ದೆಹಲಿ MCD ಉಪಚುನಾವಣೆ: BJPಯ ಭ್ರಷ್ಟಾಚಾರವೇ AAPಗೆ ಅಸ್ತ್ರ; 15 ವರ್ಷಗಳ ನಂತರ ಅಧಿಕಾರ ಕಳೆದುಕೊಳ್ಳುತ್ತಾ ಬಿಜೆಪಿ

ರಾಷ್ಟ್ರ ರಾಜಧಾನಿ ದೆಹಲಿಯ ಮುನ್ಸಿಪಲ್‌ ಕಾರ್ಪೋರೇಷನ್‌ನ 05 ಸ್ಥಾನಗಳಿಗೆ ಫೆಬ್ರವರಿ ಕೊನೆಯ ದಿನ (ಫೆ.28) ರಂದು ಉಪಚುನಾವಣೆ ನಡೆಯಲಿದೆ. ಅಧಿಕಾರ ಕೇಂದ್ರವಾದ ದೆಹಲಿಯಲ್ಲಿ ಒಕ್ಕೂಟ ಸರ್ಕಾರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ದೆಹಲಿ ರಾಜ್ಯ ಆಡಳಿತದಲ್ಲಿ ಅಧಿಕಾರದಲ್ಲಿರುವ ಆಮ್‌ ಆದ್ಮಿ ಪಕ್ಷಗಳು ತೀವ್ರ ಪೈಪೋಟಿ ನೀಡಲು ಸಜ್ಜಾಗುತ್ತಿವೆ. ಈ ಉಪಚುನಾವಣೆಯು ಮುಂದಿನ ವರ್ಷ ನಡೆಯಲಿರುವ ಎಂಸಿಡಿ ಚುನಾವಣೆಗೆ ಮೆಟ್ಟಿಲಾಗಲಿದೆ ಎಂದು ಹೇಳಲಾಗುತ್ತಿದೆ.

ಕೊರೊನಾ ಸಾಂಕ್ರಾಮಿಕದ ಅಗತ್ಯತೆಗಳ ಹೊರತಾಗಿಯೂ ಎಂಸಿಡಿ (ಮುನ್ಸಿಪಲ್‌ ಕಾರ್ಪೋರೇಷನ್‌ ಆಫ್‌ ಡೆಲ್ಲಿ) ಅನೇಕ ವಿವಾದಾತ್ಮಕ ಚರ್ಚೆಗಳು ಮತ್ತು ಹಗರಣಗಳಿಗೆ ತಾಣವಾಗಿದ್ದು, ಇದು ಪಾಲಿಕೆ ಆಡಳಿತ ಮೇಲಿನ ಸಾರ್ವಜನಿಕರ ಭರವಸೆಯನ್ನು ಕಳೆದುಕೊಳ್ಳುವಂತೆ ಮಾಡಿದೆ ಎನ್ನಲಾಗಿದೆ.

ಪುರಸಭೆಯ ಸಿಬ್ಬಂದಿಗಳ ಮುಷ್ಕರಗಳು, ಸಂಬಳ ನೀಡಲು ಅಸಮರ್ಥತೆ, ಆಡಳಿತ ನಿರ್ವಹಣೆಯಲ್ಲಿನ ಹಗರಣಗಳು, ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಇಚ್ಛಾಶಕ್ತಿ ಕೊರತೆ ಮತ್ತು ಇತರ ನಾನಾ ಸಮಸ್ಯೆಗಳ ಕಾರಣದಿಂದಾಗಿ ಕಾರ್ಪೋರೇಷನ್‌ ಆಡಳಿತದಲ್ಲಿ ಉಪಚುನಾವಣೆಯನ್ನು ಗೆಲ್ಲಲು ರಾಜಕೀಯ ಜಾಣ್ಮೆಯಿಂದಷ್ಟೇ ಅಧಿಕಾರ ಸಾಧ್ಯವಿಲ್ಲ ಎಂಬಂತಾಗಿದೆ.

ಏಪ್ರಿಲ್ 2017 ರ ಎಂಸಿಡಿ ಚುನಾವಣೆಯಲ್ಲಿ ನಗರದ 272 ವಾರ್ಡ್‌ಗಳಲ್ಲಿ 181 ರಲ್ಲಿ ಬಿಜೆಪಿ ಜಯಗಳಿಸಿತ್ತು. ಎಎಪಿ 49 ವಾರ್ಡ್‌ಗಳಲ್ಲಿ ಜಯಗಳಿಸಿ ಅತ್ಯಂತ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ 31 ವಾರ್ಡ್‌ಗಳಲ್ಲಿ ಗೆಲುವಿನೊಂದಿಗೆ ಮೂರನೇ ಸ್ಥಾನದಲ್ಲಿದೆ. 2022 ರಲ್ಲಿ ನಡೆಯಲಿರುವ ಎಂಸಿಡಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಎಪಿಯದ್ದು ಎರಡನೇ ಪ್ರಯತ್ನವಾಗಿದೆ. ಉಪಚುನಾವಣೆಯಲ್ಲಿ ಆಳುವ ಪಕ್ಷದ ವಿರುದ್ಧ ಗೆಲ್ಲಲು ಮುಖ್ಯ ಉಪಾಯವೆಂದರೆ ನೈರ್ಮಲ್ಯ ಅಥವಾ ಹಣಕಾಸು ನಿರ್ವಹಣೆಯ ವಿಷಯದಲ್ಲಿ ಎಂಸಿಡಿಯಲ್ಲಿನ ರಾಜಕೀಯ ಭ್ರಷ್ಟಾಚಾರ ಮುಖ್ಯ ಅಸ್ತ್ರವಾಗಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ BJP ನಾಯಕರು; ಶೇಮ್‌ ಆನ್‌ ಬಿಜೆಪಿ ಎಂದ ಟಿಎಂಸಿ!

ಭ್ರಷ್ಟಾಚಾರವು ದೆಹಲಿಯ ನಗರ ಆಡಳಿತ ಸಂಸ್ಥೆಗಳ ಸ್ಥರವನ್ನೇ ನಾಶಪಡಿಸಿದೆ ಎಂಬ ಆರೋಪ ಹೆಚ್ಚಾಗಿ ಇದೆ. ಆಮ್ ಅದ್ಮಿ ಪಕ್ಷವು ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದು, ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಮೂಲಭೂತ ಸಮಸ್ಯೆಗಳನ್ನು ಮುಂಚೂಣಿಗೆ ತಂದಿದೆ. ಎಂಸಿಡಿಯಲ್ಲಿನ ಆಡಳಿತಾತ್ಮಕ ದುಷ್ಕೃತ್ಯಗಳಿಂದ ಮಾತ್ರವಲ್ಲ, ಸಾರ್ವಜನಿಕ ಸಂಪನ್ಮೂಲಗಳ ಅತಿರೇಕದ ನಿರ್ವಹಣೆಯಿಂದ ಕೂಡಿದೆ. ಎಂಸಿಡಿಯ ಕ್ಲೆಪ್ಟೋಕ್ರಟಿಕ್ ಸ್ವಭಾವವು ಸ್ಥಳೀಯ ಆಡಳಿತ ರಚನೆಯಲ್ಲಿ ಪ್ರಜಾಪ್ರಭುತ್ವದ ದೋಷಗಳನ್ನು ಬಹಿರಂಗಪಡಿಸಿದೆ ಎಂದು ಆಮ್‌ ಆದ್ಮಿ ಪಾರ್ಟಿ ದೂರುತ್ತಿದೆ.

ಬಿಜೆಪಿ ಮತ್ತು ಎಎಪಿ ನಡುವಿನ ಮುಖಾಮುಖಿ ಹೋರಾಟವು ಎಂಸಿಡಿಯಲ್ಲಿನ ದುರಾಡಳಿತದ ನಿರೂಪಣೆಯ ಮೇಲೆ ಆಧಾರವಾಗಿದೆ. ದೆಹಲಿಯ ಪುರಸಭೆಯ ಆಡಳಿತ ಕಚೇರಿಗಳಲ್ಲಿನ ದುರಾಡಳಿತ-ಭ್ರಷ್ಟಾಚಾರಗಳ ಮೇಲೆ ಹೆಚ್ಚು ಚರ್ಚೆಗಳು ಕೇಂದ್ರೀಕೃತವಾಗಿದೆ. ನೈರ್ಮಲ್ಯವು ಪುರಸಭೆಯ ಆಡಳಿತಕ್ಕೆ ಒಂದು ಕಳಂಕವಾಗಿದೆ. ಮೂರು ಭೂಭರ್ತಿಗಳ ನಿರ್ವಹಣೆ ಮತ್ತು ಲಕ್ಷಾಂತರ ದೆಹಲಿಯ ಜನರ ಜೀವನದ ಮೇಲೆ ಪರಿಣಾಮ ಬೀರುವ ಆರೋಗ್ಯದ ಅಪಾಯವು ವಿವಾದಾತ್ಮಕ ಸ್ಪರ್ಧೆಯಾಗಿದೆ. ಆದಾಗ್ಯೂ, ಎಂಸಿಡಿಯ ಮೂಲದಲ್ಲಿರುವ ಮೂಲ ಅಂಶವೆಂದರೆ ಆರ್ಥಿಕ ದಿವಾಳಿತನ. ಎಂಸಿಡಿಯ ಬ್ಯಾಂಕ್ ಖಾತೆಗಳು ಆರ್ಥಿಕ ದಿವಾಳಿತನದ ಸ್ಥಿತಿಗೆ ಸಾಕ್ಷಿಯಾಗಿವೆ. ಉತ್ತರ ಮತ್ತು ಪೂರ್ವ ಮಹಾನಗರ ಪಾಲಿಕೆಗಳು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಕ್ರಮವಾಗಿ 12 ಕೋಟಿ ಮತ್ತು 99 ಲಕ್ಷ ರೂ. ಹಣವನ್ನು ಹೊಂದಿವೆ. ಇದಲ್ಲದೆ, ಅವರು ದೆಹಲಿ ಸರ್ಕಾರಕ್ಕೆ 6,276 ಕೋಟಿ ರೂ. ಸಾಲವನ್ನು ಪಾವತಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಪುರಸಭೆಯ ಆಡಳಿತವು ನಗರದ ಮೂಲಭೂತ ಅಗತ್ಯಗಳಿಗೆ ಸ್ಪಂದಿಸುವ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಂಪನ್ಮೂಲಗಳನ್ನು ಸ್ವಯಂ-ಉತ್ಪಾದಿಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

ಎಂಸಿಡಿಯ ದಿವಾಳಿತನವು ಅದರ ಅಪರಾಧದ ಮಿತಿಗಳನ್ನು ಹೆಚ್ಚಿಸಿದೆ. ಸಾಂಕ್ರಾಮಿಕ ಕಾಲದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸಿಬ್ಬಂಧಿ, ಶಿಕ್ಷಕರು, ಪಿಂಚಣಿದಾರರು ಅಥವಾ ನೈರ್ಮಲ್ಯ ಕಾರ್ಮಿಕರು ಆಗಿರಲಿ ಎಂಸಿಡಿ ಉದ್ಯೋಗಿಗಳಿಗೆ ಎಂಸಿಡಿ ಸಂಬಳ ನೀಡಲು ಅಸಮರ್ಥವಾಗಿದೆ. ಈಗಾಗಲೇ, ಪುರಸಭೆಯ ನೌಕರರು ದೆಹಲಿಯ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಜಂತರ್ ಮಂತರ್‌ನಲ್ಲಿ ಕ್ಯಾಂಡಲ್‌ಲೈಟ್ ಜಾಗರಣೆ ಮಾಡುತ್ತಿದ್ದಾರೆ. ಹೀಗಾಗಿ, ಎಂಸಿಡಿ ಆಡಳಿತಾರೂಢ ಬಿಜೆಪಿ ಮತ್ತು ದೆಹಲಿ ಸರ್ಕಾರದ ನಡುವೆ ವಾಕ್ಸಮರಕ್ಕೆ ಇದು ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ತಂದೆಯ ಬಂಧನಕ್ಕೆ ವಿರೋಧ; ಸರ್ಕಾರದ ಬೈಸಿಕಲ್‌ ಬೇಡವೆಂದ BJP ಮುಖಂಡನ ಮಗಳು!

