ಕೊಟ್ಟ ಮಾತು ಮರೆತ ಯಡಿಯೂರಪ್ಪ ಸಂತ್ರಸ್ತರಿಗೆ ಕೈ ಕೊಟ್ಟ ಶಾಸಕ ಶ್ರೀಮಂತ ಪಾಟೀಲ್

ಚುನಾವಣೆಗೂ ಮುನ್ನ ಒಂದು ವರಸೆ ಚುನಾವಣೆ ಮುಗಿದ ಬಳಿಕ ಮತ್ತೊಂದು ವರಸೆ, ನಿಮ್ಮ ಸಮಸ್ಯೆಯೇ ನಮ್ಮ ಸಮಸ್ಯೆ ಎಂದಿದ್ದರೂ ಅಂದು ಸಿ ಎಂ ಹಾಗೂ ಅನರ್ಹ ಶಾಸಕರು, ಬಣ್ಣದ ಮಾತು ಕೇಳಿ ಸಂತ್ರಸ್ತರು ಓಟ್ ಕೂಡ ಹಾಕಿದ್ರು ಆದ್ರೆ ಓಟ್ ಪಡೆಸ ಶಾಸಕರು ಮಾತ್ರ ಇತ್ತ ತಿರುಗಿ ನೋಡುತ್ತಿಲ್ಲ. ಅತಂತ್ರ ಸ್ಥಿತಿಯಲ್ಲಿ ಸಂತ್ರಸ್ತರ ಜೀವನ ಆಗಿದೆ. ಹಾಗಾದ್ರೆ ಯಾರು ಸಂತ್ರಸ್ತರು ಅಂತಿರಾ

ಮುರುಕಲು ಮನೆ, ಅದೆ ಮನೆಯಲ್ಲಿ ಅಡುಗೆ ಮಾಡುತ್ತಿರು ತಾಯಿ, ದನದ ಕೊಟ್ಟಿಗೆಲ್ಲೆ ಜೀವನ ಇಂತಹ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಗ್ರಾಮಗಳಲ್ಲಿ ಪ್ರವಾಹ ಬಂದು ಐದು ತಿಂಗಳುಗಳು ಕಳೆದ್ರು ಸಂತ್ರಸ್ತರು ಪರಿಸ್ಥಿತಿ ಮಾತ್ರ ಇದುವರೆಗೂ ಬದಲಾಗಿಲ್ಲ. ಕೃಷ್ಣಾ ತೀರದ 11 ಗ್ರಾಮಗಳು ಮುಳುಗಡೆಯಾಗಿದ್ದವು ಸಾವಿರಾರು ಜನ ತಮ್ಮ ಮನೆಗಳನ್ನ ಕಳೆದುಕೊಂಡಿದ್ರು. ಪ್ರವಾಹದ ಬಳಿಕ ಮನೆಗಳ ಸರ್ವೆ ಮಾಡಿದ್ಧ ಅಧಿಕಾರಿಗಳ ಲೋಪದೋಷಗಳಳಿಂದ ಮನೆಗಳ ಸರ್ವೆ ಕಾರ್ಯ ಕೂಡ ಸ್ಥಗಿತಗೊಂಡಿತು. ಆದ್ರೆ ಅಷ್ಟರಲ್ಲೆ ಕಾಗವಾಡ ಉಪ ಚುನಾವಣೆ ಆಗುತ್ತಿದ್ದಂತೆ ಅಂದು ಚುನಾವಣೆ ನೀತಿ ಸಂಹಿತೆ ಹೆಸರಿನಲ್ಲಿ ಸಂತ್ರಸ್ತರು ನೋಂದಣಿ ಕಾರ್ಯ ಬಂದ್ ಮಾಡಿದ ಸರ್ಕಾರ ಇದುವರೆಗೂ ಪುನಃ ಆರಂಭಿಸಿಲ್ಲ. ಪರಿಣಾಮ
ಕಾಗವಾಡ ಕ್ಷೇತ್ರದ 11 ಗ್ರಾಮದ 994 ಸಂತ್ರಸ್ತರಿಗೆ ಇದುವರೆಗೂ ಮನೆ ಕಟ್ಟಲು ಒಂದು ನಯಾ ಪೈಸೆ ಕೂಡ ಬಂದಿಲ್ಲಾ.

ಇನ್ನು ಚುನಾವಣೆ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿ ಈ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಚುನಾವಣೆ ಮುಗಿಯುತ್ತಿದ್ದಂತೆ ನಿಮ್ಮ ಸಮಸ್ಯೆಗಳನ್ನ ಬಗೆ ಹರಿಸ್ತಿವಿ. ಮನೆ ಕಳೆದುಕೊಂಡ ಎಲ್ಲರಿಗೂ ಮನೆ ಕೊಡ್ತಿವಿ ನಮ್ಮದೆ ಸರ್ಕಾರ ಬರುತ್ತೆ ನಮ್ಮ ಶಾಸಕರಿಗೆ ಮತ ನೀಡಿ ನಿಮ್ಮ ಸಮಸ್ಯೆಯೆ ನಮ್ಮ ಸಮಸ್ಯೆ ಅಂತೆಲ್ಲ ಸಿಎಂ ಯಡಿಯೂರಪ್ಪ ಮಾತು ಕೊಟ್ಟಿದ್ರು. ಇದನ್ನೆ ನಂಬಿದ ಸಂತ್ರಸ್ತರು ಶ್ರೀಮಂತ ಪಾಟೀಲ್ ರನ್ನ ಗೆಲ್ಲಿಸಿ ಕಳಿಸಿದ್ರು. ಆದ್ರೆ ಶ್ರೀಮಂತ ಪಾಟೀಲ್ ಕ್ಷೇತ್ರದಲ್ಲಿ ಮಾತ್ರ ಸಂತ್ರಸ್ತರ ಆಕ್ರಂದಣ ಇದುವರೆಗೂ ನಿಂತಿಲ್ಲಾ. ಕಾಗವಾಡ ಉಪ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಗಳನ್ನ ಸರ್ಕಾರ ಇದುವರೆಗೂ ಇಡೆರಿಸಿಲ್ಲ ಯಡಿಯೂರಪ್ಪ ಸಿ ಎಂ ಖುರ್ಚಿ ಗಟ್ಟಿಯಾಯ್ತು, ಅನರ್ಹರು ಗೆದ್ದು ಅರ್ಹರಾದರು, ಆದ್ರೆ ಈಗಲೂ ಸಹ ಸಾವಿರಾರು ಕುಟುಂಬಗಳು ಬೀದಿಯಲ್ಲಿ ಜೀವನ ನಡೆಸುವಂತ ಪರಿಸ್ಥಿತಿ ಮುಂದುವರೆದಿದೆ.

ಒಟ್ಟಿನಲ್ಲಿ ಸರ್ಕಾರ ರಚನೆಗೂ ಮುನ್ನ ಯಡಿಯೂರಪ್ಪ ಹಾಗೂ ಶಾಸಕ ಶ್ರೀಮಂತ ಪಾಟೀಲ್ ಭರವಸೆಗಳ ಸುರಿಮಳೆಯನ್ನೆ ಹರಿಸಿದ್ರು ಆದ್ರೆ ಈಗ ಸಂತ್ರಸ್ತರ ಸಮಸ್ಯೆ ಕೇಳೊಕು ಯಾರು ಇಲ್ಲಾ ಅತ್ತ ಯಡಿಯೂರಪ್ಪಗೆ ಸಂಪುಟ ವಿಸ್ತರಣೆ ಚಿಂತೆಯಾದ್ರೆ ಇಲ್ಲಿನ ಶಾಸಕರಿಗೆ ಸಚಿವರಾಗೋ ಕನಸು ಶುರುವಾಗಿದೆ. ಆದ್ರೆ ಓಟ್ ಹಾಕಿ ಗೆಲ್ಲಿಸಿದ ನೆರೆ ಸಂತ್ರಸ್ಥರ ಸೂರಿನ ಕನಸು ಮಾತ್ರ ಕನಸಾಗೆ ಉಳಿದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights