ಕೊರೊನಾ ಸಮಸ್ಯೆ ಮುಗಿದಿಲ್ಲ- ಮತ್ತಷ್ಟು ಉಲ್ಬಣಗೊಂಡಿದೆ; ಮುನ್ನೆಚ್ಚರಿಕೆ ವಹಿಸಿ: ರಾಹುಲ್‌ಗಾಂಧಿ

ಕೊರೊನಾ ವೈರಸ್ ದೊಡ್ಡ ಅಪಾಯವಾಗಿ ಮುಂದುವರೆಯುತ್ತಿದೆ. ಜನರು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಮತ್ತು ಸೋಂಕನ್ನು ಎದುರಿಸಲು ಶ್ರಮಿಸುತ್ತಿರುವವರನ್ನು ಜನರು ನಿರಾಸೆಗೊಳಿಸಬಾರದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.

ಕೊರೊನಾ ವೈರಸ್ ಅನ್ನು ನಿಭಾಯಿಸುವಲ್ಲಿ ಸರ್ಕಾರವು ತೀವ್ರ ನಿರ್ಲಕ್ಷ್ಯ ಮತ್ತು ಅತಿಯಾದ ವಿಶ್ವಾಸ (ಓವರ್ ಕಾನ್ಫಿಡೆನ್ಸ್‌) ಹೊಂದಿದೆ. ಆದರೆ, ಸೋಂಕಿನ ಆಕ್ರಮಣ ಇನ್ನೂ ಮುಗಿದಿಲ್ಲ ಎಂದು ರಾಹುಲ್‌ಗಾಂಧಿ ಕಳೆದ ತಿಂಗಳು ಆರೋಪಿಸಿದ್ದರು.

“ಮೊದಲೇ ಎಚ್ಚರಿಸಿದಂತೆ, ಕೋವಿಡ್ -19 ದೊಡ್ಡ ಬೆದರಿಕೆಯಾಗಿ ಮುಂದುವರೆದಿದೆ. ದಯವಿಟ್ಟು ಕೊರೊನಾ ಗಾರ್ಡ್ಸ್‌ಗಳನ್ನು ಮುಂದುವರಿಸಿ. ಮಾಸ್ಕ್‌ಗಳನ್ನು ಧರಿಸಿ ಮತ್ತು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಕಳೆದ ನಾಲ್ಕು ವಾರಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಎರಡು ಪಟ್ಟು ಹೆಚ್ಚಾಗುತ್ತಿವೆ ಎಂದು ತೋರಿಸುವ ಗ್ರಾಫ್ ಅನ್ನು ಅವರು ಹಂಚಿಕೊಂಡಿದ್ದಾರೆ.

ವಾರದಿಂದ ವಾರಕ್ಕೆ ಪ್ರಕರಣಗಳು ಶೇಕಡಾ 33 ರಷ್ಟು ಹೆಚ್ಚಾಗಿದೆ. ಇದು 2020ರ ಜುಲೈನಿಂದ ತೀವ್ರವಾದ ಏರಿಕೆಯನ್ನು ತೋರಿಸಿದೆ ಎಂದು ಗ್ರಾಫ್ ತೋರಿಸಿದೆ.

ಭಾರತವು 26,291 ಹೊಸ ಕೊರೊನಾ ಪ್ರಕರಣಗಳನ್ನು ದಾಖಲಿಸಿದೆ. ಇದು 85 ದಿನಗಳಲ್ಲಿ ಅತಿ ಹೆಚ್ಚು ಪ್ರಮಾಣಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,13,85,339 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

Read Also: ಮಮತಾ ಬ್ಯಾನರ್ಜಿ ಕಾಲಿಗೆ ಪೆಟ್ಟು: ಭದ್ರತಾ ನಿರ್ದೇಶಕ-ಪೊಲೀಸ್‌ ವರಿಷ್ಠಾಧಿಕಾರಿ ಅಮಾನತು; ಜಿಲ್ಲಾಧಿಕಾರಿ ವರ್ಗಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights