‘ಕೆಲಸ ಆಯ್ತು….!’ ರಮೇಶ್ ಜಾರಕಿಹೊಳಿ ಸಿಡಿ ಗ್ಯಾಂಗ್ ಗೆ ಕರೆ ಮಾಡಿದ್ದ ಲೇಡಿ..!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋದ ಮಾಸ್ಟರ್ ಕಾಪಿ ಸಿಕ್ಕ ಬೆನ್ನಲ್ಲೇ ಎಸ್ಐಟಿ ತನಿಖೆ ಧಿಕ್ಕೆ ಬದಲಾಗಿದೆ. ಎಡಿಟ್ ಆಗದ ಅಸಲಿ ವಿಡಿಯೋವನ್ನಿಟ್ಟುಕೊಂಡು ಸಿಡಿ ಗ್ಯಾಂಗ್ ಪತ್ತೆಗೆ ಎಸ್ಐಟಿ ಬಲೆ ಬೀಸಿದೆ. ಈ ಮಾಸ್ಟರ್ ಕಾಪಿಯಲ್ಲಿ ಹುಡುಗಿ ಹೇಳಿದ ಒಂದು ಮಾತು ಸದ್ಯ ಸಿಡಿ ಗ್ಯಾಂಗ್ ನ ಪ್ರಮುಖ ಆರೋಪಿ ಪತ್ತೆಗೆ ಸಾಧ್ಯವಾಗಿದೆ.

ಮಾಸ್ಟರ್ ಕಾಪಿಯಿಂದ ಸಾಕಷ್ಟು ಸಾಕ್ಷಿಗಳು ಸಿಕ್ಕಿವೆ. ಸಿಡಿ ಮಾಡಿದ ಮಾಸ್ಟರ್ ಮೈಂಡ್ ಮಾಜಿ ಪತ್ರಕರ್ತ ಶ್ರವಣ್ ಮನೆ ಮೇಲೆ ದಾಳಿ ವೇಳೆ ಈ ಮಾಸ್ಟರ್ ಕಾಪಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಆದರೆ ಎಸ್ ಐಟಿ ಮಾತ್ರ ಇದನ್ನು ಬಹಿರಂಗಗೊಳಿಸಿಲ್ಲ.

ಸಿಡಿ ಲೇಡಿಯನ್ನು ಬಳಸಿಕೊಂಡು ಸಿಡಿ ಗ್ಯಾಂಗ್ ಕ್ಯಾಮಾರವನ್ನು ಫಿಕ್ಸ್ ಮಾಡಿತ್ತು. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಹಸ್ಯ ಕ್ಯಾಮರಾಗಳನ್ನು ಖರೀದಿ ಕೂಡ ಮಾಡಿತ್ತು. ಕ್ಯಾಮರಾವನ್ನು ರೂಂನಲ್ಲಿ ಇಡುವಲ್ಲಿ ಸಿಡಿ ಲೇಡಿನೇ ಮಹತ್ವದ ಕಾರ್ಯ ನಿರ್ವಹಿಸಿದ್ದಾಳೆ. ತನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಸಿಡಿ ಗ್ಯಾಂಗ್ ನೀಡಿದ ಕ್ಯಾಮರಾವನ್ನು ಇಟ್ಟುಕೊಂಡಿದ್ದಾಳೆ.

ಸಿಡಿ ಲೇಡಿಗೆ ಮೊದಲೇ ರಹಸ್ಯ ಕ್ಯಾಮರಾ ಆನ್ ಮಾಡಿಕೊಡುತ್ತಿದ್ದ ಸಿಡಿ ಗ್ಯಾಂಗ್ ಸಿಡಿ ಲೇಡಿ ವಾಪಸ್ಸು ಬರೋವರೆಗೂ ಕಾದು ಕುಳಿತಿರುತ್ತಿತ್ತು. ಕ್ಯಾಮರಾ ಆನ್ ಮಾಡಿಕೊಟ್ಟಿದ್ದ ಸಿಡಿ ಗ್ಯಾಂಗ್ ನೊಂದಿಗೆ ಸಿಡಿ ಲೇಡಿ ಸಂಭಾಷಣೆ ಎಡಿಟ್ ಆಗದ ಮಾಸ್ಟರ್ ಕಾಪಿ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ಮಲ್ಲೇಶ್ವರಂನ ಅಪಾರ್ಟ್ ಮೆಂಟ್ ನಲ್ಲಿ ಆನ್ ಆಗಿದ್ದ ರಹಸ್ಯ ಕ್ಯಾಮರಾದಲ್ಲಿ ಸಿಡಿ ಲೇಡಿ ‘ಕೆಲಸ ಆಯ್ತು’ ಎಂದು ಫೋನ್ ಕರೆಯಲ್ಲಿ ಮಾತನಾಡಿರುವ ಆಡಿಯೋ ರೆಕಾರ್ಡ್ ಆಗಿದೆ. ಈ ಸಂಭಾಷಣೆ ಶ್ರವಣ್ ಜೊತೆಗಾಗಿರಬಹುದು ಎಂದು ಹೇಳಲಾಗುತ್ತಿದೆ.

ಇದೆಲ್ಲವೂ ತನಿಖೆಯಾಗುತ್ತಿದ್ದು ಎಸ್ಐಟಿ ವಿಚಾರಣೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights