ದೇಶದಲ್ಲಿ ಕೊರೊನಾ ರುದ್ರನರ್ತನ : 59,000 ಹೊಸ ಕೇಸ್ : 257 ಸಾವು!

ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದಿನನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಒಂದೇ ದಿನದಲ್ಲಿ 59,000 ಹೊಸ ಕೋವಿಡ್ -19 ಪ್ರಕರಣಗಳು, 257 ಸಾವುಗಳು ದಾಖಲಾಗಿವೆ.

ಭಾರತದಲ್ಲಿ ಪ್ರತಿದಿನ ಕೊರೋನವೈರಸ್ ಪ್ರಕರಣಗಳು ಏರಿಕೆ ಆತಂಕವನ್ನು ಹೆಚ್ಚಿಸಿದೆ. ಕಳೆದ ಕೆಲವು ವಾರಗಳಲ್ಲಿ ಹಲವಾರು ರಾಜ್ಯಗಳು ಕೋವಿಡ್ -19 ಪ್ರಕರಣಗಳಲ್ಲಿ ಪ್ರಮುಖ ಏರಿಕೆ ದಾಖಲಿಸುತ್ತಿವೆ.

ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಮಹಾರಾಷ್ಟ್ರ ಮತ್ತು ಮುಂಬೈ ಅತಿ ಹೆಚ್ಚು ಕೊರೋನವೈರಸ್ ಪ್ರಕರಣಗಳನ್ನು ದಾಖಲಿಸುತ್ತಿವೆ. ಜೊತೆಗೆ ಪಂಜಾಬ್, ಮಹಾರಾಷ್ಟ್ರ, ಗುಜರಾತ್ ನಲ್ಲಿ ಲಾಕ್ ಡೌನ್ ನಿರ್ಬಂಧ ಮತ್ತು ರಾತ್ರಿ ಕರ್ಫ್ಯೂಗಳನ್ನು ಜಾರಿಗೊಳಿಸಲಾಗಿದೆ.

ಭಾರತದಲ್ಲಿ ಈವರೆಗೆ 5.45 ಕೋಟಿ ಜನರಿಗೆ ಲಸಿಕೆ ನೀಡಿದೆ. ಫಿಜರ್ ಇಂಕ್ ಮತ್ತು ಬಯೋಟೆಕ್ ತಮ್ಮ ಕೋವಿಡ್ -19 ಲಸಿಕೆಯನ್ನು 12 ವರ್ಷದೊಳಗಿನ ಮಕ್ಕಳ ಮೇಲೆ ಪರೀಕ್ಷಿಸಲು ಪ್ರಾರಂಭಿಸಿವೆ ಎಂದು ವರದಿಗಳು ತಿಳಿಸಿವೆ. ಪ್ರಯೋಗಗಳೊಂದಿಗೆ, 2022 ರ ವೇಳೆಗೆ ಮಕ್ಕಳಲ್ಲಿ ವ್ಯಾಕ್ಸಿನೇಷನ್ ಅನ್ನು ವಿಸ್ತರಿಸಲು ಫಿಜರ್ ಆಶಿಸುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights