ಹರ್ಭಜನ್ ಸಿಂಗ್ ದಂಪತಿಗೆ ಗಂಡು ಮಗು ಜನನ : ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ!

ಭಾರತೀಯ ಆಫ್-ಸ್ಪಿನ್ನರ್ ಹರ್ಭಜನ್ ದಂಪತಿ ಇಂದು ಗಂಡು ಮಗುವನ್ನು ಸ್ವಾಗತಿಸಿದ ಸಂಭ್ರಮದಲ್ಲಿದ್ದಾರೆ. ಹರ್ಭಜನ್ ಸಿಂಗ್ ಪತ್ನಿ ಗೀತಾ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.

ಈ ಸಂತೋಷದ ಕ್ಷಣವನ್ನು ಹರ್ಭಜನ್ ಸಿಂಗ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ನಮಗೆ ಹಿಡಿಯಲು ಹೊಸ ಪುಟ್ಟ ಕೈ ಬಂದಿದೆ. ಅವನ ಪ್ರೀತಿ ಭವ್ಯವಾದದ್ದು, ಚಿನ್ನದಂತೆ ಅಮೂಲ್ಯವಾದುದು. ಆದ್ದರಿಂದ ಇದು ವಿಶೇಷ ಮತ್ತು ಸಿಹಿಯಾದ ಅದ್ಭುತ ಉಡುಗೊರೆಯಾಗಿದೆ. ನಮ್ಮ ಹೃದಯಗಳು ತುಂಬಿವೆ. ನಮ್ಮ ಜೀವನವು ಪೂರ್ಣಗೊಂಡಿದೆ. ಆರೋಗ್ಯವಂತ ಗಂಡು ಮಗುವನ್ನು ಆಶೀರ್ವದಿಸಿದ್ದಕ್ಕಾಗಿ ಸರ್ವಶಕ್ತನಿಗೆ ಧನ್ಯವಾದಗಳು. ಗೀತಾ ಮತ್ತು ಮಗು ಇಬ್ಬರೂ ಉತ್ತಮವಾಗಿದ್ದಾರೆ. ನಾವು ಸಂತೋಷದಿಂದ ಮುಳುಗಿದ್ದೇವೆ. ನಮ್ಮ ಹಿತೈಷಿಗಳ ನಿರಂತರ ಪ್ರೀತಿ ಮತ್ತು ಬೆಂಬಲಕ್ಕಾಗಿ ನಮ್ಮ ಕೃತಜ್ಞತೆಯನ್ನು ಅರ್ಪಿಸುತ್ತೇವೆ” ಎಂದು ಬರೆದಿದ್ದಾರೆ.

https://twitter.com/harbhajan_singh/status/1413758913065881600?ref_src=twsrc%5Etfw%7Ctwcamp%5Etweetembed%7Ctwterm%5E1413758913065881600%7Ctwgr%5E%7Ctwcon%5Es1_&ref_url=https%3A%2F%2Fnews.abplive.com%2Fsports%2Fharbhajan-singh-wife-geeta-basra-have-become-parents-again-blessed-baby-boy-1468603

ಒಳ್ಳೆಯ ಸುದ್ದಿ ಕೇಳಿ ಅಭಿಮಾನಿಗಳು ‘ಜೂನಿಯರ್ ಟರ್ಬೊನೇಟರ್’ಗೆ ಆತ್ಮೀಯ ಸ್ವಾಗತ ನೀಡುತ್ತಿದ್ದು, ದಂಪತಿಗಳನ್ನು ಅಭಿನಂದಿಸಲು ಶುಭಾಶಯಗಳನ್ನು ತಿಳಿಸಿದ್ದಾರೆ.

ಭಜ್ಜಿಗೆ ಹಿನಾಯಾ ಹೀರ್ ಪ್ಲಾಹಾ ಎಂಬ ಮಗಳಿದ್ದು 27 ಜುಲೈ 2016 ರಂದು ಜನಿಸಿದಳು. ಪತ್ನಿ ಗೀತಾ ಅನೇಕ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದು ಈಗ ಅವರ ಕುಟುಂಬ ಮತ್ತು ಮಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights