FACT CHECK | EVM ಬದಲು ಬ್ಯಾಲೆಟ್ ಪೇಪರ್ ಬೆಸ್ಟ್ ಅಂದ್ರಾ ಪ್ರಧಾನಿ ಮೋದಿ?
ಮಹಾರಾಷ್ಟ್ರ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಬಳಿಕ ಮತಯಂತ್ರದ ಬಗ್ಗೆ ಹೆಚ್ಚಿನ ಚರ್ಚೆಗಳು ಆರಂಭವಾಗಿವೆ. ವಿರೋಧ ಪಕ್ಷಗಳು ಮತಯಂತ್ರದ ಬದಲಾಗಿ ಹಳೆಯ ಪದ್ಧತಿಯಾದ ಬ್ಯಾಲೆಟ್ ಪೇಪರ್ ಗಳನ್ನೇ ತರಬೇಕು ಎಂಬಂತೆ ಆಗ್ರಹಿಸುತ್ತಿವೆ.
ಇದರ ಮಧ್ಯೆ ಮತಪತ್ರದ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ ಎಂಬಂತೆ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. 30 ಸೆಕೆಂಡಿನ ಈ ವೀಡಿಯೋದಲ್ಲಿ ಮುಂದುವರಿದ ದೇಶಗಳಲ್ಲೂ ಬ್ಯಾಲೆಟ್ ಪೇಪರ್ ಗಳನ್ನೇ ಬಳಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಹೇಳುವುದು ಕೇಳಬಹುದು.

ಇದೇ ರೀತಿಯ ಹೇಳಿಕೆಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್ನಲ್ಲಿ ಸರ್ಚ್ ಮಾಡಿದಾಗ, ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿರುವುದನ್ನು ಲಭ್ಯವಾಗಿದೆ. ನಂತರ ಸೋಶಿಯಲ್ ಮೀಡಿಯಾದಲ್ಲಿ ಪರಿಶೀಲಿಸಿದಾಗ ಟ್ವೀಟ್ವೊಂದು ಲಭ್ಯವಾಗಿದೆ.
ರಾಜ್ಯಸಭೆ ಸಂಸದ ಸಂಜಯ್ ರಾವತ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸುವ ಫೆಬ್ರವರಿ 15, 2024ರ ಬಿಜೆಪಿ ಮಹಾರಾಷ್ಟ್ರ ಖಾತೆಯಲ್ಲಿ ಹಂಚಿಕೊಂಡ ಟ್ವೀಟ್ ಲಭ್ಯವಾಗಿದೆ. ಇದರಲ್ಲಿ ಹೀಗೆ ಹೇಳಲಾಗಿದೆ. “ಅರೆಬೆಂದ ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಜನರನ್ನು ‘ಮೂರ್ಖ ಮಂತ್ರಿ’ ಎಂದು ಭಾವಿಸಬೇಡಿ. ಸಂಪೂರ್ಣ ವೀಡಿಯೋವನ್ನು ವೀಕ್ಷಿಸಿ” ಎಂದು ಅದರಲ್ಲಿ ಬರೆಯಲಾಗಿದೆ.
ವೈರಲ್ ಹೇಳಿಕೆಯಲ್ಲಿ ಬಳಸಲಾದ ವೀಡಿಯೋದ ಮೂಲ ಆವೃತ್ತಿ ಲಭ್ಯವಾಗಿದೆ. “ನಮ್ಮ ದೇಶ ಬಡವಾಗಿದೆ ಎಂದು ಕೆಲವರು ಹೇಳುತ್ತಾರೆ. ಜನರು ಅನಕ್ಷರಸ್ಥರು. ಜನರಿಗೆ ಗೊತ್ತಿಲ್ಲ. ವಿಶ್ವದ ವಿದ್ಯಾವಂತ ದೇಶಗಳು ಸಹ ಚುನಾವಣೆಗಳು ನಡೆದಾಗ ಮತಪತ್ರಗಳಲ್ಲಿ ತಮ್ಮ ಹೆಸರುಗಳನ್ನು ಮುದ್ರೆ ಹಾಕುತ್ತವೆ, ಯುನೈಟೆಡ್ ಸ್ಟೇಸ್ಟ್ಸ್ ನಲ್ಲಿಯೂ ಸಹ ಇದು ನಡೆದಿದೆ.. ಇದು ಹಿಂದೂಸ್ತಾನ, ಇದನ್ನು ನೀವು ಅನಕ್ಷರಸ್ಥರು, ಬಡವರು ಎಂದು ಕರೆಯುತ್ತೀರಿ, ಆದರೆ ಗುಂಡಿ ಒತ್ತುವ ಮೂಲಕ ಹೇಗೆ ಮತ ಚಲಾಯಿಸಬೇಕೆಂದು ತಿಳಿದಿದೆ. ಭಾರತದ ಜನರ ಶಕ್ತಿಯನ್ನು ಕಡೆಗಣಿಸಬೇಡಿ. ಪ್ರಾಮಾಣಿಕತೆಯ ಮಾರ್ಗವಿದೆ ಎಂದು ನಾನು ಅರಿತುಕೊಂಡ ನಂತರ, ನನ್ನ ದೇಶದ ಕಡು ಬಡವರು ಸಹ ನಡೆಯುತ್ತಿದ್ದಾರೆ.
ಇದರಿಂದ, ವೈರಲ್ ಹೇಳಿಕೆಯಲ್ಲಿ ಮೋದಿಯವರ ಭಾಷಣವನ್ನು ಇಷ್ಟು ಮಾತ್ರ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಇದರಲ್ಲಿ “ವಿಶ್ವದ ವಿದ್ಯಾವಂತ ದೇಶಗಳು ಸಹ ಚುನಾವಣೆಗಳು ನಡೆದಾಗ, ಇಂದಿಗೂ ಅಮೆರಿಕದಲ್ಲಿಯೂ ಸಹ ಮತಪತ್ರದಲ್ಲಿ ಹೆಸರನ್ನು ಓದುತ್ತವೆ ಮತ್ತು ಮುದ್ರೆ ಹಾಕುತ್ತವೆ” ಎಂದಿದೆ.
ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದ ವೇದಿಕೆಯ ಮೇಲೆ ‘ಪರಿವರ್ತನ ಮಹಾ ರ್ಯಾಲಿ’ ಎಂಬ ಪದಗಳಿವೆ ಮತ್ತು ಅದರ ಕೆಳಗೆ ಡಿಸೆಂಬರ್ 3, 2016 ಎಂದು ಬರೆಯಲಾಗಿದೆ. ಡಿಸೆಂಬರ್ 3, 2016 ರಂದು ಭಾರತೀಯ ಜನತಾ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾದ ‘ಉತ್ತರ ಪ್ರದೇಶದ ನ್ಯೂ ಮೊರಾದಾಬಾದ್ ನಲ್ಲಿ ಪರಿವರ್ತನ ರಾಲಿಯಲ್ಲಿ ಪ್ರಧಾನಿ ಮೋದಿಯವರ ಭಾಷಣ’ ಎಂಬ ಶೀರ್ಷಿಕೆಯಲ್ಲಿ 44 ನಿಮಿಷ, 39 ಸೆಕೆಂಡುಗಳ ವೀಡಿಯೋ ಪತ್ತೆಯಾಗಿದೆ. ಮೋದಿ ಭಾಷಣದ ವೈರಲ್ ಭಾಗವನ್ನು ನೀವು 37ನೇ ನಿಮಿಷದಲ್ಲಿ ವೀಕ್ಷಿಸಬಹುದು.
ಡಿಸೆಂಬರ್ 3, 2016 ರಂದು ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದ ಪರಿವರ್ತನ ರಾಲಿಯ ವೀಡಿಯೋವನ್ನು ಪ್ರಧಾನಿ ನರೇಂದ್ರ ಮೋದಿಯವರ ಯೂಟ್ಯೂಬ್ ಚಾನೆಲ್ ನಲ್ಲೂ ವೀಕ್ಷಿಸಬಹುದು. ವೈರಲ್ ವಿಡಿಯೋದ ಭಾಷಣದ ಭಾಗವನ್ನು 55 ನಿಮಿಷಗಳ ನಂತರ ವೀಕ್ಷಿಸಬಹುದು.
ಈ ಎರಡೂ ವಿಡಿಯೋಗಳನ್ನು ಗಮನಿಸಿದಾಗ, ದೇಶದ ಜನರನ್ನು ಹೊಗಳಿದ ಪ್ರಧಾನಿ ಮೋದಿ ಅವರು ವಿಶ್ವದ ಇತರ ದೇಶಗಳು ಬ್ಯಾಲೆಟ್ ಪೇಪರ್ ಮೂಲಕ ಮತ ಚಲಾಯಿಸಿದರೆ, ನಮ್ಮ ದೇಶದ ಜನರು ಇವಿಎಂ ಮೂಲಕ ಮತ ಚಲಾಯಿಸುತ್ತಾರೆ ಎಂದು ಹೇಳಿರುವುದು ಸ್ಪಷ್ಟವಾಗುತ್ತದೆ. ಪ್ರಧಾನಿ ಮೋದಿ ಇವಿಎಂ ಬಳಕೆಯ ಪರವಾಗಿ ಮಾತನಾಡಿದ್ದು, ಇದರ ಅಪೂರ್ಣ ವಿಡಿಯೋವನ್ನು ತಿರುಚಿ ಹಂಚಿಕೊಳ್ಳುವ ಮೂಲಕ ಪ್ರಧಾನಿ ಮೋದಿಯವರು ಇವಿಎಂಗಳ ವಿರುದ್ಧ ಮಾತಾಡಿದ್ದಾರೆ ಎಂಬ ರೀತಿಯಲ್ಲಿ ವೈರಲ್ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿಯವರು ಇವಿಎಂ ಪರವಾಗಿ ಮಾತನಾಡಿದ್ದಾರೆಯೇ ಹೊರತು ಇವಿಎಂಗಳನ್ನು ವಿರೋಧಿಸಿ ಮಾತಾಡಿಲ್ಲ. ವೈರಲ್ ವಿಡಿಯೋವನ್ನು ಮೂಲ ವಿಡಿಯೋದಿಂದ ಕತ್ತರಿಸಿ ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಂಗ್ಲಾ ಮುಸ್ಲಿಂ ಯುವಕರಿಂದ ಹಿಂದೂಗಳ ಹತ್ಯಾಕಾಂಡ ನಡೆದಿದೆ ಎಂಬುದು ನಿಜವೇ?


