ಅಕ್ರಮ ಆಸ್ತಿ ಗಳಿಕೆ ಆರೋಪ; ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳ ಮೇಲೆ ಎಸಿಬಿ ದಾಳಿ!

ಹಲವಾರು ಅಧಿಕಾರಿಗಳ ವಿರುದ್ದ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ 9 ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದೆ.

ಬೆಂಗಳೂರು, ಕೋಲಾರ, ಮಂಗಳೂರು, ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳು ಸೇರಿದಂತೆ ಸುಮಾರು 40 ಸ್ಥಳಗಳ ಮೇಲೆ 300ಕ್ಕೂ ಅಧಿಕ ಎಸಿಬಿ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಹಲವಾರು ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಎಸಿಬಿ ದಾಳಿ ನಡೆಸಿರುವ ಅಧಿಕಾರಿಗಳ ಪಟ್ಟಿ ಹೀಗಿದೆ: 

1. ಜಿ. ಶ್ರೀಧರ್, ಕಾರ್ಯಪಾಲಕ ಅಭಿಯಂತರ,‌ ನಗರಾಭಿವೃದ್ಧಿ ವಿಭಾಗ ಜಿಲ್ಲಾಧಿಕಾರಿ ಕಚೇರಿ ಮಂಗಳೂರು

2. ಕೃಷ್ಣ ಎಸ್., ಇಇ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಉಡುಪಿ

3. ಆರ್.ಪಿ ಕುಲಕರ್ಣಿ, ಸಿಇ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ

4. ಎಚ್.ಆರ್ ಕೃಷ್ಣಪ್ಪ, ಸಹಾಯಕ ನಿರ್ದೇಶಕ, ಮಾಲೂರು ನಗರ ಯೋಜನಾ ಪ್ರಾಧಿಕಾರ ಕೋಲಾರ

5. ಸುರೇಶ್ ಮೋಹ್ರೆ, ಜೆಇ ಪಿಆರ್​ಇ ಬೀದರ್

6. ವೆಂಕಟೇಶ್ ಟಿ, ಡಿಸಿಎಫ್​ ಸಾಮಾಜಿಕ ಅರಣ್ಯ ಮಂಡ್ಯ

7. ಸಿದ್ದರಾಮ ಮಲ್ಲಿಕಾರ್ಜುನ್, ಎಇಇ, ಹೆಸ್ಕಾಂ ವಿಜಯಪುರ

8. ಎ.ಕೃಷ್ಣಮೂರ್ತಿ, ಹಿರಿಯ ಮೋಟಾರು ವಾಹನ ನಿರೀಕ್ಷಕರು ಕೋರಮಂಗಲ

9. ಎ.ಎನ್.ವಿಜಯ್ ಕುಮಾರ್, ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ಬಳ್ಳಾರಿ.

ಇದನ್ನೂ ಓದಿ: ಡಿನೋಟಿಫಿಕೇಷನ್‌ ಹಗರಣ: ತನಿಖೆ ನಡೆಸದೇ ಸಿಎಂ ಬಿಎಸ್‌ವೈ, ನಿರಾಣಿಗೆ ಕ್ಲೀನ್‌ಚಿಟ್‌ ಕೊಟ್ಟ ಎಸಿಬಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights