ್ದರಿಂದ ನಿರ್ಮಲಾ ಮನೆಯಿಂದ ಹೊರನಡೆದಿದ್ದಾರೆ.

ತಾಳ್ಮೆ, ಕ್ಷಮೆ ಕೇಳುವ ಗುಣ, ಮನೆಯವರು ಹೇಳಿದ್ದನ್ನು ಅನುಸರಿಸುವುದು ಇವೆಲ್ಲವೂ ಅವರಲ್ಲಿತ್ತಾದರೂ ಮನೆ ಸ್ಪರ್ಧಿಗಳೊಂದಿಗೆ ಬೆರೆಯದೇ ಇದ್ದಿದ್ದೇ ಮುಳುವಾಗಿ ಹೋಯ್ತು. ಇನ್ನೂ ನಿರ್ಮಾ ಬಿಗ್ ಬಾಸ್ ಮನೆಯಲ್ಲಿ ಕಳೆದ ಎರಡು ವಾರದಲ್ಲಿ ಒಂದು ವಾರ ಒಂದೇ ಸೀರಿಯಲ್ಲಿದ್ದಿದ್ದು ವಿಶೇಷ. ರಾತ್ರಿ ಹೊತ್ತಲ್ಲ ಸೀರೆ ಉಟ್ಟು ರೆಡಿಯಾಗಿದ್ದು ಮನೆ ಸ್ಪರ್ಧಿಗಳಲ್ಲಿ ಒಂದು ರೀತಿಯ ಭಯ ಕಾಡಿತ್ತು.

ಈ ಎಲ್ಲಾ ನಡುವಳಿಕೆಗಳೇ ನಿರ್ಮಲಾ ಅವರು ಮನೆಯಿಂದ ಹೊರಬರುವಂತೆ ಮಾಡಿದವು. ಜೊತೆಗೆ ಬಿಗ್ ಬಾಸ್ ವೀಕ್ಷಕರು ಕೂಡ ನಿರ್ಮಲಾ ಅವರ ಕೈ ಹಿಡಿಯಲಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights