ಶಿವಮೊಗ್ಗದ ಜೆಲಿಟಿನ್ ಸ್ಪೋಟ ಮಾಸುವ ಮುನ್ನವೇ ಮತ್ತೊಂದು ಸ್ಪೋಟ..!

ಶಿವಮೊಗ್ಗದಲ್ಲಿ ಜೆಲಿಟಿನ್ ಸ್ಪೋಟಗೊಂಡ ನೆನಪು ಇನ್ನೂ ಮಾಸಿಲ್ಲ ಅದಾಗಲೇ ತುಮಕೂರಿನಲ್ಲೂ ಜಿಲಿಟಿನ್ ಸ್ಪೋಟಗೊಂಡ ಪರಿಣಾಮ ಮನೆಯೊಂದು ಧ್ವಂಸವಾಗಿದೆ.

ತುಮಕೂರಿನ ಮಸ್ಕಲ್ ಗ್ರಾಮದಲ್ಲಿ ಈ ಸ್ಪೋಟ ಸಂಭವಿಸಿದ್ದು ಮಹಿಳೆಯೊಬ್ಬಳ ತಲೆಗೆ ಗಂಭೀರವಾಗಿ ಗಾಯವಾಗಿದೆ. ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹೆಬ್ಬೂರು ಪೋಲೀಸ್ ಠಾಣೆ ವ್ಯಾಪ್ತಿಯ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿ ಇರುವ ಮಸ್ಕಲ್ ಗ್ರಾಮದ ಲಕ್ಷಮೀಕಾಂತ ಎಂಬುವರ ಮನೆ ಈ ಜಿಲಿಟಿನ್ ಸ್ಪೋಟಕ್ಕೊಳಗಾಗಿದ್ದು ಸೀಟಿನ ಮನೆ ಸಂಪೂರ್ಣವಾಗಿ ನಾಶವಾಗಿದೆ. ಸ್ಪೋಟದ ಹೊಡೆತಕ್ಕೆ ಮನೆಯ ಶೀಟುಗಳೆಲ್ಲ ಚೂರುಚೂರಾಗಿವೆ.

ಸೋಮವಾರ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸ್ಪೋಟ ಸಂಭಂವಿಸಿದ್ದು, ಈ ವೇಳೆ ಲಕ್ಷ್ಮೀಕಾಂತ್ ಮಕ್ಕಳನ್ನು ಕರೆದುಕೊಂಡು ಶಾಲೆಗೆ ಹೋಗಿದ್ದರು. ಅವರ ಪತ್ನಿ ಸುವರ್ಣಮ್ಮ ಒಬ್ಬರೇ ಇದ್ದರು.ಚೂರಾದ ಸೀಟುಗಳು ಇವರ ತಲೆಗೆ ಬಡಿದು ಗಾಯಗೊಂಡಿದ್ದಾರೆ.

ಲಕ್ಷ್ಮೀಕಾಂತ್ ಕಲ್ಲು ಬಂಡೆಗಳನ್ನು ಸ್ಫಟಿಸುವ ಕೆಲಸ ಮಾಡುತ್ತಿದ್ದು, ಹೆಚ್ಚಾಗಿದ್ದ ಜೆಲಿಟಿನ್ ಕಡ್ಡಿಗಳನ್ನು ತಂದು ಮನೆಯಲ್ಲಿಟ್ಟುಕೊಂಡಿದ್ದರು ಎನ್ನಲಾಗಿದೆ.

ಶೀಟಿನ ತಾಪಮಾನಕ್ಕೆ ಜೆಲಿಟಿನ್ ಕಡ್ಡಿಗಳು ಸ್ಪೋಟಗೊಂಡಿವೆ. ಆದರೆ ಲಕ್ಷ್ಮೀಕಾಂತ್ ಅವರಿಗೆ ಇವು ಮನೆಯಲ್ಲಿ ಸ್ಪೋಟಗೊಳ್ಳಬಹುದು ಎಂದು ತಿಳಿದಿರಲಿಲ್ಲ.ಬಿಸಿಲಿನ ತಾಪಕ್ಕೆ ಮನೆ ಮೇಲಿನ ಶೀಟುಗಳ ಶಾಕ ಹೆಚ್ಚಾಗಿ ಜೆಲಿಟಿನ್ ಸ್ಪೋಟಗೊಂಡಿವೆ. ಅಕ್ಕಪಕ್ಕದ ಮನೆಗಳೂ ಹಾನಿಗೊಳಗಾಗಿವೆ.

ಒಂದು ಬಾರಿ ಶಿವಮೊಗ್ಗದಲ್ಲಿ ಘಟನೆ ಸಂಭವಿಸಿ 6 ಮಂದಿ ಸಾವನ್ನಪ್ಪಿದರೂ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ್ದಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿ ಕೃಷ್ಣ ಡಿವೈಎಸ್ ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights