ಸರ್ಕಾರದಲ್ಲಿ ಮೂಲಸೌಲಭ್ಯಕ್ಕೂ ಹಣವಿಲ್ಲ; ರಾಜ್ಯಕ್ಕೆ ಸಾಲದ ಹೊರೆ ಹೇರಲು ಬಿಎಸ್‌ವೈ ನಿರ್ಧಾರ!

ಭಾರೀ ಸದ್ದು ಗದ್ದಲದೊಂದಿಗೆ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರಕಾರ ಒಂದೇ ವರ್ಷದಲ್ಲಿ ಹಣಕಾಸಿನ ಮುಗ್ಗಟ್ಟಿನ ಕಾರಣಕ್ಕೆ ಹಲವಾರು ಶಾಸಕರ ಕೋಪಕ್ಕೆ ಗುರಿಯಾಗಿದೆ. ಈ ಮಧ್ಯೆ, ಕೇಂದ್ರ ಸರ್ಕಾರವು ರಾಜ್ಯದ ಜಿಎಸ್‌ಟಿ ಪಾಲನ್ನೂ ನೀಡುವುದಿಲ್ಲ ಎಂದಿದ್ದು ರಾಜ್ಯದ ಬಿಜೆಪಿ ಸರ್ಕಾರ ಕಂಗಾಲಾಗಿದೆ.

ಕೋವಿಡ್ ಮತ್ತು ಜಿಎಸ್‌ಟಿ ಕೊರತೆ ಕಾರಣ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು ತೀರಾ ಅಗತ್ಯ ವೆಚ್ಚಗಳಿಗೆ ಹೊರತಾಗಿ ಯಾವುದೇ ರೀತಿಯ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಸರ್ಕಾರ ನಿರ್ಧರಿಸಿದೆ. ಇದೇ ಕಾರಣಕ್ಕಾಗಿ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್‍ಯಗಳನ್ನು ಕೈಗೊಳ್ಳಲು ಅಡಚಣೆ ಉಂಟಾಗಿದ್ದು ಯಾವುದೇ ಕೆಲಸ ಆಗುತ್ತಿಲ್ಲ ಎಂಬ ಕೊರಗು ಅವರನ್ನು ದಟ್ಟವಾಗಿ ಕಾಡುತ್ತಿದೆ.

ರಾಜ್ಯ ಸರಕಾರ ತೀವ್ರ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಮಂಜೂರಾಗಿರುವ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಸರಕಾರದಲ್ಲಿ ದುಡ್ಡಿಲ್ಲ. ರಾಜ್ಯದ ಆರ್ಥಿಕತೆಯನ್ನು ಬಿಜೆಪಿ ಹಳ್ಳಹಿಡಿಸಿದೆ ಎಂದು ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ದೂರುತ್ತಿದ್ದಾರೆ.

ದೊಡ್ಡ ದೊಡ್ಡ ಯೋಜನೆಗಳನ್ನು ಬಿಡಿ ಬೀದಿ ದೀಪ, ಆರ್‌ಓ ನೀರಿನ ಪ್ಲಾಂಟ್‌ಗಳನ್ನು ಹಾಕುವಂತಹ ಮೂಲಭೂತ ಸೌಲಭ್ಯಗಳ ಸಾಮಾನ್ಯ ಕಾರ್‍ಯಗಳಿಗೆ ಅನುದಾನ ಶೂನ್ಯ ಎಂಬ ಪರಿಸ್ಥಿತಿ ಈಗ ಇದೆ ಎಂಬ ದೂರು ಬಿಜೆಪಿ ಶಾಸಕರಿಂದಲೂ ಕೇಳಿಬಂದಿದೆ.

Waiting game for BSY continues; speaker, rebels and BJP central leadership  hold key | India News - Times of India

ಕೊರೋನಾಗೂ ಮುನ್ನ ಅನುದಾನ ಬಾಕಿ ಎಂಬಂತೆ 50 ಲಕ್ಷ ರೂ ಬಿಡುಗಡೆ ಮಾಡಲಾಗಿತ್ತಾದರೂ ಮಂಜೂರು ಮಾಡಲಾದ ಹಣಕ್ಕೂ ಕತ್ತರಿ ಹಾಕಲಾಗಿದೆ ಎಂದು ಹೇಳಲಾಗಿದೆ. ಈ ಮಧ್ಯೆ ಹಿಂದಿನ ಸರಕಾರದಲ್ಲಿ ಮಂಜೂರಾಗಿದ್ದ ಅನುದಾನವನ್ನೂ ತಡೆ ಹಿಡಿದಿರುವುದು ಹಲವರರಲ್ಲಿ ಅಸಮಾಧಾನ ಸ್ಫೋಟಕ್ಕೆ ಕಾರಣವಾಗಿದೆ.

ಈ ಮಧ್ಯೆ, ಐದು ವ‍ರ್ಷಗಳ ಕಾಲ ಜಿಎಸ್‌ಟಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಜಿಎಸ್‌ಟಿ ಪಾಲೂ ನೀಡುವುದಿಲ್ಲ ಎಂದು ಕೈಕೊಟ್ಟಿದ್ದು, ರಿಸರ್ವ್‌ ಬ್ಯಾಂಕ್‌ನಿಂದ ಸಾಲಪಡೆದುಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡಿದೆ. ಕೇಂದ್ರ ಸರ್ಕಾರದ ಆದೇಶವನ್ನು ಶಿರಸಾ ಪಾಲಿಸುತ್ತಿರುವ ಸಿಎಂ ಬಿಎಸ್‌ವೈ ಆರ್‌ಬಿಐ ನಿಂದ ಸಾಲ ಪಡೆಯಲು ಸಿದ್ದರಾಗಿದ್ದಾರೆ.

ಇದೀಗ ರಾಜ್ಯ ಸರಕಾರವು 18 ಸಾವಿರ ಕೋಟಿ ರೂ ಸಾಲಗಾರನಾಗಲು ಒಪ್ಪಿದ್ದು, ಈ ಹಣವನ್ನು ಮುಂದಿನ ದಿನಗಳಲ್ಲಿ ಬರುವ ಜಿಎಸ್ಟಿ ಸಂಗ್ರದಲ್ಲಿಯೇ ತೀರುವಳಿಯಾಗಿ ವಾಪಸ್‌ ಪಡೆಯಲಿದೆ.


ಇದನ್ನೂ ಓದಿ: Fact Check: ಪಾಕ್ ಬಾಲ್ಯ ವಿವಾಹವೆಂದು ಕೋಮು ದ್ವೇಷ ಕಚ್ಚಿದ ಕಿಡಿಗೇಡಿಗಳು..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights