‘ಇಂದು ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಡುತ್ತೇನೆ’ ಸಿಡಿ ಲೇಡಿ ಮತ್ತೊಂದು ವಿಡಿಯೋ ರಿಲೀಸ್!
‘ಇಂದು ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಡುತ್ತೇನೆ’ ಎಂದು ಸಿಡಿ ಲೇಡಿ ಇಂದು ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾಳೆ.
ಹೌದು… ಇಂದು ವಿಡಿಯೋ ರಿಲೀಸ್ ಮಾಡಿದ ಸಿಡಿ ಲೇಡಿ, ” ರಾಜ್ಯದ ಎಲ್ಲಾ ತಂದೆ ತಾಯಿ, ಎಲ್ಲಾ ಪಕ್ಷದ ನಾಯಕರು, ಸಂಘಟನೆಗಳು ನನಗೆ ಬೆಂಬಲಿಸುತ್ತಿದ್ದಾರೆ. ಇಷ್ಟು ದಿನ ಜೀವ ಬೆದರಿಕೆ ಇತ್ತು, ಭಯದಿಂದ ಬದುಕುತ್ತಿದ್ದೆ. ಆದರೆ ಇಂದು ನನಗೆ ಎಲ್ಲಾರ ಸಹಕಾರದಿಂದ ಧೈರ್ಯ ಬಂದಿದೆ. ನಾನು ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಡುತ್ತೇನೆ. ವಕೀಲ ಜಗಧೀಶ್ ಮುಖೇನ ದೂರು ನೀಡುತ್ತೇನೆ ” ಎಂದು ಸಿಡಿ ಲೇಡಿ ಹೇಳಿದ್ದಾರೆ.
ನೈತಿಕ ಬೆಂಬಲದಿಂದ ನಾನು ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಡಲು ನಿರ್ಧರಿಸಿದ್ದೇನೆ ಎಂದು ಸಿಡಿ ಲೇಡಿ ಹೇಳಿದ್ದಾಳೆ. ಆದರೆ ದೂರು ನೀಡಲು ನಾನು ಬರುವುದಿಲ್ಲ. ನನ್ನ ಬದಲಿಗೆ ವಕೀಲ ಜಗಧೀಶ್ ಮುಖೇನ ದೂರು ದಾಖಲಿಸುವುದಾಗಿ ಹೇಳಿಕೊಂಡಿದ್ದಾಳೆ.
ಒಂದು ವೇಳೆ ಸಿಡಿ ಲೇಡಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದರೆ ಸಾಹುಕಾರನಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ.