FACT CHECK | ವಕ್ಫ್ ಬೋರ್ಡ್‌ಅನ್ನು ರದ್ದು ಮಾಡ್ತಾ ಆಂಧ್ರ ಪ್ರದೇಶದ ಸರ್ಕಾರ ?
ಆಂಧ್ರಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಕ್ಫ್ ಬೋರ್ಡ್ ಅನ್ನು ರದ್ದುಗೊಳಿಸಿದ್ದಾರೆ. ಆ ಮೂಲಕ ದೇಶದ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮಹತ್ತರವಾದ ನಿರ್ಧಾರವನ್ನು ಆಂಧ್ರದ ಬಿಜೆಪಿ ಬೆಂಬಲಿತ ಟಿಡಿಪಿ ಸರ್ಕಾರ ತೆಗೆದುಕೊಂಡಿದೆ. ಈ ಮೂಲಕ ದೇಶದಲ್ಲಿ ಒಂದೇ ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮಹತ್ತರ ಹೆಜ್ಜೆಯನ್ನು ಇಟ್ಟಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.
ಆಂಧ್ರಪ್ರದೇಶದಲ್ಲಿ ವಕ್ಫ್ ಮಂಡಳಿಯನ್ನು ವಜಾಗೊಳಿಸಿದ ಅಲ್ಲಿನ NDA ಸರ್ಕಾರದ ದಿಟ್ಟ ನಿರ್ಧಾರ ಅತ್ಯಂತ ಸ್ವಾಗತಾರ್ಹವಾಗಿದ್ದು, ಆಂಧ್ರಪ್ರದೇಶ ಮುಖ್ಯಮಂತ್ರಿ ಶ್ರೀ @ncbn ಹಾಗು ಉಪಮುಖ್ಯಮಂತ್ರಿ ಶ್ರೀ @PawanKalyan ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ವಕ್ಫ್ ಮಂಡಳಿಯ ಪರಿಕಲ್ಪನೆಯೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು,… pic.twitter.com/vlZyKvYbMH
— R. Ashoka (@RAshokaBJP) December 1, 2024
ಕರ್ನಾಟಕದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸೇರಿ ಹಲವು ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಆಂಧ್ರ ಸಿಎಂ ನಿರ್ಧಾರವನ್ನು ಕೊಂಡಾಡಿದ್ದಾರೆ. ಡಿಸೆಂಬರ್ 1ರಂದು ಸುದ್ದಿಯ ತುಣುಕೊಂದನ್ನು ಹಂಚಿಕೊಂಡಿರುವ ಆರ್ ಅಶೋಕ್, ಆಂಧ್ರ ಪ್ರದೇಶದಲ್ಲಿ ವಕ್ಫ್ ಮಂಡಳಿಯನ್ನು ವಜಾಗೊಳಿಸಿದ ಅಲ್ಲಿನ ಎನ್‌ಡಿಎ ಸರ್ಕಾರದ ದಿಟ್ಟ ನಿರ್ಧಾರ ಅತ್ಯಂತ ಸ್ವಾಗತಾರ್ಹವಾಗಿದ್ದು, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ,” ಎಂದು ಟ್ವೀಟ್ ಮಾಡಿದ್ದಾರೆ.
![]()
ಇದೇ ರೀತಿ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ಟೈಮ್ಸ್ ನೌನ ಬ್ರೇಕಿಂಗ್ ನ್ಯೂಸ್ ಹೆಡ್‌ಲೈನ್‌ನ್ನು ಅನ್ನು ಹಂಚಿಕೊಂಡು, “ಆಂಧ್ರ ಪ್ರದೇಶ ವಕ್ಫ್ ಬೋರ್ಡ್ ಅನ್ನು ರದ್ದುಗೊಳಿಸಿದೆ. ಜಾತ್ಯಾತೀಯ ಭಾರತದಲ್ಲಿ ಇದರ ಅಸ್ತತ್ವವನ್ನು ಬೆಂಬಲಿಸಲು ಸಾಂವಿಧಾನದಲ್ಲಿ ಅವಕಾಶ ಇಲ್ಲ,” ಎಂದು ಟ್ವೀಟ್ ಮೂಲಕ ಪ್ರತಿಪಾದಿಸಿದ್ದಾರೆ.
ಧರ್ಮ, ಸಮಾಜ ಹಾಗೂ ರಾಷ್ಟ್ರ ರಕ್ಷಣೆಯ ವಿಚಾರದಲ್ಲಿ ಆಂಧ್ರ ಪ್ರದೇಶದ ಶ್ರೀ @ncbn ಸರ್ಕಾರ ಯಾವಾಗಲೂ ಮಾದರಿ ನಡೆಯನ್ನಿರಿಸಿದೆ. ಅಸಂವಿಧಾನಿಕ ವಕ್ಫ್ ಬೋರ್ಡ್ ಅನ್ನೇ ವಜಾಗೊಳಿಸಿ ಆದೇಶ ಹೊರಡಿಸಿದೆ. ತನ್ನ ರಾಜ್ಯದ ಜನತೆಯ ಹಿತರಕ್ಷಣೆಗೆ ಮುಂದಾಗಿದೆ. ಇದು ಕರ್ನಾಟಕದ @INCKarnataka ಸರ್ಕಾರಕ್ಕೆ ಸಾಧ್ಯವೇ?#WaqfHataoDeshBachao pic.twitter.com/zWU7zDEW73
— Vinod K Gowda (@vinodkspeaks) December 1, 2024
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಂಚಿಕೊಂಡ ಪೋಸ್ಟ್‌ಅನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಕರ್ನಾಟಕದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸೇರಿದಂತೆ ಬಿಜೆಪಿ ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀವರ್ಡ್ಗಳನ್ನು ಗೂಗಲ್ ಸರ್ಚ್ ಮಾಡಿದಾಗ, ದಿ ನ್ಯೂಸ್ ಮಿನಿಟ್‌ನ ವರದಿಯೊಂದು ಲಭ್ಯವಾಗಿದೆ. ಇದರಲ್ಲಿ “ಆಂಧ್ರ ಸರ್ಕಾರವು ವೈಎಸ್‌ಆರ್‌ಸಿಪಿ ಸ್ಥಾಪಿಸಿದ ವಕ್ಫ್ ಬೋರ್ಡ್ ಅನ್ನು ಹೊಸದನ್ನು ರಚಿಸಲು ವಿಸರ್ಜಿಸಿದೆ.” ಎಂದು ಶೀರ್ಷಿಕೆಯನ್ನು ನೀಡಿದೆ.

ಆಂಧ್ರ ಪ್ರದೇಶ ಸರ್ಕಾರ ವಕ್ಫ್ ಮಂಡಳಿಯನ್ನು ರದ್ದುಗೊಳಿಸಿದೆ ಎಂಬ ವಾದ ದಾರಿ ತಪ್ಪಿಸುವಂಥದ್ದು ಎಂದು ಕಂಡುಕೊಳ್ಳಲಾಗಿದೆ. ಈಗಿರುವ ಮಂಡಳಿಯನ್ನು ವಿಸರ್ಜಿಸಲಾಗಿದೆಯೇ ಹೊರತು ಪೂರ್ತಿ ಮಂಡಳಿಯನ್ನು ರದ್ದುಗೊಳಿಸಿಲ್ಲ. ಹಲವು ಸುದ್ದಿ ವಾಹಿನಿಗಳು, ಪತ್ರಿಕೆಗಳೂ ಇದನ್ನೇ ವರದಿ ಮಾಡಿವೆ. ಅಮಿತ್ ಮಾಳವೀಯ ಹಂಚಿಕೊಂಡ ‘ಟೈಮ್ಸ್ ನೌ’ ವಿಡಿಯೋದಲ್ಲೂ ಇದನ್ನು ಸ್ಪಷ್ಟವಾಗಿ ಕಾಣಬಹುದು.
![]()
ಅಲ್ಲದೆ ‘ದಿ ಹಿಂದೂ‘ ಕೂಡ ಈ ಬಗ್ಗೆ ವರದಿ ಮಾಡಿದ್ದು, “ಉತ್ತಮ ಆಡಳಿತವನ್ನು ಉತ್ತೇಜಿಸಲು, ವಕ್ಫ್ ಆಸ್ತಿಗಳನ್ನು ರಕ್ಷಿಸಲು ಮತ್ತು ಮಂಡಳಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಆಂಧ್ರ ಪ್ರದೇಶ ಸರ್ಕಾರವು ಎಪಿ ರಾಜ್ಯ ವಕ್ಫ್ ಮಂಡಳಿಯನ್ನು ವಿಸರ್ಜಿಸಿದೆ,” ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಹೇಳಿದೆ.
The Andhra Pradesh Waqf Board has remained non-functional since March 2023, leading to a period of administrative stagnation. The withdrawal of G.O. Ms. No. 47 became imperative due to several substantive concerns. These include 13 writ petitions challenging its validity, the… https://t.co/0yXCvIdK4q
— FactCheck.AP.Gov.in (@FactCheckAPGov) December 1, 2024
ಇದಲ್ಲದೆ ಸ್ವತಃ ಆಂಧ್ರ ಪ್ರದೇಶ ಸರಕಾರದ ಫ್ಯಾಕ್ಟ್ ಚೆಕ್ ವಿಭಾಗ ಡಿಸೆಂಬರ್ 1ರ ಆದೇಶದ ಬಗ್ಗೆ ಎಕ್ಸ್‌ನಲ್ಲಿ ಸ್ಪಷ್ಟನೆಯನ್ನೂ ನೀಡಿದೆ. ಇದರಲ್ಲಿ ವಕ್ಫ್ ಬೋರ್ಡ್ ಮಾರ್ಚ್ 2023 ರಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಉಲ್ಲೇಖಿಸಲಾಗಿದ್ದು, ಆಡಳಿತಾತ್ಮಕ ನಿಶ್ಚಲತೆ ಮತ್ತು ಕಾನೂನು ಸವಾಲುಗಳನ್ನು ಪರಿಹರಿಸಲು ಅದರ ವಿಸರ್ಜನೆಯ ಅಗತ್ಯವಿದೆ. ಹುದ್ದೆಯಲ್ಲಿ ಶೀಘ್ರವೇ ಹೊಸ ಮಂಡಳಿ ರಚನೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ತಿಳಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ವಕ್ಫ್ ಮಂಡಳಿಯನ್ನೇ ಆಂಧ್ರ ಪ್ರದೇಶ ಸರ್ಕಾರ ರದ್ದುಗೊಳಿಸಿದೆ ಎಂಬ ವಾದ ತಪ್ಪು ದಾರಿಗೆಳೆಯುವಂತಿದೆ. ವಾಸ್ತವವಾಗಿ ಈಗಿನ ಮಂಡಳಿಯನ್ನಷ್ಟೇ ಸರ್ಕಾರ ವಿಸರ್ಜಿಸಿದ್ದು, ಹೊಸ ಮಂಡಳಿ ರಚಿಸುವುದಾಗಿ ಸರ್ಕಾರವೇ ಸ್ಪಷ್ಟನೆ ನೀಡಿದೆ. ಹಾಗಾಗಿ ಸಾಮಜಿಕ ಮಾಧ್ಯಮಗಳಲ್ಲಿ ಬಿಜೆಪಿ ನಾಯಕರು ಹೇಳಿರುವಂತೆ ವಕ್ಫ್ ಬೋರ್ಡ್ಅನ್ನು ಆಂಧ್ರ ಸರ್ಕಾರ ರದ್ದು ಪಡಿಸಿದೆ ಎಂಬುದು ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | EVM ಬದಲು ಬ್ಯಾಲೆಟ್ ಪೇಪರ್ ಬೆಸ್ಟ್ ಅಂದ್ರಾ ಪ್ರಧಾನಿ ಮೋದಿ?