ಉತ್ತರ ಎಂಸಿಡಿಯಲ್ಲಿ 2,500 ಕೋಟಿ ರೂ.ಗಳ ಆರ್ಥಿಕ ಅಕ್ರಮಗಳು ನಡೆದಿವೆ ಎಂದು ಬಿಜೆಪಿ ವಿರುದ್ಧ ಎಎಪಿ ಆರೋಪಿಸಿ ದೆಹಲಿಯಾದ್ಯಂತ ಪೋಸ್ಟರ್‌ಗಳನ್ನು ಹೊರಡಿಸಿದೆ. ಉತ್ತರ ಎಂಸಿಡಿ ಒಡೆತನದ ಸಿವಿಕ್ ಸೆಂಟರ್‌ನಲ್ಲಿರುವ ಎಸ್‌ಡಿಎಂಸಿ ಕಚೇರಿಗೆ 2,500 ಕೋಟಿ ರೂ.ಬಾಡಿಗೆ ನೀಡಬೇಕು. ಆದರೆ ಈ ವರ್ಷದ ಬಜೆಟ್‌ನಲ್ಲಿ, ಪಾವತಿಸಬೇಕಾದ ಬಾಡಿಗೆಯನ್ನು ಶೂನ್ಯ ಎಂದು ನಮೂದಿಸಲಾಗಿದೆ. ಆ ಮೂಲಕ ಎಂಸಿಡಿಯಲ್ಲಿ 2,500 ಕೋಟಿ ರೂ. ಕಾಣೆಯಾಗಿದೆ ಎಂಬ ರಹಸ್ಯವನ್ನು ಎಎಪಿ ಬಿಚ್ಚಿಟ್ಟಿದೆ.

2020 ರ ಡಿಸೆಂಬರ್‌ನಲ್ಲಿ, ದೆಹಲಿ ವಿಧಾನಸಭೆಯು ರಾಜಧಾನಿಯ ಪುರಸಭೆ ಸಂಸ್ಥೆಗಳಲ್ಲಿ 2,500 ಕೋಟಿ ರೂ.ಗಳ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಧ್ವನಿಮುದ್ರಣವನ್ನು ಜಾರಿಗೊಳಿಸಿತು. ಈ ಮೂಲಕ ಬಿಜೆಪಿಯೊಂದಿಗೆ ಮುಖಾಮುಖಿಯಾಗಲು ಮುಂದಾಯಿತು. ಎಂಡಿಸಿಯನ್ನು ಧೀರ್ಘಕಾಲದ ವರೆಗೆ ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಬಿಜೆಪಿಯ ಭ್ರಷ್ಟಾಚಾರ ಮತ್ತು ದುರುಪಯೋಗದ ಆರೋಪಗಳು ಆಡಳಿತ ಮತ್ತು ವಹಿವಾಟಿನ ಕೆಟ್ಟ ವಲಯವನ್ನು ಬಹಿರಂಗಪಡಿಸಿವೆ. ಪುರಸಭೆಯ ಆಡಳಿತದ ಆರ್ಥಿಕ ಅಸಮರ್ಥತೆಗಳು ಸಾಂಸ್ಥಿಕ ಬಿಕ್ಕಟ್ಟಿಗೆ ಸಿಲುಕಿವೆ.

ಈ ಅಧಿಕಾರದ ತಿಕ್ಕಾಟದಲ್ಲಿ, ಎಎಪಿ ಮತ್ತು ಬಿಜೆಪಿ ಎರಡೂ ಮುಂಬರುವ ಎಂಸಿಡಿ ಚುನಾವಣೆಗಳಿಗೆ ತಮ್ಮ ಚುನಾವಣಾ ನೆಲೆಯನ್ನು ಕ್ರೂಢೀಕರಿಸಲು ರಾಜಕೀಯ ಅವಕಾಶವನ್ನು ಕಂಡುಕೊಂಡಿವೆ. ಎಂಸಿಡಿಯಲ್ಲಿನ ಭ್ರಷ್ಟಾಚಾರದ ವಿರುದ್ಧ 2.5 ಲಕ್ಷ ಮತದಾರನ್ನು ತಲುಪಲು ಬೃಹತ್ ಪ್ರಚಾರಕ್ಕಾಗಿ ಎಎಪಿ ಮೊಹಲ್ಲಾ ಸಭೆಗಳನ್ನು ಮತ್ತೆ ಆರಂಭಿಸಿದೆ. ದೆಹಲಿಯ ಪುರಸಭೆಗಳಲ್ಲಿ ಜನ ಕೇಂದ್ರಿತ ಆಡಳಿತದ ಭರವಸೆಯೊಂದಿಗೆ ಮತದಾರರನ್ನು ಸೆಳೆಯಲು, ನಗರದ ಮೂಲೆ-ಮೂಲೆಯಲ್ಲೂ ತಲುಪಲು ಮೊಹಲ್ಲಾ ಸಭೆಗಳು ವ್ಯವಸ್ಥಿತವಾದ ಸಹಾಕಾರಿಯಾಗಿವೆ.

ಕಳೆದ 15 ವರ್ಷಗಳಿಂದ ದೆಹಲಿಯ ಪುರಸಭೆಗಳ ಚುನಾವಣೆಗಳು ಯಾವುದೇ ರೀತಿಯ ಬೃಹತ್ ಪೈಪೋಟಿಯನ್ನು ಎದುರಿಸಲಿಲ್ಲ. ಅದು ಯಥಾಸ್ಥಿತಿಯನ್ನು ಕಾಪಿಟ್ಟಿತ್ತು. ಬಿಜೆಪಿಯ 15 ವರ್ಷಗಳ ಆಡಳಿತವು ದೆಹಲಿ ಜನರಿಗೆ ಪುರಸಭೆಗಳ ಮೇಲಿನ ಭರವಸೆಯನ್ನೇ ನಾಶಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಎಎಪಿಯು ಬಿಜೆಪಿಗೆ ಸಮನಾದ ಪೈಪೋಟಿ ನೀಡಲಿದೆ. ಉಪಚುನಾವಣೆಯನ್ನು ಗೆಲ್ಲುವ ಭರವಸೆಯಲ್ಲಿರುವ ಎಎಪಿ, ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಮಣಿಸಿ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸದಲ್ಲಿದೆ. ಈ ವರ್ಷದ ಫೆಬ್ರವರಿಯ ಅಂತ್ಯಕ್ಕೆ ಉಪಚುನಾವಣೆ ನಡೆಯಲಿದ್ದು, 2022ರ ಆರಂಭದಲ್ಲಿ ಎಂಸಿಡಿಗೆ ವಸ್ತೃತ ಚುನಾವಣೆ ನಡೆಯಲಿದೆ.

ಮೂಲ: ಡೈಲಿ ಓ.ಇನ್

ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಇದನ್ನೂ ಓದಿ: ರಾಜಸ್ಥಾನದ 50ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳು ಕಾಂಗ್ರೆಸ್‌ ತೆಕ್ಕೆಗೆ; BJPಗೆ ಭಾರೀ ಮುಖಭಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights