ನಾಗರಹಾವು ಹಿಡಿಯಲು ಹೋದವ ಜಸ್ಟ್ ಮಿಸ್ : ವೀಡಿಯೋ ವೈರಲ್..!
ಹಾವು ಹಿಡಿಯುವ ಸವಾಲಿನಲ್ಲಿ ತೊಡಗಿದ್ದ ವ್ಯಕ್ತಿ ನಾಗರಹಾವನ್ನು ಹಿಡಿಯುವ ವೇಳೆ ಕೂದಳೆ ಅಂತರದಲ್ಲಿ ಅಪಾಯದಿಂದ ಪಾರಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಈ ಘಟನೆಯ ವಿಡಿಯೋ ಸೆರೆಹಿಡಿಯಲಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಎಎನ್ಐ ಹಂಚಿಕೊಂಡ 37 ಸೆಕೆಂಡುಗಳ ಕ್ಲಿಪ್ನಲ್ಲಿ, ಬಿದ್ದ ಮರದ ಮೇಲೆ ನಿಂತಿರುವ ವ್ಯಕ್ತಿ ನೀರಿನಲ್ಲಿರುವ ನಾಗರಹಾವನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಮರದ ಕೋಲನ್ನು ಬಳಸಿದ ಅವನು ಹಾವು ಅಡಗಿದ ಸ್ಥಳದಿಂದ ಹೊರತೆಗೆಯುತ್ತಾನೆ. ಇನ್ನೊಬ್ಬ ವ್ಯಕ್ತಿ ಹಾವಿನ ಬಾಲವನ್ನು ಹಿಡಿಯುತ್ತಾನೆ.
#WATCH | A reptile expert narrowly escapes being bitten by a Cobra snake while trying to catch the animal
Shivamogga, #Karnataka pic.twitter.com/czTc7Zv7pu
— ANI (@ANI) January 12, 2021
ಆದರೆ ಆ ಕ್ಷಣದಲ್ಲಿ ಹಾವು ವ್ಯಕ್ತಿಗೆ ಕಚ್ಚಲು ಮುಂದಾಗುತ್ತದೆ. ಹಾವಿನ ದಾಳಿಯಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಮರದ ಕೊಂಬೆಯಿಂದ ವ್ಯಕ್ತಿ ನೆಲಕ್ಕೆ ಬೀಳುತ್ತಾನೆ. ಜೊತೆಗೆ ಕಚ್ಚಲು ಬಂದ ಹಾವನ್ನು ದೂರ ತಳ್ಳುತ್ತಾನೆ. ಹಾವು ಮತ್ತೆ ಕಚ್ಚಲು ಪ್ರಯತ್ನಿಸುತ್ತಿದ್ದಂತೆ ಅದನ್ನು ಹಿಡಿಯಲು ಇಬ್ಬರು ಹೋರಾಡುತ್ತಾರೆ. ಅಂತಿಮವಾಗಿ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ.
ಈ ವೀಡಿಯೋ ಆನ್ಲೈನ್ನಲ್ಲಿ ಹಂಚಿಕೊಂಡಾಗಿನಿಂದ ವೀಡಿಯೊವನ್ನು ಒಂದು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
Protective gears…at least reaching knees and forehands should be provided by the department for volunteers and professionals. Snakes are so agile and can easily overrun our boney structure.
— gogreen (@Peacelover65) January 12, 2021
Was there really the need to catch the king cobra in its natural habitat?
— Sagar V Shelke (@sagarslk) January 12, 2021

