ಸರ್ಪಗಳಿಗೆ ರಾಖಿ ಕಟ್ಟುವಾಗ ಹಾವು ಕಚ್ಚಿ ಯುವಕ ಸಾವು : ವಿಡಿಯೋ ವೈರಲ್!

ಸರ್ಪಗಳಿಗೆ ರಾಖಿ ಕಟ್ಟುವಾಗ ಹಾವು ಕಚ್ಚಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಬಿಹಾರದಲ್ಲಿ ನಡೆದಿದೆ. ರಾಖಿ ಕಟ್ಟುವಾಗ ಹಾವಿನ ಕಡಿತದ ವಿಡಿಯೋ ವೈರಲ್ ಆಗಿದೆ.

ಇಬ್ಬರು ಸಹೋದರಿಯಿಂದ ಒಂದು ಜೋಡಿ ಸರ್ಪಗಳಿಗೆ ರಾಖಿ ಕಟ್ಟಿಸುತ್ತಿದ್ದ ಯುವಕನಿಗೆ ಹಾವು ಕಚ್ಚಿ ಚಿಕಿತ್ಸೆಯ ಸಮಯದಲ್ಲಿ ಆತ ಸಾವನ್ನಪ್ಪಿದ್ದಾನೆ.

ಮನಮೋಹನ್ ಅಲಿಯಾಸ್ ಭುವರ್ (25) ಮೃತ ವ್ಯಕ್ತಿ. ಈತ ಕಳೆದ 10 ವರ್ಷಗಳಿಂದ ಹಾವುಗಳ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದನು. ಬಿಹಾರದ ಚಾಪ್ರಾ ಜಿಲ್ಲೆಯ ಮಾಂಜಿ ಸೀತಾಳಪುರ ಗ್ರಾಮದಲ್ಲಿ ರಕ್ಷಾಬಂಧನ ದಿನ (ಆಗಸ್ಟ್ 22) ಹಾವು ಹಿಡಿದುಕೊಂಡು ರಾಖಿ ಕಟ್ಟುತ್ತಿರುವಾಗ ಯುವಕನಿಗೆ ಹಾವು ಕಚ್ಚಿದೆ. ಅದರ ನಂತರ ಅವನಿಗೆ ಗಿಡಮೂಲಿಕೆ ಚಿಕಿತ್ಸೆ ನೀಡಲಾಯಿತು. ಆದರೆ ಆತನ ಸ್ಥಿತಿ ಗಂಭೀರವಾಗುತ್ತಿದ್ದಂತೆ ಗ್ರಾಮಸ್ಥರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು ಆತ ಬದುಕುಳಿಯಲಿಲ್ಲ.

Manmohan had a 10 year old friend with snakes

ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರು ಮನಮೋಹನ್ ಅವರನ್ನು ಹಾವುಗಳ ನಿಜವಾದ ಸ್ನೇಹಿತ ಎಂದು ಕರೆಯುತ್ತಿದ್ದರು.ಹಾವುಗಳ ರಕ್ಷಣೆ ಮತ್ತು ಚಿಕಿತ್ಸೆಗಾಗಿ ಮನಮೋಹನ್ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ಧರಾಗಿದ್ದರು. ಚಪ್ರಾ ಸೇರಿದಂತೆ ಸಿವಾನ್ ಮತ್ತು ಬಲ್ಲಿಯಾ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹಾವುಗಳನ್ನು ಹಿಡಿಯಲು ಮನಮೋಹನ್ ಅವರನ್ನು ಕರೆಸಲಾಗುತ್ತಿತ್ತು. ಅವನು ಹಾವನ್ನು ಬಹಳ ಎಚ್ಚರಿಕೆಯಿಂದ ಹಿಡಿದು ಕಾಡಿಗೆ ಬಿಡುತ್ತಿದ್ದನು.

ಯಾರಿಗಾದರೂ ಹಾವು ಕಚ್ಚಿದರೆ ಮನಮೋಹನ್ ಅವರನ್ನೇ ಚಿಕಿತ್ಸೆಗಾಗಿ ಕರೆಯುತ್ತಿದ್ದರು. ಮನಮೋಹನ್ ಗಿಡಮೂಲಿಕೆಗಳ ಚಿಕಿತ್ಸೆಯಿಂದಲೇ ಹಾವು ಕಚ್ಚಿದ ವ್ಯಕ್ತಿ ಗುಣಮುಖನಾಗುತ್ತಾನೆ ಎಂದು ಸ್ಥಳೀಯರು ಹೇಳಿಕೊಳ್ಳುತ್ತಾರೆ. ಮಾತ್ರವಲ್ಲದೇ ಮನಮೋಹನ್ ತನ್ನ ಮಂತ್ರಗಳ ಸಹಾಯದಿಂದ ಹಾವಿನ ವಿಷವನ್ನು ತೆಗೆಯುತ್ತಿದ್ದರು ಎಂದು ಹೇಳಲಾಗುತ್ತದೆ. ಹೀಗಾಗಿ ಸ್ಥಳೀಯ ಜನರು ಅವನನ್ನು ದೈವಿಕ ಆಶೀರ್ವಾದ ಎಂದು ಪರಿಗಣಿಸಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರನ್ನು ಹೆಚ್ಚು ಹೆಸರುವಾಸಿಯಾಗಿದ್ದನು. ಈಗಲೂ ಹಾವು ಕಡಿತದಿಂದ ಮನಮೋಹನ್ ಸಾವಿನ ಸುದ್ದಿಯನ್ನು ಜನರು ಸ್ವೀಕರಿಸುತ್ತಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights