‘ಬಾ.. ಬಾ… ಬಾ… ನಾ… ರೆಡಿ…’ – ಸಿಡಿ ಯುವತಿ ಯಾವ ಕೇಸ್ ದಾಖಲಿಸುತ್ತಾಳೋ ದಾಖಲಿಸಲಿ ನಾ ರೆಡಿ- ರಮೇಶ್!

ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಲೇಡಿ ಇಂದು ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದರು ಇಂದು ‘ರಮೇಶ್ ವಿರುದ್ಧ ದೂರು ದಾಖಲಿಸುವುದಾಗಿ’ ಹೇಳಿಕೊಂಡಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ ‘ಯಾವ ಕೇಸ್ ಹಾಕಿದ್ರು ನಾ.. ರೆಡಿ’ ಇದ್ದೇನೆ ಎಂದು ಹೇಳಿದ್ದಾರೆ.

ಹೌದು… ಸಿಡಿ ಲೇಡಿ 3ನೇ ವಿಡಿಯೋ ರಿಲೀಸ್ ಮಾಡುತ್ತಿದ್ದಂತೆ ರಮೇಶ್ ಜಾರಕಿಹೊಳಿ ಅಲರ್ಟ್ ಆಗಿದ್ದಾರೆ. ಮನೆಯಿಂದ ವಕೀಲರನ್ನು ಭೇಟಿ ಮಾಡಲು ಹೊರಟಿದ್ದಾರೆ. ಈ ವೇಳೆ ಬೆಂಗಳೂರಿನಲ್ಲಿ ಮಾದ್ಯಮದ ಮುಂದೆ ಮಾತನಾಡಿದ ರಮೇಶ್, ‘ಯುವತಿ ಯಾವ ಕೇಸ್ ದಾಖಲಿಸಿತ್ತಾಳೋ ದಾಖಲಿಸಲಿ. ನಿಜವಾದರೂ ಆಕೆ ಸಂತ್ರಸ್ತೆ ಆಗಿದ್ದರೆ ಅವತ್ತೇ ಕೇಸ್ ದಾಖಲಿಸಬೇಕಿತ್ತು. ಮಹಾ ಷಡ್ಯಂತ್ರ ಇದೆ. ಇದರ ಹಿಂದೆ ಮಹಾನಾಯಕ ಇದ್ದಾರೆ. ಹೀಗಾಘಿ ಯುವತಿ ರೇಪ್ ಕೇಸ್ ಹಾಕಿದ್ರು ನಾನು ರೆಡಿ ಇದ್ದೇನೆ’ ಎಂದು ಹೇಳಿದ್ದಾರೆ.

‘ಕಾನೂನಿನ ಹೋರಾಟದಲ್ಲಿ ಗೆದ್ದು ಬರುತ್ತೇನೆ. ನಾನು ಎದುರಿಸಲು ತಯಾರಿದ್ದೇನೆ’ ಎಂದು ರಮೇಶ್ ಹೇಳಿದ್ದಾರೆ.

ಇತ್ತ ಯುವತಿ ಕೊಟ್ಟ ದೂರಿನ ಪ್ರತಿಯನ್ನು ವಕೀಲರಾದ ಜಗದೀಶ್ ಗೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮಧ್ಯಾಹ್ನ 2ಗಂಟೆಗೆ ತಲುಪಿಸಲಿದ್ದಾರೆ.

ಹೀಗಾಗಿ ಯುವತಿ ನೀಡಿದ ದೂರಿನಲ್ಲಿ ಒಂದು ವೇಳೆ ಗಂಭೀರ ಆರೋಪ ಮಾಡಲಾಗಿದ್ದರೆ ರಮೇಶ್ ಜಾರಕಿಹೊಳಿ ಕಾನೂನು ಹೋರಾಟದಲ್ಲಿ ಗೆಲ್ಲುವುದು ಕಷ್ಟಸಾಧ್ಯ.

” ಜೀವಭಯ ಇದ್ದರೆ ಆಕೆಗೆ ಸುರಕ್ಷತೆ ನೀಡಲು ಸೂಚನೆ ಕೊಟ್ಟಿದ್ದೇವೆ. ಯುವತಿ ದೂರು ಕೊಟ್ಟರೆ ತನಿಖೆಯಾಗುತ್ತದೆ. ಎಸ್ಐಟಿ ದೂರು ದಾಖಲಿಸಿಕೊಂಡು ಎಸ್ಐಟಿ ಸತ್ಯಾಸತ್ಯತೆ ತನಿಖೆ ಮಾಡುತ್ತದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights