ತಮಿಳು ಮಾಜಿ ಸಿಎಂ ಜಯಲಲಿತಾ ಆಪ್ತೆ, ಭ್ರಷ್ಟಾಚಾರ ಅಪರಾಧಿ ಶಶಿಕಲಾ ಬಿಡುಗಡೆ ಸಾಧ್ಯತೆ!

ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪದ ಮೇಲೆ ಜೈಲುಪಾಲಾಗಿರುವ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಪರಮಾಪ್ತೆ ಶಶಿಕಲಾ ಅವರು ಈ ತಿಂಗಳ ಅಂತ್ಯದಲ್ಲಿ ಬಂಧ ಮುಕ್ತರಾಗುವ ಸಾಧ್ಯತೆ ಇದೆ.

ಕಳೆದ ಮೂರು ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನ ಅತಿಥಿಯಾಗಿರುವ ಶಶಿಕಲಾ ಅವರ ಬಂಧನ ಅವಧಿ ಮುಂದಿನ ವರ್ಷದ ಆರಂಭದಲ್ಲಿ ಮುಗಿಯಲಿದೆ. ಆದರೆ ಸನ್ನಡತೆಯ ಆಧಾರದ ಮೇಲೆ ಶಶಿಕಲಾ ಅವರ ಬಿಡುಗಡೆ ನಿಚ್ಚಳವಾಗಿದೆ. ಹಾಗಾಗಿ ಅವರು ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಬಹುದು ಎಂದು ಆಕೆಯ ವಕೀಲರು ಹೇಳಿದ್ದಾರೆ.

ಭ್ರಷ್ಟಾಚಾರ ಕೇಸಿನಲ್ಲಿ ಅಪರಾಧಿಯಾಗಿ ಜೈಲು ಸೇರಿರುವ ಶಶಿಕಲಾಗೆ ವರ್ಷಕ್ಕೆ 38 ದಿನಗಳ ಶಿಕ್ಷೆ ಕಡಿತದ ಅವಕಾಶವಿದೆ. ಮೂರು ವರ್ಷದಿಂದ ಜೈಲಿನಲ್ಲಿರುವ ಶಶಿಕಲಾ ಈಗ 120 ದಿನ ಮುಂಚಿತವಾಗಿ ಬಿಡುಗಡೆಗೆ ಅರ್ಹವಾಗಿದ್ದಾರೆ ಎಂದು ಹೇಳಲಾಗಿದೆ.

ಶಶಿಕಲಾ ಅವರು ಪರಪ್ಪನ ಅಗ್ರಹಾರದ ಜೈಲಿನಿಂದ ಮುಕ್ತರಾಗಿ ಹೊರಬರಲು ಜೈಲು ಅಧಿಕಾರಿಗಳ ವರದಿ ಪ್ರಮುಖ ಪಾತ್ರ ವಹಿಸಲಿದೆ.

ಈ ಮಧ್ಯೆ ಮುಂದಿನ ವರ್ಷದಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಬೇಕಿದ್ದು ಆ ವೇಳೆಗೆ ಶಶಿಕಲಾ ಪ್ರಮುಖ ಪಾತ್ರಧಾರಿಯಾಗಿ ಅಲ್ಲಿ ಅವತರಿಸುವ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ.


ಇದನ್ನೂ ಓದಿ: ಮೋದಿ ಅವರಿಗೆ ಸಹಾಯ ಮಾಡಲು ಅಮೆರಿಕ ಯಾವಾಗಲೂ ಸಿದ್ಧ : ಡೊನಾಲ್ಡ್ ಟ್ರಂಪ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights