ನೆಹರು 14 ನಿಮಿಷಗಳ ಕಾಲ ಜೈಲಿನಲ್ಲಿದ್ದರೂ… ಎಂದ ಉದ್ಧವ್ ಠಾಕ್ರೆಗೆ ಫುಲ್ ಕ್ಲಾಸ್ ಕೊಟ್ಟ ನೆಟ್ಟಿಗರು

ಸಾವರ್ಕರ್ ರವರು 14 ವರ್ಷ ಜೈಲಿನಲ್ಲಿ ಕಳೆದಿರುವಾಗ, ನೆಹರು 14 ನಿಮಿಷಗಳ ಕಾಲ ಜೈಲಿನಲ್ಲಿದ್ದರೂ ಸಹ ನಾನು ಅವರನ್ನು ವೀರ ಎಂದು ಕರೆಯುತ್ತಿದ್ದೆ ಎಂದು ಹೇಳುವ ಮೂಲಕ ತಮ್ಮ ಅಜ್ಞಾನ ಪ್ರದರ್ಶಿಸಿದ್ದ ಮಹಾರಾಷ್ಟ್ರದ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ನೆಟ್ಟಿಗರು ಫುಲ್ ಕ್ಲಾಸ್ ಕೊಟ್ಟಿದ್ದಾರೆ.

ಜವಾಹರಲಾಲ್ ನೆಹರೂ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಒಂಬತ್ತು ಬಾರಿ ಜೈಲಿನಲ್ಲಿದ್ದರು ಮತ್ತು 3259 ದಿನಗಳ ಕಾಲ ಜೈಲಿನಲ್ಲಿದ್ದರು.
1 ನೇ ಅವಧಿ – 88 ದಿನಗಳು
2 ನೇ ಅವಧಿ – 266 ದಿನಗಳು
3 ನೇ ಅವಧಿ – 12 ದಿನಗಳು
4 ನೇ ಅವಧಿ – 181 ದಿನಗಳು
5 ನೇ ಅವಧಿ – 100 ದಿನಗಳು
6 ನೇ ಅವಧಿ – 614 ದಿನಗಳು
7 ನೇ ಅವಧಿ – 558 ದಿನಗಳು
8 ನೇ ಅವಧಿ – 399 ದಿನಗಳು
9 ನೇ ಅವಧಿ – 1041 ದಿನಗಳು

ಎಂದು ಟ್ವೀಟ್ ಮಾಡುವ ಮೂಲಕ ತುಂಬಾ ಸರಳವಾಗಿ ಹರಿಣಿ ಎಂಬುವವರು ಉತ್ತರ ನೀಡಿದ್ದಾರೆ.

ಠಾಕ್ರೆಯವರೆ ನಿಮ್ಮನ್ನು ಮುಜುಗರಗೊಳಿಕೊಳ್ಳುವ ಮೊದಲು ಸ್ವಲ್ಪ ಇತಿಹಾಸವನ್ನು ಓದಿ.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನೆಹರೂ ಒಂಬತ್ತು ಬಾರಿ ಜೈಲಿನಲ್ಲಿದ್ದರು ಮತ್ತು 3259 ದಿನಗಳ ಕಾಲ ಅಂದರೆ 4692960 ನಿಮಿಷಗಳ ಕಾಲ ಜೈಲಿನಲ್ಲಿದ್ದರು ಮತ್ತು ಸೊನ್ನೆ ಕ್ಷಮಾಪಣಾ ಅರ್ಜಿಗಳನ್ನು ಬರೆದರು ಎಂದು ಹಸೀಬಾ ಎಂಬುವವರು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನೆಹರೂ 9 ಬಾರಿ ಜೈಲುವಾಸ ಅನುಭವಿಸಿದರೆ ಸಾವರ್ಕರ್ ಕಲಾಪಾನಿಯಲ್ಲಿದ್ದಾಗ 6 ಬಾರಿ ಕ್ಷಮಾಪಣಾ ಅರ್ಜಿಗಳನ್ನು ಬ್ರಿಟೀಷರಿಗೆ ಬರೆದರು. ಇದರಿಂದ ಆರಂಭಿಕ ಬಿಡುಗಡೆ ಸಿಕ್ಕಿತು. ಬ್ರಿಟಿಷರು ಕಡ್ಡಾಯ ನಿರುದ್ಯೋಗಕ್ಕಾಗಿ ಸಾವರ್ಕರ್ 60ರೂ ಸ್ಟೈಫಂಡ್ ಪಾವತಿಸಿದ್ದಾರೆ ಎಂದು ಆರ್ಯ ಎಂಬುವವರು ಟ್ವೀಟ್ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights