ಬಂಗಾಳ ಚುನಾವಣೆ: ಮೊದಲ ಹಂತದ ಚುನಾವಣೆಗೆ BJP ಹೆವಿವೇಯ್ಟ್‌ ತಯಾರಿ!

ಪಶ್ಚಿಮ ಬಂಗಾಳ ಚುನಾವಣೆಯ ಮೊದಲ ಹಂತದ ಚುನಾವಣೆಯು ನಾಳೆ (ಮಾರ್ಚ್‌ 27)ರಂದು ನಡೆಯಲಿದೆ. ಹೀಗಾಗಿ ಮೊದಲ ಹಂತದ ಚುನಾವಣೆ ನಡೆಯಲಿರುವ ಜಂಗ್ಲೆಮಹಲ್ ಮತ್ತು ಪೂರ್ವ ಮಿಡ್ನಾಪೋರ್ನ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೊನೆಗೊಂಡಿದ್ದು, ಆಡಳಿತಾರೂಢ ಟಿಎಂಸಿ ಶಾಸಕರಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಗಮನ ಹರಿಸಲು ಬಿಜೆಪಿ ತನ್ನ ಕಾರ್ಯಕರ್ತರನ್ನು ಸಜ್ಜುಗೊಳಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕ್ರಿಕೆಟಿಗ-ರಾಜಕಾರಣಿ ಗೌತಮ್ ಗಂಭೀರ್ ರ್ಯಾಲಿಗಳನ್ನು ನಡೆಸಿದ್ದಾರೆ. ನಟ ಮಿಥುನ್ ಚಕ್ರವರ್ತಿ ದಕ್ಷಿಣ ಬಂಗಾಳದಲ್ಲಿ ನಾಲ್ಕು ರೋಡ್ ಶೋಗಳನ್ನು ನಡೆಸಿದ್ದಾರೆ.

ನಂದಿಗ್ರಾಮದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ಮಾಜಿ ಕ್ಯಾಬಿನೆಟ್ ಸಚಿವ ಹಾಗೂ ಈಗಿನ ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆದಿತ್ಯನಾಥ್, “ಎಡರಂಗದ ಆಡಳಿತದ ಅವಧಿಯಲ್ಲಿ, 14 ವರ್ಷಗಳ ಹಿಂದೆ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ 14 ಜನರು ನಂದಿಗ್ರಾಮದಲ್ಲಿ ಕೊಲ್ಲಲ್ಪಟ್ಟರು. ಆದರೆ, ಬಂಗಾಳದಲ್ಲಿ ಅಧಿಕಾರ ವಶಪಡಿಸಿಕೊಂಡ ನಂತರ ಟಿಎಂಸಿ ಮುಖ್ಯಸ್ಥರು ಹುತಾತ್ಮರಿಗಾಗಿ ಏನನ್ನೂ ಮಾಡಲಿಲ್ಲ. ಬಿಜೆಪಿ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ ಎರಡು ವಿಷಯಗಳಿಗೆ ಆದ್ಯತೆ ನೀಡಲಿದೆ. ಒಂದು ‘ಸೋನಾರ್ ಬಾಂಗ್ಲಾ’ ಅನ್ನು ನಿರ್ಮಿಸುವುದು ಮತ್ತು ಇನ್ನೊಂದು, ಎಲ್ಲಾ ಟಿಎಂಸಿ ಗೂಂಡಾಗಳನ್ನು ಜೈಲಿಗೆ ಅಟ್ಟುವುದು’’ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಬಂಗಾಳ ಚುನಾವಣೆ: ಮಮತಾ ಬ್ಯಾನರ್ಜಿ ಅವರ ಆಸ್ತಿ ಶೇ.45.08ರಷ್ಟು ಕುಸಿತ!

ಏಪ್ರಿಲ್ 1 ರಂದು ನಂದಿಗ್ರಾಮ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಅಮಿತ್‌ ಶಾ ಅವರು ದಕ್ಷಿಣ 24 ಪರಗಣಗಳ ನಾಮ್ಖಾನಾ ಮತ್ತು ಬಿಜೆಪಿಯ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಅವರ ತವರೂರಾದ ಜಾರ್‌ಗ್ರಾಮದಲ್ಲಿ ಗೋಪಿಬಲ್ಲವ್‌ಪುರದಲ್ಲಿ ಎರಡು ರ್ಯಾಲಿಗಳನ್ನು ನಡೆಸಿದ್ದಾರೆ. ಈ ವೇಳೆ ಅವರು, “ಸಿಎಂ ರಾಜ್ಯದಲ್ಲಿ ಮತ ಬ್ಯಾಂಕಿನ ರಾಜಕೀಯವನ್ನು ಅಭ್ಯಾಸ ಮಾಡುತ್ತಿದ್ದಾರೆ ಮತ್ತು ಇಲ್ಲಿ ವಾಸಿಸುವ ಬಡವರನ್ನು ವಂಚಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಅವರು ಬಂಗಾಳ ಮತದಾರರಿಂದ ಸೂಕ್ತ ಉತ್ತರವನ್ನು ಪಡೆಯುತ್ತಾರೆ’’ ಎಂದಿದ್ದಾರೆ.

ಗೌತಮ್‌ ಗಂಭೀರ್ ಅವರು ಬಂಕುರಾ ಜಿಲ್ಲೆಯ ಸೋನಮುಖಿಯಲ್ಲಿ ರೋಡ್ ಶೋ ನಡೆಸಿದರು. ಕುತ್ತಿಗೆಗೆ ಉದ್ದನೆಯ ಕೇಸರಿ ಸ್ಕಾರ್ಫ್‌ಅನ್ನು ಸುತ್ತಿಕೊಂಡಿದ್ದ ನಟ ಮಿಥುನ್‌ ಚಕ್ರವರ್ತಿ, ಬಂಕುರಾದ ಸಾಲ್ಟೋರಾ ಮತ್ತು ಪಾಸ್ಚಿಮ್ ಮೆದಿನಿಪುರ ಜಿಲ್ಲೆಯ ಕೇಶರಿಯಲ್ಲಿ ರೋಡ್ ಶೋ ನಡೆಸಿದರು. ಟಿಎಂಸಿ ತೊರೆದು ಕೇಸರಿ ಪಕ್ಷಕ್ಕೆ ಸೇರಿರುವ ಚಕ್ರವರ್ತಿ ಅವರು ‘ಜೈ ಶ್ರೀ ರಾಮ್’ ಘೋಷಣೆಯನ್ನು ಕೂಗುವುದರೊಂದಿಗೆ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದ್ದರು.

ಇದನ್ನೂ ಓದಿ: ಬಂಗಾಳದಲ್ಲಿ ನಟ ಮಿಥುನ್ ಚಕ್ರವರ್ತಿಗೆ ಅಪಮಾನ; ಟಿಕೆಟ್‌ ನಿರಾಕರಿಸಿದ BJP!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights