16ರ ಅಪ್ರಾಪ್ತೆ ಮೇಲೆ ಅತ್ಯಾಚಾರ; 7 ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದ ಉದ್ಯಮಿ ಅರೆಸ್ಟ್‌!

16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ, ಎರಡು ವರ್ಷಗಳಿಂದ ಬ್ಲ್ಯಾಕ್‌ಮೇಲ್ ಮಾಡಿ ಪದೇ ಪದೇ ಕಾಮವಾಂಚೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ ಆರೋಪಿ ಉದ್ಯಮಿಯನ್ನು ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ತಾನು ಸಮೀರ್ ಎಂದು ಪರಿಯಣ ಮಾಡಿಕೊಂಡಿದ್ದ ಆತ, ಎರಡು ವರ್ಷಗಳಿಂದ ಬಾಕ್‌ಮೇಲ್‌ ಮಾಡಿ ಅತ್ಯಾಚಾರ ಎಸಗುತ್ತಿದ್ದ ಎಂದು ಸಂತ್ರಸ್ಥ ಬಾಲಕಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಯಾರಿಗಾದರೂ ವಿಷಯ ಹೇಳದಂತೆ ಪ್ರಾಣ ಬೆದರಿಕೆಯನ್ನೂ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ದೂರು ದಾಖಲಿಸಿಕೊಂಡ ನಂತರ, ಸಾತ್ನಾ ಜಿಲ್ಲೆಯಲ್ಲಿರುವ ಆರೋಪಿಯ ಮನೆ ಮತ್ತು ಸೈಬರ್‌ ಮೇಲೆ ದಾಳಿ ನಡೆಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಆರೋಪಿಯು ಬೇರೊಂದು ಧರ್ಮದ ಮಹಿಳೆಯನ್ನು ಮತಾಂತರಗೊಳಿಸಿ ಮದುವೆಯಾಗಿದ್ದ, ನಂತರ 2017ರಲ್ಲಿ ಆಕೆಗೆ ವಿಚ್ಛೇದನ ನೀಡಿದ್ದ ಎಂದು ತಿಳಿದು ಬಂದಿದೆ.

ವಿಚ್ಚೇದನದ ನಂತರ, ಏಳಕ್ಕೂ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಿದ್ದ. ಅಲ್ಲದೆ, ಅವರನ್ನು ಬ್ಲಾಕ್‌ಮೇಲ್‌ ಮಾಡಿ ಹಣ ವಸೂಲಿಯನ್ನೂ ಮಾಡುತ್ತಿದ್ದ ಎಂದು ಮಹಿಳೆಯರು ಹೇಳಿರುವುದಾಗಿ ಪೊಲಿಸರು ತಿಳಿಸಿದ್ದಾರೆ.

ಆತ ಮಹ್ಮಮದ್ ಅತೀಕ್ ಮತ್ತು ಸಮಿರ್ ಎಂಬ ಎರಡು ಹೆಸರುಗಳಲ್ಲಿ ಪಾಕ್‌ಪೋರ್ಟ್‌ ಹೊಂದಿದ್ದು,  ಸ್ಥಳೀಯ ಸಂಸದರು ಮತ್ತು ಶಾಸಕರ ಹೆಸರಿನ ನಕಲಿ ಲೆಟರ್‌ಹೆಡ್‌ಗಳನ್ನು ಕೂಡ ಹೊಂದಿದ್ದಾನೆ. ವಿಐಪಿ ಕೋಟಾ ಅಡಿಯಲ್ಲಿ ರೈಲುಗಳಲ್ಲಿ ಮೀಸಲಾತಿ ಪಡೆಯಲು ಈ ಲೆಟರ್‌ ಹೆಡ್‌ಗಳನ್ನು ಬಳಸುತ್ತಿದ್ದ ಎಂದು ಎಸ್‌ಪಿ ರಿಯಾಜ್‌ ಇಕ್ಬಾಲ್ ತಿಳಿಸಿದ್ದಾರೆ.


ಇದನ್ನೂ ಓದಿ: ವಿಷ್ಣು ಸ್ಮಾರಕ ನಿರ್ಮಾಣ ಆರಂಭ: ವಿಷ್ಣು ವಿಚಾರದಲ್ಲಿ ಸರ್ಕಾರಗಳ ಧೋರಣೆಗಳೇನು ಗೊತ್ತೇ?

Spread the love

Leave a Reply

Your email address will not be published. Required fields are marked *